ETV Bharat / state

ಅನೈತಿಕ ಸಂಬಂಧದ ಕಿರಿಕ್​, ಬಾಮೈದನಿಂದಲೇ ಕೊಲೆಯಾದ ಕನ್ನಡಪರ ಹೋರಾಟಗಾರ - ಕನ್ನಡಪರ ಸಂಘಟನೆ ಹೋರಾಟಗಾರ

ಗಂಡ ಹೆಂಡತಿ ನಡುವಿನ ಜಗಳ ವಿಕೋಪಕ್ಕೆ ತಿರುಗಿ, ಬಾಮೈದನಿಂದಲೇ ಕನ್ನಡಪರ ಸಂಘಟನೆ ಹೋರಾಟಗಾರ ಕಮ್​ ರೌಡಿಶೀಟರ್ ಸಾವನ್ ವಾಗ್ಲೆ, ಕೊಲೆಯಾಗಿರುವ ಘಟನೆ ಬೀದರ್​ನಲ್ಲಿ ನಡೆದಿದೆ.

ಸಾವನ್ ವಾಗ್ಲೆ
author img

By

Published : Sep 24, 2019, 4:49 PM IST

ಬೀದರ್: ಗಂಡ ಹೆಂಡತಿ ನಡುವಿನ ಜಗಳ ವಿಕೋಪಕ್ಕೆ ತಿರುಗಿ, ಬಾಮೈದನಿಂದಲೇ ವ್ಯಕ್ತಿ ಕೊಲೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಬಾಮೈದನಿಂದಲೇ ಕೊಲೆಯಾದ ಕನ್ನಡಪರ ಹೋರಾಟಗಾರ ಕಮ್​ ರೌಡಿಶೀಟರ್

ಕನ್ನಡಪರ ಸಂಘಟನೆಯೊಂದರ ಜಿಲ್ಲಾಧ್ಯಕ್ಷ ಸಾವನ್ ವಾಗ್ಲೆ, ಕೊಲೆಯಾದ ವ್ಯಕ್ತಿ. ಕಳೆದ ಒಂದು ವಾರದ ಹಿಂದೆ ನಗರದ ಲೇಬರ್ ಕಾಲೋನಿಯಲ್ಲಿರುವ ಸಾವನ್ ವಾಗ್ಲೆಯ ಪತ್ನಿ ವಸಂತ ಮಾಲಾ ಮನೆ ಎದುರು ಮಾತು ಮಾತಿನಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿದೆ. ಪರಸ್ತ್ರೀಯರೊಂದಿಗೆ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಹೆಂಡತಿ ಜಗಳ ಆರಂಭಿಸಿದ್ದಾಳೆ. ಈ ವೇಳೆ ಸ್ಥಳದಲ್ಲೇ ಇದ್ದ ವಸಂತ ಮಾಲಾ ಅವರ ಸಹೋದರ ಪ್ರವೀಣ, ಕಬ್ಬಿಣದ ಸಲಾಕೆಯಿಂದ ಸಾವನ್ ವಾಗ್ಲೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಸಾವನ್ ವಾಗ್ಲೆಯನ್ನು ಹೈದ್ರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 5 ಜನರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಇನ್ನು ಕೊಲೆಯಾದ ಸಾವನ್​ ವಾಗ್ಲೆ, ರೌಡಿಶೀಟರ್ ಆಗಿದ್ದು, ಜಿಲ್ಲೆಯ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

Intro:ಹೆಂಡ್ತಿ ಸಹೊದರನ ಹೊಡೆತಕ್ಕೆ ಹೆಣವಾದ ಹೋರಾಟಗಾರ...!

ಬೀದರ್:
ಗಂಡ ಹೆಂಡ್ತಿ ನಡುವ ಜಗಳ ವಿಕೋಪಕ್ಕೆ ತಿರುಗಿ ಹೆಂಡ್ತಿ ತಮ್ಮನಿಂದಲೆ ಹಲ್ಲೆಗೊಳಗಾದ ಬೀದರ್ ನ ಕನ್ನಡಪರ ಸಂಘಟನೆ ಹೊರಾಟಗಾರ ಕೊಲೆಯಾಗಿರುವ ಘಟನೆ ನಡೆದಿದೆ‌.

ಕನ್ನಡಪರ ಸಂಘಟನೆಯೊಂದರ ಜಿಲ್ಲಾಧ್ಯಕ್ಷ ಸಾವನ ವಾಗಲೆ ಕೊಲೆಯಾದವರು. ಕಳೇದ ಒಂದು ವಾರದ ಹಿಂದೆ ನಗರದ ಲೇಬರ್ ಕಾಲೋನಿಯಲ್ಲಿರುವ ಹೆಂಡ್ತಿ ವಸಂತಮಾಲೆ ಅವರ ಮನೆಯ ಎದುರು ಮಾತು ಮಾತಿನಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿದೆ. ವಿವಿಧ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಹೆಂಡ್ತಿ ಜಗಳ ಆರಂಭಿಸಿದ್ದಾಳೆ. ಈ ವೇಳೆಯಲ್ಲಿ ಸ್ಥಳದಲ್ಲೆ ಇದ್ದ ವಸಂತ ಮಾಲಾ ಅವರ ಸಹೋದರ ಪ್ರವೀಣ ಕಬ್ಬಿಣದ ಸಲಾಕೆಯಿಂದ ಸಾವನ್ ವಾಗ್ಲೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸಾವನ್ ವಾಗ್ಲೆ ಅವರನ್ನು ಹೈದ್ರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾನೆ ಎನ್ನಲಾಗಿದ್ದು ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 5 ಜನರ ವಿರುದ್ಧ ಕೋಲೆ ಪ್ರಕರಣ ದಾಖಲಾಗಿದೆ.

ಕೋಲೆಯಾದ ಸಾವನ ವಾಗ್ಲೆ ರೌಡಿ ಶಿಟರ್ ಆಗಿದ್ದು ವಿವಿಧ ಠಾಣೆಯಲ್ಲಿ 20 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.Body:AnilConclusion:Bidar
ETV Bharat Logo

Copyright © 2025 Ushodaya Enterprises Pvt. Ltd., All Rights Reserved.