ETV Bharat / state

ಬಿಜೆಪಿ ಲೂಟಿ ಸರ್ಕಾರ, ಕಿತ್ತು ಹಾಕಿ: ಪ್ರಿಯಾಂಕಾ ಗಾಂಧಿ - ಈಟಿವಿ ಭಾರತ ಕನ್ನಡ

40 ಪರ್ಸೆಂಟ್ ಸರ್ಕಾರ ಎಂಬ ಕಳಂಕವನ್ನು ಬಿಜೆಪಿ ಕರ್ನಾಟಕಕ್ಕೆ ತಂದಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು.

ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ
author img

By

Published : May 4, 2023, 9:02 AM IST

ಬೀದರ್: ಕರ್ನಾಟಕದ ಬಿಜೆಪಿ ಸರ್ಕಾರ ಲೂಟಿ ಸರ್ಕಾರವಾಗಿದ್ದು, ಇದನ್ನು ಕಿತ್ತು ಹಾಕಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಂಕಾ ಗಾಂಧಿ ಹೇಳಿದರು. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರದ ಲೂಟಿ ಜನಸಾಮಾನ್ಯರ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸರ್ಕಾರ ಬಂದಾಗಿನಿಂದ ದುರಾಸೆಯಲ್ಲೇ ತೊಡಗಿ ಅಭಿವೃದ್ಧಿ ಮರೆತಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಾಗಿರುವ ಅಭಿವೃದ್ಧಿ ಕುರಿತು ಚುನಾವಣೆ ಎದುರಿಸುವ ಧೈರ್ಯ ಬಿಜೆಪಿಗಿಲ್ಲ. ಹೀಗಾಗಿ ಧರ್ಮ, ಜಾತಿಗಳ ವಿಷಯ ಚರ್ಚೆಗೆ ತಂದು ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಕನಸಿದೆ ಎಂದು ಮೋದಿ ಹೇಳುತ್ತಿದ್ದಾರೆ. ಹಾಗಾದರೆ ರಾಜ್ಯದಲ್ಲಿ ನಿಮ್ಮ ಸರ್ಕಾರವೇ ಇತ್ತು, ಲೂಟಿ ಮಾಡುವುದಕ್ಕೆ ಬ್ರೇಕ್ ಹಾಕಿ ಅಭಿವೃದ್ಧಿ ಮಾಡುವಂತೆ ಏಕೆ ಹೇಳಲಿಲ್ಲ ಎಂದು ಪ್ರಶ್ನಿಸಿದರು. ದಿನಬಳಕೆ ಪದಾರ್ಥಗಳ ಬೆಲೆಗಳೆಲ್ಲವೂ ಗಗನಕ್ಕೇರಿದೆ. ಇದು ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದರೂ ಈವರೆಗೆ ಅದಕ್ಕೆ ಮೋದಿ ಉತ್ತರ ಕೊಟ್ಟಿಲ್ಲ. ರಾಜ್ಯದ ಬಿಜೆಪಿ ಶಾಸಕರೊಬ್ಬರ ಮನೆಯಲ್ಲಿ 8 ಕೋಟಿ ರೂ ಹಣ ಸಿಕ್ಕಿದೆ. ಯಾವುದೇ ತನಿಖೆ ಮಾಡಲಿಲ್ಲ ಎಂದರು.

ರೈತರ ಸಮಸ್ಯೆ ಆಲಿಸಿದ ಪ್ರಿಯಂಕಾ: ಪ್ರಿಯಂಕಾ ಗಾಂಧಿ ರೈತರ ಸಮಸ್ಯೆ ಆಲಿಸಿದರು. ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ಕೆಳ ಬಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಅವರಿಂದ ಮನವಿ ಸ್ವೀಕರಿಸಿ, ಬೇಡಿಕೆ ಆಲಿಸಿದ ನಂತರ ವೇದಿಕೆಗೆ ಬಂದು ಭಾಷಣ ಮುಂದುವರೆಸಿದರು. ಕಾರಂಜಾ ಸಂತ್ರಸ್ತರು ಹಲವು ತಿಂಗಳಿನಿಂದ ಹೋರಾಟ ಮಾಡುತ್ತಿದ್ದರೂ ಒಬ್ಬ ಮಂತ್ರಿ ಬಂದು ಸಮಸ್ಯೆ ಆಲಿಸಿಲ್ಲ. ಇಂಥ ಸರ್ಕಾರವನ್ನು ಕಿತ್ತು ಹಾಕಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಸಮಾಜದ ಶಾಂತಿ ಕದಡುವ, ಕೋಮುಗಲಭೆ ಸೃಷ್ಟಿಸುವ ಸಂಘಟನೆ ನಿಷೇಧ ಮಾಡಿದರೆ ತಪ್ಪೇನು?: ಸಿದ್ದರಾಮಯ್ಯ

ಅಭ್ಯರ್ಥಿಗಳಾದ ಈಶ್ವರ ಖಂಡ್ರೆ ಭಾಲ್ಕಿ, ರಾಜಶೇಖರ ಪಾಟೀಲ್ ಹುಮನಾಬಾದ್, ರಹೀಮ್ ಖಾನ್ ಬೀದರ್, ಅಶೋಕ್ ಖೇಣಿ, ಎಐಸಿಸಿ ಕಾರ್ಯದರ್ಶಿ ಶ್ರೀಧರ ಬಾಬು, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಡಾ.ಚಂದ್ರಶೇಖರ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಮುಖರಾದ ಸಂಜಯ ಖೇಣಿ, ಅಮೃತರಾವ್ ಚಿಮಕೋಡೆ, ಗೀತಾ ಚಿದ್ರಿ, ಮೀನಾಕ್ಷಿ ಸಂಗ್ರಾಮ ಇತರರಿದ್ದರು.

ಇದನ್ನೂ ಓದಿ: ಕಾಂಗ್ರೆಸ್-ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು : ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.