ETV Bharat / state

ಮುಂಬೈನ ಪ್ರಭು ಚವ್ಹಾಣಗೆ ಒಲಿಯಲಿದೆಯಾ ಮಂತ್ರಿ ಭಾಗ್ಯ...?

ಮಹಾರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕೀಯದಲ್ಲಿ ಎಂಟ್ರಿ ಕೊಟ್ಟು ಬಿಜೆಪಿಯಿಂದ ಮೂರು ಬಾರಿ ಶಾಸಕರಾದ ಪ್ರಭು ಚವ್ಹಾಣ ಈಗ ಮಂತ್ರಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಂಬೈನ ಪ್ರಭು ಚವ್ಹಾಣಗೆ ಒಲಿಯಲಿದೆಯಾ ಮಂತ್ರಿ ಭಾಗ್ಯ...? ಎಂಬ ಚರ್ಚೆಗಳು ಸಾಗಿವೆ.

ಪ್ರಭು ಚವ್ಹಾಣ
author img

By

Published : Jul 27, 2019, 2:20 PM IST

ಬೀದರ್: ಮಹಾರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕೀಯದಲ್ಲಿ ಎಂಟ್ರಿ ಕೊಟ್ಟು ಬಿಜೆಪಿಯಿಂದ ಮುರು ಬಾರಿ ಶಾಸಕರಾದ ಪ್ರಭು ಚವ್ಹಾಣ ಈಗ ಮಂತ್ರಿಯಾಗಲಿದ್ದಾರೆ ಎಂಬ ಚರ್ಚೆಗಳು ವ್ಯಾಪಕವಾಗಿ ಹರಿದಾಡುತ್ತಿವೆ.

ಜಿಲ್ಲೆಯ ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಸತತ ಮೂರು ಬಾರಿ ಶಕ್ತಿ ಸೌಧಕ್ಕೆ ಆಯ್ಕೆಯಾದ ಪ್ರಭು ಚವ್ಹಾಣ, ಈಗ ಬಿಎಸ್ ವೈ ಸಂಪುಟಕ್ಕೆ ಸೇರಲಿದ್ದಾರೆ ಎನ್ನಲಾಗ್ತಿದೆ. ಮಹಾರಾಷ್ಟ್ರದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಕೆಲಸ ಮಾಡ್ತಿದ್ದ ಪ್ರಭು ಚವ್ಹಾಣ ಬಿಜೆಪಿ ಹಿರಿಯ ನಾಯಕ ದಿ.ಗೋಪಿನಾಥ್ ಮುಂಡೆ ಅವರ ಶಿಷ್ಯರಾಗಿದ್ದಕ್ಕೆ 2008 ರಲ್ಲಿ ಔರಾದ್ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್​ ನೀಡಿತ್ತು.

prabhu chwhan and yadiyurappa
ಯಡಿಯೂರಪ್ಪ ಮತ್ತು ಪ್ರಭು ಚವ್ಹಾಣ

2013 ರಲ್ಲಿ ಬಿಜೆಪಿಗೆ ಪಕ್ಷ ನಿಷ್ಠೆ ತೋರಿದ ಪ್ರಭು ಚವ್ಹಾಣ, ಯಡಿಯೂರಪ್ಪ ಕಟ್ಟಿದ ಕೆಜೆಪಿಗೆ ಹೊಗದೇ ಪಕ್ಷದಲ್ಲೆ ಉಳಕೊಂಡು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದ್ರು. ನಂತರ 2018 ರ ಚುನಾವಣೆಯಲ್ಲೂ ಗೆಲುವು ಸಾಧಿಸಿ ಸರಣಿ ಗೆಲುವಿನ ಸಾಧನೆ ಬೆನ್ನಿಗಿಟ್ಟಕೊಂಡು, ಈಗ ಬಿಎಸ್ ವೈ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳಿವೆ.

ಚಿಂಚೋಳಿ ಆಪರೇಷನ್ ನಲ್ಲಿ ಮಹತ್ವದ ಪಾತ್ರ:

ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಾಗಿನಿಂದ ಪ್ರಭು ಚವ್ಹಾಣ ಅವರು ಕಾಂಗ್ರೆಸ್ ಶಾಸಕರಾಗಿದ್ದ ಡಾ‌.ಉಮೇಶ ಜಾಧವ್ ಅವರನ್ನು ಪಕ್ಷಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಉಮೇಶ ಜಾಧವ್ ಬಿಜೆಪಿ ಸೇರ್ಪಡೆಯಾಗಿ ಲೋಕಸಭೆ ಸದಸ್ಯರಾದ್ರು. ಈಗ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದೆ. ಹಿರಿಯ ಶಾಸಕರಾದ ಪ್ರಭು ಚವ್ಹಾಣಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಗ್ಯಾರಂಟಿ ಎಂಬ ಮಾತು ಎಲ್ಲೆಡೆ ಕೇಳಿ ಬರ್ತಿದೆ.

Intro:ಮುಂಬೈನ ಮುಂಡೆ ಶಿಷ್ಯ ಪ್ರಭು ಚವ್ಹಾಣಗೆ ಒಲಿಯಲಿದೆಯಾ ಮಂತ್ರಿ ಭಾಗ್ಯ...?

ಬೀದರ್:
ಮಹಾರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕೀಯದಲ್ಲಿ ಎಂಟ್ರಿ ಕೊಟ್ಟು ಬಿಜೆಪಿಯಿಂದ ಹೈಟ್ರೀಕ್(ಮೂರು ಬಾರಿ) ಶಾಸಕರಾದ ಪ್ರಭು ಚವ್ಹಾಣ ಈಗ ಮಂತ್ರಿಯಾಗಲಿದ್ದಾರೆ ಎಂಬ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ.

ಜಿಲ್ಲೆಯ ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಸತತ ಮೂರು ಬಾರಿ ಶಕ್ತಿ ಸೌಧಕ್ಕೆ ಆಯ್ಕೆಯಾದ ಪ್ರಭು ಚವ್ಹಾಣ ಈಗ ಬಿಎಸ್ ವೈ ಸಂಪುಟದಲ್ಲಿ ಸೇರಲಿದ್ದಾರೆ ಎಂಬ ಮಾತು ಭಾರಿ ಚರ್ಚೆಯಲ್ಲಿದೆ. ಮಹಾರಾಷ್ಟ್ರ ದ ಮುಂಬೈ ಮಹಾನಗರದ ಠಾಣೆ ಭಾಗದಲ್ಲಿ ಉದ್ಯಮಿಯಾಗಿ ಅಲ್ಲದೆ ಅಲ್ಲಿನ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಕೆಲಸ ಮಾಡ್ತಿದ್ದ ಪ್ರಭು ಚವ್ಹಾಣ ಬಿಜೆಪಿ ಹಿರಿಯ ನಾಯಕ ದಿ.ಗೋಪಿನಾಥ್ ಮುಂಡೆ ಅವರ ಶಿಷ್ಯರಾಗಿದಕ್ಕೆ 2008 ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಔರಾದ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೇಟ್ ಗಿಟ್ಟಿಸಿಕೊಂಡು ಶಾಸಕರಾದರು.

2013 ರಲ್ಲಿ ಬಿಜೆಪಿಗೆ ಪಕ್ಷ ನಿಷ್ಠೆ ತೊರಿದ ಪ್ರಭು ಚವ್ಹಾಣ ಅವರು ಬಿಜೆಪಿಯಿಂದ ಹೊರ ನಡೆದ ಬಿ.ಎಸ್ ಯಡಿಯೂರಪ್ಪ ಕಟ್ಟಿದ ಕೆಜೆಪಿಗೆ ಹೊಗದೆ ಪಕ್ಷದಲ್ಲೆ ಉಳಕೊಂಡು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗ್ತಾರೆ. ನಂತರ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಯಡಿಯೂರಪ್ಪ ಅವರ ಪಕ್ಕಾ ಶಿಷ್ಯರಾಗಿ ರಾಜಕೀಯವಾಗಿ ಬಲಿಷ್ಠಗೊಂಡ ಚವ್ಹಾಣ ಅವರು 2018 ರ ಚುನಾವಣೆಯಲ್ಲೂ ಗೆಲುವು ಸಾಧಿಸಿ ಸರಣಿ ಗೆಲುವಿನ ಸಾಧನೆ ಬೆನ್ನಿಗಿಟ್ಟಕೊಂಡು ಈಗ ಬಿಎಸ್ ವೈ ಸಂಪುಟದಲ್ಲಿ ಹಿರಿಯ ಶಾಸಕರ ಪಟ್ಟಿಯಲ್ಲಿ ಸೇರಿದಕ್ಕೆ ಸಚಿವ ಸ್ಥಾನ ಸಿಗಲಿದೆ ಎಂದು ಚವ್ಹಾಣ ಬೆಂಬಲಿಗರು ಅಭಿಪ್ರಾಯಪಟ್ಟಿದ್ದಾರೆ.

ಎಕೈಕ ಬಿಜೆಪಿ ಶಾಸಕ:

ಜಿಲ್ಲಾವಾರು ಸಚಿವ ಸಂಪುಟಕ್ಕೆ ಆದ್ಯತೆ ನೀಡಿದಲ್ಲಿ ಬೀದರ್ ಜಿಲ್ಲೆಯ ಒಟ್ಟು ಆರು ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿ ಎಕೈಕ ಶಾಸಕರಾಗಿ ಪ್ರಭು ಚವ್ಹಾಣ ಇರುವುದು ಸಂಪುಟಕ್ಕೆ ಸೇರಲು ಅರ್ಹತೆ ಹೊಂದಿದ್ದಾರೆ. ಅಲ್ಲದೆ ಜಾತಿವಾರು ಸಂಪುಟ ವಿಸ್ತರಣೆ ಮಾಡಿದಲ್ಲಿ ಲಂಬಾಣಿ ಸಮುದಾಯಕ್ಕೆ ಸೇರಿದ ಹಿರಿಯ ಶಾಸಕ ಚವ್ಹಾಣ ಆಗಿರುವುದು ಪ್ಲಸ್ ಆಗಲಿದೆ.

ಚಿಂಚೋಳಿ ಆಪರೇಶನ್ ನಲ್ಲಿ ಮಹತ್ವದ ಪಾತ್ರ:

ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಾಗಿನಿಂದ ಪ್ರಭು ಚವ್ಹಾಣ ಅವರು ಕಾಂಗ್ರೆಸ್ ಶಾಸಕರಾಗಿದ್ದ ಡಾ‌.ಉಮೇಶ ಜಾಧವ್ ಅವರನ್ನು ಪಕ್ಷಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಉಮೇಶ ಜಾಧವ್ ಬಿಜೆಪಿ ಸೇರ್ಪಡೆಯಾಗಿ ಲೋಕಸಭೆ ಸದಸ್ಯರಾದ್ರು ಅಲ್ಲದೆ ಅವರ ಪುತ್ರ ಉಪ ಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿರುವುದು ರಾಜ್ಯ ಬಿಜೆಪಿಗೆ ಹೊಸ ಸ್ವರೂಪ ಬರೆದಿದೆ.

ಪೌರಾದೇವಿಯ ರಾಮರಾವ್ ಮಹಾರಾಜರ ಕೃಪೆ:

ಆಪರೇಶನ್ ಕಮಲದ ಭಾಗವಾದ ಡಾ. ಉಮೇಶ ಜಾಧವ್ ಅವರು ಮಹಾರಾಷ್ಟ್ರದ ಪೌರಾದೇವಿಯ ಲಂಬಾಣಿ ಸಮುದಾಯದ ಧರ್ಮಗುರು ಶ್ರೀ ರಾಮರಾವ್ ಮಹಾರಾಜರ ಮಾರ್ಗದರ್ಶನ ಪಡೆದು ಅಲ್ಲಿಂದ ನೇರವಾಗಿ ಮುಂಬೈ ಸೇರಿದ್ದರು. ಈ ವೇಳೆಯಲ್ಲಿ ಶಾಸಕ ಪ್ರಭು ಚವ್ಹಾಣ ಅವರ ರಾಜಕೀಯ ಗುರು ದಿ.ಗೋಪಿನಾಥ್ ಮುಂಡೆ ಅವರ ಪುತ್ರಿ ಸಚಿವೆ ಪಂಕಜಾ ಮುಂಡೆ ಅವರು ನೇತೃತ್ವ ವಹಿಸಿಕೊಂಡು ಚಿಂಚೋಳಿ ಆಪರೇಶನ್ ಕಮಲದ ಮುಂದುವರಿದ ಭಾಗ ಯಶಸ್ವಿಯಾಗಿ ನಿರ್ವಹಿಸಿದ್ದಾರೆನ್ನಲಾಗಿದ್ದು ಈ ಎಲ್ಲಾ ಬೆಳವಣಿಗೆಯಲ್ಲಿ ಸಮುದಾಯದ ಬೆಂಬಲದಿಂದ ಪ್ರಭು ಚವ್ಹಾಣ ಮುಂಚುಣಿ ವಹಿಸಿ ಮುಂಬೈಯಲ್ಲಿನ ನೆಟವರ್ಕ್ ಬಳಿಸಿಕೊಂಡು ರಾಜ್ಯ ಬಿಜೆಪಿಗೆ ಬಲ ತುಂಬುವ ಕೆಲಸ ಮಾಡಿದ್ದಾರೆ ಎಂಬುದು ಚವ್ಹಾಣ ಅಭಿಮಾನಿಗಳ ವಾದ.

ಈಗ ಪಕ್ಷ ಅಧಿಕಾರಕ್ಕೆ ಬಂದಿದೆ. ಹಿರಿಯ ಶಾಸಕ ಹಾಗೂ ಬಿಎಸ್ ವೈ ಆಪ್ತರು ಅಲ್ಲದೆ ಸರ್ಕಾರ ಅಧಿಕಾರಕ್ಕೆ ಬರಲು ಪೂರಕವಾಗಿ ದುಡಿದ ಪ್ರಭು ಚವ್ಹಾಣ ಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಗ್ಯಾರಂಟಿ ಎಂಬ ಮಾತು ಕೆಳಿ ಬರ್ತಿದೆ.

ಅಂತಿಮವಾಗಿ ಬಿಜೆಪಿ ಹೈ ಕಮಾಂಡ್ ಪ್ರಭು ಚವ್ಹಾಣ ಅವರನ್ನು ಗುರುತಿಸುತ್ತೊ ಅಥವಾ ನೋಡೊಣ ಎಂದು ಸುಮ್ಮನೆ ಇರಲು ಹೆಳುತ್ತೊ ಕಾದು ನೋಡಬೇಕು.Body:AnilConclusion:Bidar
ETV Bharat Logo

Copyright © 2024 Ushodaya Enterprises Pvt. Ltd., All Rights Reserved.