ETV Bharat / state

ದೇವರು, ಗೋಮಾತೆ, ಸಂತ ಸೇವಾಲಾಲ್ ಹೆಸರಿನಲ್ಲಿ ಪ್ರಭು ಚವ್ಹಾಣ್​ ಪ್ರಮಾಣವಚನ

2ನೇ ಬಾರಿ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಶಾಸಕ ಪ್ರಭು ಚವ್ಹಾಣ್ ದೇವರು, ಗೋಮಾತೆ ಹಾಗೂ ಸಂತ ಸೇವಾಲಾಲ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

Prabhu Chauhan take oath
ಪ್ರಮಾಣವಚನ ಸ್ವೀಕರಿಸಿದ ಪ್ರಭು ಚವ್ಹಾಣ್​
author img

By

Published : Aug 4, 2021, 4:42 PM IST

ಬೀದರ್: ಪ್ರಭು ಚವ್ಹಾಣ್​ ಎಂಬ ಹೆಸರಿನವನಾದ ನಾನು, ದೇವರು, ಗೋಮಾತೆ, ಸಂತ ಸೇವಾಲಾಲ್ ಹೆಸರಿನಲ್ಲಿ ಮಾಣ ಮಾಡುತ್ತೇನೆ... ಹೀಗೆ 2ನೇ ಬಾರಿ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಬೀದರ್ ಜಿಲ್ಲೆಯ ಔರಾದ್ (ಮೀಸಲು) ಕ್ಷೇತ್ರದ ಶಾಸಕ ಪ್ರಭು ಚವ್ಹಾಣ್​​ ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ಬೆಂಗಳೂರಿನ ರಾಜಭವನದಲ್ಲಿ ಸಿಎಂ ಬಸವರಾಜ್​​ ಬೊಮ್ಮಾಯಿ ಅವರ ಸಂಪುಟ ಸದಸ್ಯರಾಗಿ ಪ್ರಮಾಣವಚಣ ಸ್ವೀಕರಿಸಿದ ಪ್ರಭು ಚವ್ಹಾಣ್​​ ಅವರು ಲಂಬಾಣಿ ವೇಷ ಧರಿಸಿ ಪ್ರಮಾಣವಚನ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದರು.

ಔರಾದ್ ತಾಲೂಕಿನ ಘಮಸುಬಾಯಿ ತಾಂಡದಲ್ಲಿ ಮೊತಿಬಾಯಿ ಹಾಗು ಬಾಮಲಾ ಚವ್ಹಾಣ್​ ದಂಪತಿಯ ಮಗನಾಗಿ 6-6-1969 ರಲ್ಲಿ ಜನಿಸಿದರು. ಸಕ್ಕುಬಾಯಿ ಅವರೊಂದಿಗೆ ಮದುವೆಯಾದ ಪ್ರಭು ಚವ್ಹಾಣ್​ ಅವರಿಗೆ ಪ್ರತೀಕ ಹಾಗೂ ಪ್ರಿಯಾಂಕ ಎಂಬ ಇಬ್ಬರು ಮಕ್ಕಳಿದ್ದಾರೆ. ಮುಂಬೈ ಮೂಲದ ಉದ್ಯಮಿಯಾಗಿದ್ದ ಪ್ರಭು ಚವ್ಹಾಣ್​ 2008, 2013 ಹಾಗೂ 2018 ಮೂರು ಚುನಾವಣೆಯಲ್ಲಿ ಸತತವಾಗಿ ಗೆಲ್ಲುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದಾರೆ.

ಕಳೆದ ಬಿಎಸ್​​ವೈ ಸಂಪುಟದಲ್ಲಿ ಪಶು ಸಂಗೋಪನೆ, ಅಲ್ಪ ಸಂಖ್ಯಾತ ಕಲ್ಯಾಣ, ವಕ್ಫ್ ಮತ್ತು ಹಜ್ ಖಾತೆ ಅಲ್ಲದೆ ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಉಸ್ತುವಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಗೋ ಹತ್ಯೆ ನಿಷೇಧ ವಿಧೇಯಕ ಯಶಸ್ವಿಯಾಗಿ ಜಾರಿಗೆ ತಂದು ಬಿಜೆಪಿ ಪಾಳಯದಲ್ಲಿ ಪ್ರಬಲರು ಎಂದು ಬಿಂಬಿಸಿಕೊಂಡಿದ್ದರು.

ಸದ್ಯ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಎಸ್​​ವೈ ಸಂಪುಟದಿಂದ ಹೊರ ನಡೆದ ಚವ್ಹಾಣ್​​ ಅವರಿಗೆ ಘಟಾನುಘಟಿ ನಾಯಕರಿಗೆ ಸಚಿವ ಸ್ಥಾನ ಕೈ ತಪ್ಪಿದ ಬೆನ್ನಲ್ಲೇ ಅಚ್ಚರಿ ಎಂಬಂತೆ ಪ್ರಭು ಚವ್ಹಾಣ್​​ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಬೀದರ್​​ನಲ್ಲಿ ವಿಜಯೋತ್ಸವ:

ಪ್ರಭು ಚವ್ಹಾಣ್​​ 2ನೇ ಬಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಬೀದರ್ ಜಿಲ್ಲೆಯಲ್ಲಿ ಅವರ ಅಭಿಮಾನಿಗಳು, ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: 7 ಮಂದಿಗೆ ಕೊಕ್​​.. ಐವರು ಹೊಸ ಮುಖಗಳಿಗೆ ಮಣೆ: ಬಿಎಸ್​​ವೈ ಮುಂದೆ ಮಂಡಿಯೂರಿತೆ ಹೈಕಮಾಂಡ್!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.