ಬೀದರ್: ಅಪ್ರಾಪ್ತ ವಯಸ್ಕ ಬಾಲಕ ಬಾಲಕಿಗೆ ಬಾಲ್ಯ ವಿವಾಹ ಮಾಡುತ್ತಿದ್ದರ ಕುರಿತು ಖಚಿತ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಮದುವೆ ನಿಲ್ಲಿಸಿ ಬಾಲಕ ಬಾಲಕಿಯನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗದ್ಲೆಗಾಂವ ಗ್ರಾಮದಲ್ಲಿ ಗದ್ಲೆಗಾಂವ ಗ್ರಾಮದ ಬಾಲಕಿಯನ್ನು ಯಲ್ಲದಗುಂಡಿ ಗ್ರಾಮದ ಬಾಲಕನೊಂದಿಗೆ ಮದುವೆ ನಿಶ್ಚಯಿಸಿ ಮದುವೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮದುವೆಗಾಗಿ ಎಲ್ಲಾ ರೀತಿಯ ಸಲಕ ಸಿದ್ಧತೆ ಮಾಡಲಾಗಿತ್ತು. ಕೆಲವೆ ಕ್ಷಣದಲ್ಲಿ ಮದುವೆ ಆರತಕ್ಷತೆ ಕಾರ್ಯಕ್ರಮ ಮುಗಿಯುವ ಹಂತದಲ್ಲಿತ್ತು. ಆದರೆ ಗ್ರಾಮದಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ಬಗ್ಗೆ ಅಪರಿಚಿತರೊಬ್ಬರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಅಧಿಕಾರಿಗಳು ಮುಡಬಿ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಕುರಿತು ಖಚಿತ ಮಾಹಿತಿ ಪಡೆದು ಪಿಎಸ್‌ಐ ವಸೀಮ್ ಪಟೇಲ್ ನೇತೃತ್ವದಲ್ಲಿ ದಾಳಿ ನಡೆಸಿ ಮದುವೆ ತಡೆಯುವ ಮೂಲಕ ಬಾಲಕ,ಬಾಲಕಿಯನ್ನು ರಕ್ಷಿಸಿದ್ದಾರೆ. ಅಲ್ಲದೆ ಪಾಲಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ಬಾಲಕನಿಗೆ 21 ಹಾಗೂ ಬಾಲಕಿಗೆ18 ವರ್ಷ ತುಂಬುವವರೆಗೆ ಯಾವುದೇ ಕಾರಣಕ್ಕೂ ವಿವಾಹ ಮಾಡಬಾರದು. ಒಂದು ವೇಳೆ ಮದುವೆ ಮಾಡಿದ್ದು ಕಂಡು ಬಂದಲ್ಲಿ ಸಂಬಂಧಿತರ ಮೇಲೆ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿ ಪಡಿಸಲಾಗುವುದೆಂದು ಎಚ್ಚರಿಕೆ ನೀಡಿದರು.