ಬೀದರ್: ಮಾಹಾಮಾರಿ ಕೊರೊನಾ ವೈರಸ್ ಸೋಂಕು 11 ಜನರಲ್ಲಿ ದೃಢಪಡುತ್ತಿದ್ದಂತೆ ದಯವಿಟ್ಟು ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್ ಮನವಿ ಮಾಡಿಕೊಂಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊವಿಡ್-19 ಸೋಂಕಿತರು ನಗರದಲ್ಲಿ ಇರಬಹುದು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಈ ಭಯಾನಕ ವೈರಸ್ ನಿಯಂತ್ರಣಕ್ಕೆ ಲಾಕ್ಡೌನ್ ಹೇರಲಾಗಿದೆ. ಆದರೂ ಜನ ಮನೆಯಿಂದ ಹೊರ ಬರುತ್ತಿರುವುದು ಸರಿಯಾಗಿಲ್ಲ. ದೆಹಲಿಯ ನಿಜಾಮುದ್ದೀನ್ ಜಮಾತ್ನಲ್ಲಿ ಪಾಲ್ಗೊಂಡ ಒಟ್ಟು 27 ಜನರ ಪೈಕಿ 11 ಜನರಲ್ಲಿ ಸೋಂಕು ಕಂಡು ಬಂದಿದೆ ಎಂದರು.
ಈಗಾಗಲೇ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆದ್ರೆ ಅವರಲ್ಲಿ ಕೋವಿಡ್-19 ಸೋಂಕು ಇತ್ತಾ ಎಂಬುದು ಸ್ಪಷ್ಟವಾಗಿಲ್ಲ. ಅವರನ್ನು ಬೀದರ್ನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಫಲಿತಾಂಶ ಬಂದಿತ್ತು. ಆದ್ರೆ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಪಾಸಿಟಿವ್ ಬಂದಿದೆ. ಆದ್ರೆ ಈ ಕುರಿತು ಅಧಿಕೃತವಾಗಿ ಜಿಲ್ಲಾಧಿಕಾರಿಗಳು ಬಹಿರಂಗಪಡಿಸಲಿದ್ದಾರೆ ಎಂದು ತಿಳಿಸಿದ್ರು.