ಬೀದರ್: ದಸರಾ ಹಬ್ಬದ ನಿಮಿತ್ತ ತುಳಜಾಪೂರ್ ಅಂಬಾ ಭವಾನಿ ಮಾತೆಯ ದರ್ಶನಕ್ಕೆ ತೆರಳಿದ್ದ ಬೀದರ್ ಮೂಲದ ನಾಲ್ವರು ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ಮೂಲದ ಚಂದ್ರಕಾಂತ ಪಾಟೀಲ್(55) ದೀಪಕ್ ಪಾಟೀಲ್(18) ಹಾಗೂ ಹೈದ್ರಾಬಾದ್ ನಿವಾಸಿಗಳಿಬ್ಬರು ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಉಮರ್ಗಾ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ.
ತುಳಜಾಪೂರ್ ದೇವಿ ಅಂಬಾ ಭವಾನಿ ದರ್ಶನ ಪಡೆದು ವಾಪಸ್ ಹೈದ್ರಾಬಾದ್ನತ್ತ ಹೊರಟಿದ್ದಾಗ ದುರಂತ ನಡೆದಿದ್ದು, ಈ ಕುರಿತು ಉಮರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.