ಬೀದರ್: ಕೊರೊನಾ ಸಂಕಷ್ಟದ ಮಧ್ಯೆ ರಾಜ್ಯದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಆಂತರಿಕ ಕಿತ್ತಾಟ ಹೆಚ್ಚಾಗಿದೆ. ಪದೋನ್ನತಿ ವಿಷಯದಲ್ಲಿ ನಲುಗಿ ಹೋಗಿರುವ ನರ್ಸ್ಗಳು, ರಾಜ್ಯ ಸರ್ಕಾರಕ್ಕೆ ವಾರದ ಗಡವು ನೀಡಿದ್ದಾರೆ. ತಕ್ಷಣವೇ ರಾಜ್ಯಸರ್ಕಾರ ರಾಜ್ಯದ ವಿವಿಧ ಜಿಲ್ಲಾಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ 15 ಸಾವಿರ ನರ್ಸ್ಗಳ ಮೇಲಾಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಜೊತೆಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳನ್ನು ವಿಲೀನ ಮಾಡಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಆದರೂ ಅವರ ಪದೋನ್ನತಿ ವಿಚಾರದಲ್ಲಿ ವಿನಾಃ ಕಾರಣ ಗೊಂದಲ ಸೃಷ್ಟಿ ಮಾಡಲಾಗಿದೆ. ರಾಜ್ಯದ ಆಯಾ ಜಿಲ್ಲೆಯ ಮೆಡಿಕಲ್ ಕಾಲೇಜು ವ್ಯಾಪ್ತಿಗೆ ಬರುವ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ಗಳ ಮೇಲೆ ಆಗುತ್ತಿರುವ ಅನ್ಯಾಯವನ್ನು ವಾರದಲ್ಲಿ ಸರಿ ಪಡಿಸಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ನರ್ಸ್ಗಳ ಸಂಘದ ರಾಜ್ಯಾಧ್ಯಕ್ಷ ರಾಜಕುಮಾರ ಮಾಳಗೆ ಎಚ್ಚರಿಸಿದ್ದಾರೆ.
ಇನ್ನೂ ರಾಜ್ಯದ ಕೆಲ ಮೆಡಿಕಲ್ ಕಾಲೇಜು ನಿರ್ದೇಶಕರು ಹಾಗೂ ಡೀನ್ ಅವರು ಪದೋನ್ನತಿ ನೀಡಲು ನಿರಾಕರಿಸಿ ಸರ್ಕಾರದ ಆದೇಶ ಧಿಕ್ಕರಿಸುತ್ತಿದ್ದಾರೆ. ಜೊತೆಗೆ ಪದೋನ್ನತಿ ಪಡೆದ ಆರೋಗ್ಯ ಇಲಾಖೆ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗಲು ಜಿಲ್ಲಾಸ್ಪತ್ರೆಗಳಲ್ಲಿ ಅನುಮತಿ ನೀಡುತ್ತಿಲ್ಲ ಎಂದು ನರ್ಸ್ಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.