ಬೀದರ್: ಡಕಾಯತಿಗೆ ಹೊಂಚು ಹಾಕಿ ಕಾದುಕುಳಿತಿದ್ದ ದರೋಡೆಕೋರರ ಗ್ಯಾಂಗ್ವೊಂದರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದು, ಸಿನಿಮಾ ಸ್ಟೈಲ್ ನಲ್ಲಿ ಕಾರು ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಜಿಲ್ಲಾಯ ಹುಮನಾಬಾದ್ ತಾಲೂಕಿನ ನಂದಗಾಂವ್ ಬಳಿ ಈ ಘಟನೆ ನಡೆದಿದೆ. ಹಳ್ಳಿಖೇಡ ಪಿಎಸ್ಐ ಮಹಾಂತೇಶ ಅವರಿಗೆ ಹುಡುಗಿ ಎಂಬ ಗ್ರಾಮದ ಬಳಿ ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿ ನಗದು 6000 ರುಪಾಯಿ ದರೋಡೆ ಮಾಡಿದ್ದ ಗ್ಯಾಂಗ್ ಹಳ್ಳಿಖೇಡ ಮಾರ್ಗದಲ್ಲಿ ಸಾಗ್ತಿದೆ ಎಂಬ ಮಾಹಿತಿ ಸಿಕ್ಕಿದೆ. ನಂತರ ಅಲರ್ಟ್ ಆದ ಪಿಎಸ್ ಐ ಹಾಗೂ ತಂಡ ಗಸ್ತು ಚುರುಕು ಮಾಡಿದೆ.
ಹೈದ್ರಾಬಾದ್ನ ರಾಜೀವಗಾಂಧಿ ವಿಮಾನ ನಿಲ್ದಾಣದ ಎದುರಲ್ಲಿ ಕ್ಯಾಬ್ ಕಳ್ಳತನ ಮಾಡಿ ಬಂದಿದ್ದ ಈ ಗ್ಯಾಂಗ್ ಅನ್ನು ಖಾನಾಪೂರವಾಡಿ ಬಳಿ ಪೊಲೀಸರು ತಡೆದಿದ್ದಾರೆ. ಹತೋಟಿಗೆ ಬರದೆ ಇದ್ದಾಗ ಪಿಎಸ್ ಐ ತಮ್ಮ ಬಳಿ ಇದ್ದ ಪಿಸ್ತೂಲ್ ತೆಗೆದು ಎರಡು ಸುತ್ತು ಫೈರಿಂಗ್ ಮಾಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಜಿಲ್ಲೆಯ ವಿವಿಧ ಠಾಣೆಯ ಪೊಲೀಸರು ಕೂಂಬಿಂಗ್ ನಡೆಸಿದ್ದಾರೆ. ಸ್ಥಳದಲ್ಲಿ ಬೀದರ್ ಎಸ್.ಪಿ ಟಿ.ಶ್ರೀಧರ ಮೊಕ್ಕಾಂ ಹೂಡಿದ್ದು ನಟೋರಿಯಸ್ ಗ್ಯಾಂಗ್ ಪತ್ತೆಗಾಗಿ ಬಲೆ ಬೀಸಿದ್ದಾರೆ.