ಬೀದರ್: ಮೂರು ತಿಂಗಳಿಂದ ವೇತನವಿಲ್ಲದೆ ಕಷ್ಟದಲ್ಲಿರುವ ಹುಮನಾಬಾದ್ ತಾಲೂಕಿನ ಶಿಕ್ಷಕರು ಜಿಲ್ಲೆಯ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ ಮುಂದೆ ತಮ್ಮ ಗೋಳನ್ನು ತೋಡಿಕೊಂಡ ಘಟನೆ ನಡೆದಿದೆ.
ಹುಮನಾಬಾದ್ ತಾಲೂಕಿನ ಸರ್ಕಾರಿ ಶಿಕ್ಷಕರಿಗೆ ಕಳೆದ ಮೂರು ತಿಂಗಳಿನಿಂದ ಸಂಬಳವಾಗಿಲ್ಲ, ಹೀಗಾಗಿ ಶಿಕ್ಷಕರ ಕೈಯಲ್ಲಿ ದುಡ್ಡಿಲ್ಲದೆ ಬೆಳಕಿನ ದೀಪಾವಳಿ ಕೂಡ ಕತ್ತಲಮಯವಾಗಿದೆ. ನೊಂದ ಶಿಕ್ಷಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮುಂದೆ ತಮ್ಮ ಅಳಲು ತೊಂಡಿಕೊಂಡಿದ್ದಾರೆ.
ಪರಿಸ್ಥಿತಿಯನ್ನು ಅರಿತ ಸಚಿವರು ಕೂಡಲೇ ಅಧಿಕಾರಿಗೆಳಿಗೆ ಫೋನ್ ಮಾಡಿ ಶಿಕ್ಷಕರ ಎದುರೇ ಸಂಬಳ ಮಾಡುವಂತೆ ಸೂಚಿಸಿದ್ದಾರೆ. ಇನ್ನು ಹಬ್ಬದ ಒಳಗಾಗಿ ಸಂಬಳ ಮಾಡಿಸುತ್ತೇನೆ ಎಂದು ಶಿಕ್ಷಕರಿಗೆ ಭರವಸೆ ಕೊಟ್ಟಿದ್ದಾರೆ.