ETV Bharat / state

ದೇಶ ಕಾಯುವ ಯೋಧನ ಮನೆ ಕತ್ತಲಿನಲ್ಲಿ: ವಿದ್ಯುತ್ ಸಂಪರ್ಕ ನೀಡಲು ಜೆಸ್ಕಾಂ ಹಿಂದೇಟು ಆರೋಪ! - ಯೋಧನ ಕುಟುಂಬಕ್ಕಿಲ್ಲ ವಿದ್ಯುತ್ ಸಂಪರ್ಕ

ದೇಶದ ಗಡಿ ಕಾಯುವ ಯೋಧನ ಕುಟುಂಬವೊಂದು ಕತ್ತಲಲ್ಲಿ ಜೀವನ ನಡೆಸುತ್ತಿದೆ. ಈ ಕುರಿತು ವಿದ್ಯುತ್ ಸಂಪರ್ಕ ನೀಡಿ ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸಾಲು ಸಾಲು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೀದರ್​ ಜಿಲ್ಲೆಯ ಯೋಧನೋರ್ವ ಮಾಧ್ಯಮದವರೆದುರು ಅಳಲು ತೋಡಿಕೊಂಡಿದ್ದಾರೆ.

Soldiers house
ಯೋಧನ ಮನೆ ಕತ್ತಲಿನಲ್ಲಿ
author img

By

Published : Dec 11, 2019, 9:44 PM IST

ಬೀದರ್: ದೇಶ ಕಾಯುವ ಯೋಧನ ಕುಟುಂಬವೊಂದು ಕತ್ತಲೆಯಲ್ಲಿ ಜೀವನ ನಡೆಸುತ್ತಿರುವ ಮನಕಲುಕುವ ಘಟನೆ ಕಮಲನಗರ ತಾಲೂಕಿನ ತೋರಣಾ ಗ್ರಾಮದಲ್ಲಿ ಕಂಡು ಬಂದಿದೆ.

ಗಡಿ ಕಾಯುವ ಯೋಧನ ಮನೆ ಕತ್ತಲಿನಲ್ಲಿ

ಕಮಲನಗರ ತಾಲೂಕಿನ ತೋರಣಾ ಗ್ರಾಮದ ಕಾಳಿದಾಸ ಗೌಳಿ ಎಂಬ ಯೋಧರ ಮನೆಯಲ್ಲಿ ವಿದ್ಯುತ್​ ಸಂಪರ್ಕವಿಲ್ಲದೇ ಅವರ ಕುಟುಂಬ ಜೀವನ ಸಾಗಿಸುತ್ತಿದೆ. ವಿದ್ಯುತ್ ಸಂಪರ್ಕ ಕೊಡಿ ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸಾಲು ಸಾಲು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾನು ಕೆಲಸಕ್ಕೆಂದು ಹೋದರೆ ನಮ್ಮ ಅಪ್ಪ, ಅಮ್ಮ ಮಾತ್ರ ಇರುತ್ತಾರೆ. ಈ ವೇಳೆ ತುಂಬಾನೆ ತೊಂದರೆಯಾಗುತ್ತದೆ ಅಂತಾರೆ ಯೋಧ ಕಾಳಿದಾಸ.

ಕಾಳಿದಾಸ ಗೌಳಿ ಭಾರತೀಯ ಸಶಸ್ತ್ರ ಸೀಮಾ ಪಡೆಯ 65 ನೇ ಬಟಾಲಿಯನ್​ನ ಬಿಹಾರ್​ ರಾಜ್ಯದಲ್ಲಿ ಸೇವೆಯಲ್ಲಿದ್ದಾರೆ. ಇವರ ತಾಯಿ, ತಂದೆ ತೋರಣಾ ಗ್ರಾಮದ ಹೊರ ವಲಯದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದು, ಯೋಧ ದೇಶ ಕಾಯುವ ಕೆಲಸಕ್ಕೆ ಹೋದ್ರೆ ಮನೆಯಲ್ಲಿ ತಂದೆ ಮತ್ತು ತಾಯಿ ಮಾತ್ರ ಇರ್ತಾರೆ. ಊರಿಗೆಲ್ಲಾ ಕರೆಂಟ್ ಕೊಟ್ಟಿದ್ದಿರಿ, ನಮ್ಮ ಮನೆಗೂ ಸಂಪರ್ಕ ಕೊಡಿ ಎಂದು ಎರಡು ವರ್ಷಗಳಿಂದ ಮನವಿ ಸಲ್ಲಿಸಿದರೂ ಜೆಸ್ಕಾಂ ಅಧಿಕಾರಿಗಳು ಸ್ಪಂದಿಸಿಲ್ಲವೆಂದು ಯೋಧ ಆರೋಪಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ರಜೆಯಲ್ಲಿ ಸ್ವಗ್ರಾಮಕ್ಕೆ ಬಂದಾಗಲೆಲ್ಲ ಜೆಸ್ಕಾಂ ಇಲಾಖೆ ಅಧಿಕಾರಿಗಳ ಕಚೇರಿ ಬಾಗಿಲಿನಲ್ಲಿ ಕುಳಿತು ಮನವಿಗಳನ್ನು ನೀಡಿ ಸಾಕಾಗಿದೆ. ಸ್ಥಳೀಯ ಜನ ಪ್ರತಿನಿಧಿಗಳಿಗೂ ನನ್ನ ಗೋಳನ್ನು ತೋಡಿಕೊಂಡಿದ್ದೇನೆ. ಆದ್ರೆ ಯಾವ ಪ್ರಯೋಜನ ಕೂಡ ಆಗಿಲ್ಲ. ತಕ್ಷಣ ನಮ್ಮ ಮನೆಗೆ ವಿದ್ಯುತ್ ಸಂಪರ್ಕ ನೀಡಿ, ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡುವಂತೆ ಕಾಳಿದಾಸ ಮನವಿ ಮಾಡಿದ್ದಾರೆ.

Intro:ಗಡಿ ಕಾಯುವ ಯೋಧನ ಮನೆ ಕತ್ತಲಿನಲ್ಲಿ, ವಿದ್ಯುತ್ ಸಂಪರ್ಕ ನೀಡಲು ಜೇಸ್ಕಾಂ ಹಿಂದೇಟು ಆರೋಪ...!

ಬೀದರ್:
ಜೀವ ಕೈಯಲ್ಲಿ ಹಿಡಿದು ದೇಶದ ಗಡಿ ಕಾಯುವ ಯೋಧನ ಕುಟುಂಬವೊಂದು ಕತ್ತಲೆಯಲ್ಲೆ ಕಾಲ ಕಳೆಯುತ್ತಿದೆ. ವಿದ್ಯುತ್ ಸಂಪರ್ಕ ಕೊಡಿ ಎಂದು ಜೇಸ್ಕಾಂ ಅಧಿಕಾರಿಗಳಿಗೆ ಸಾಲು ಸಾಲು ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ. ನಮ್ಮ ಅಪ್ಪ, ಅಮ್ಮ ಇರುವ ಈ ಮನೆಯಲ್ಲಿ ಸರ್ಕಾರವಾದ್ರು ಬೇಳಕು ಹರಿಸುತ್ತಾ ಅಂತಾರೆ ಈ ಯೋಧ.

ಹೌದು. ಜಿಲ್ಲೆಯ ಕಮಲನಗರ ತಾಲೂಕಿನ ತೊರಣಾ ಗ್ರಾಮದ ಕಾಳಿದಾಸ ಗೌಳಿ ಎಂಬ ಯೋಧ ಇಂಥದ್ದೊಂದು ಸಂಕಷ್ಟದ ನೋವು ತೊಡಿಕೊಂಡಿದ್ದಾರೆ. ಭಾರತೀಯ ಶಸಸ್ತ್ರ ಸೀಮಾ ಪಡೆಯ 65 ನೇಯ ಬಟಾಲಿಯನ್ ನ ಬಿಹಾರ ರಾಜ್ಯದಲ್ಲಿ ಸೇವೆಯಲ್ಲಿರುವ ಯೋಧ ತಾಯಿ, ತಂದೆ ತೊರಣಾ ಗ್ರಾಮದ ಹೊರ ವಲಯದಲ್ಲಿರುವ ಮನೆಯಲ್ಲಿ ವಾಸ ಮಾಡ್ತಾರೆ. ಯೋಧ ಕಾಳಿದಾಸ ದೇಶ ಕಾಯುವ ಕೆಲಸಕ್ಕೆ ಹೊದ್ರೆ ಮನೆಯಲ್ಲಿ ತಂದೆ ಮತ್ತು ತಾಯಿ ಇರ್ತಾರೆ. ಊರೆಲ್ಲಾ ಕರೇಂಟ್ ಸಪ್ಲೈ ಕೊಟ್ಟಿದ್ದಿರಿ ನಮ್ಮ ಮನೆಗೂ ಸಂಪರ್ಕ ಕೊಡಿ ಎಂದು ಎರಡು ವರ್ಷಗಳಿಂದ ಮನವಿ ಸಲ್ಲಿಸಿದರು ಜೇಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡ್ತಿಲ್ಲ ಎಂದು ಯೋಧ ಗೋಳು ತೊಡಿಕೊಂಡಿದ್ದಾರೆ.

ಕಳೇದ ಎರಡು ವರ್ಷಗಳಿಂದ ರಜೆಯಲ್ಲಿ ಸ್ವಗ್ರಾಮಕ್ಕೆ ಬಂದಾಗಲೆಲ್ಲಾ ಜೇಸ್ಕಾಂ ಇಲಾಖೆ ಅಧಿಕಾರಿಗಳ ಕಚೇರಿ ಬಾಗಿಲಿನಲ್ಲಿ ಕೂತು ಮನವಿಗಳು ನೀಡಿ ನೀಡಿ ಸಾಕಾಗಿದೆ. ಸ್ಥಳೀಯ ಜನ ಪ್ರತಿನಿಧಿಗಳಿಗೂ ನನ್ನ ಗೋಳು ಹೇಳಿಕೊಂಡಿದ್ದೆನೆ ಆದ್ರೆ ಯಾವ ಪ್ರಯೋಜನವು ಕೂಡ ಆಗಿಲ್ಲ ಅಂತಾರೆ ಯೋಧ ಕಾಳಿದಾಸ. ತಕ್ಷಣ ನಮ್ಮ ಮನೆಗೆ ವಿದ್ಯುತ್ ಸಂಪರ್ಕ ನೀಡಿ ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ಬೈಟ್-೦೧: ಕಾಳಿದಾಸ ಗೌಳಿ- ಯೋಧ.Body:ಅನೀಲConclusion:ಬೀದರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.