ಬೀದರ್: ಎಳ್ಳು ಅಮವಾಸ್ಯೆ ಪ್ರಯುಕ್ತ ಆಕಾಶದಲ್ಲಿ ಪತಂಗ ಹಾರಿಸಿ ಬೀದರ್ ಸಂಸದ ಭಗವಂತ ಖೂಬಾ ಖುಷಿಪಟ್ರು.
ನಗರ ಹೊರವಲಯದ ಬಕ್ಕಚೌಡಿ ಗ್ರಾಮದ ಗದ್ದೆಯಲ್ಲಿ ಕುಟುಂಬ ಸಮೇತವಾಗಿ ಎಳ್ಳು ಅಮವಾಸ್ಯೆ ನಿಮಿತ್ತ ವಿಶೇಷ ಪೂಜೆ ಮಾಡಿದ್ರು. ನಂತರ ಸಂಸದರು ಮಕ್ಕಳೊಂದಿಗೆ ದಾರವನ್ನು ಎಳೆಯುತ್ತ ಮೈ ಮರೆತು ಕೆಲಕಾಲ ಪತಂಗ ಹಾರಿಸುವ ಮೂಲಕ ಸಾಂಪ್ರದಾಯಿಕ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.
ನಂತರ ಭಜ್ಜಿ ರೊಟ್ಟಿ ಊಟ ಸವಿದು ಸಂಬಂಧಿಕರು, ಆಪ್ತರೊಂದಿಗೆ ಹರಟೆ ಹೊಡೆದು ಸಿಕ್ಕಾಪಟ್ಟೆ ಒತ್ತಡದ ನಗರ ಜಂಜಾಟದ ಜೀವನ ಮರೆತು ಒಂದು ದಿನದ ಮಟ್ಟಿಗೆ ಅನ್ನದಾತನ ಅಂಗಳದಲ್ಲಿ ರೈತರ ಹಬ್ಬದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.