ಬಸವಕಲ್ಯಾಣ (ಬೀದರ್): ತಾಯಿಯ ಸಾವಿನ ಸುದ್ದಿ ಕೇಳಿದ ಪುತ್ರ ಹೃದಯಾಘಾತದಿಂದ ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ಯರಬಾಗ್ ಗ್ರಾಮದಲ್ಲಿಂದು ಜರುಗಿದೆ. ಗ್ರಾಮದ ಜೀಜಾಬಾಯಿ ಪಾಟೀಲ್(96) ಹಾಗೂ ಮನೋಹರ್ ರೆಡ್ಡಿ ಪಾಟೀಲ್ (75) ಮೃತಪಟ್ಟವರು.
ಜೀಜಾಬಾಯಿ ಅವರು ವಯೋಸಹಜ ಕಾಯಿಲೆಯಿಂದ ಇಂದು ನಸುಕಿನ ಜಾವ ಮೃತಪಟ್ಟದ್ದಾರೆ. ಬೆಳಗ್ಗೆ ಈ ಸುದ್ದಿ ಕೇಳಿದ ಪುತ್ರ ಮನೋಹರ್ ರೆಡ್ಡಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ತಕ್ಷಣ ಬಸವಕಲ್ಯಾಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳಿಂದ ತಿಳಿಸಿವೆ.
ಇದನ್ನೂ ಓದಿ: ಮೈಸೂರಿನಲ್ಲಿ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿ ಬಲಿ, ಬಸ್ಗೆ ಡಿಕ್ಕಿಯಾಗಿ ಸ್ಕೂಟರ್ ಸವಾರ ಸಾವು!
ತಾಯಿ ಮಗ ಒಂದೇ ದಿನ ಮೃತಪಟ್ಟ ಹಿನ್ನೆಲೆಯಲ್ಲಿ ಕುಟುಂದ ಸದಸ್ಯರು ಹಾಗೂ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.