ಬೀದರ್: ಜಿಲ್ಲೆಯ ಹುಮನಾಬಾದ್ ತಾಲೂಕಿನ ನಂದಗಾಂವ್ ಗ್ರಾಮದಲ್ಲಿ ಹಂದಿ ಜ್ವರಕ್ಕೆ ಬಳಲಿ 50 ಕ್ಕೂ ಅಧಿಕ ಹಂದಿಗಳು ಸಾಮೂಹಿಕವಾಗಿ ಸಾವನ್ನಪ್ಪಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.
ದೇಶದಲ್ಲಿ ಈಗಾಗಲೇ ಕೊರೊನಾ, ಹಕ್ಕಿ ಜ್ವರ ಮನುಷ್ಯನ ನಿದ್ದೆಗೆಡಿಸಿದೆ ಇದರ ಜೊತೆಯಲ್ಲಿ ಇದೀಗ ಹಂದಿ ಇನ್ನಷ್ಟು ಆತಂಕ ಮೂಡಿಸಿದೆ. ಸ್ಥಳದಲ್ಲಿ ಪಶು ವೈಧ್ಯಾಧಿಕಾರಿಗಳಾದ ಡಾ. ಪೃಥ್ವಿರಾಜ್ ಹಾಗೂ ಡಾ. ಶಿವಮೂರ್ತಿ ಸ್ಥಳದಲ್ಲೆ ಬೀಡು ಬಿಟ್ಟಿದ್ದಾರೆ.
ಹಂದಿಗಳಿಂದ ಹಂದಿಗಳಿಗೆ ಮಾತ್ರ ಹರಡುವ ರೋಗ ಇದಾಗಿದ್ದು ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಅಭಯ ಹಸ್ತ ನೀಡಿದ್ದಾರೆ, ಹಂದಿಗಳ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು ಮೈಸೂರು ಭಾಗದಲ್ಲಿ ಹಕ್ಕಿ ಜ್ವರ ಬಂದ ಬೆನ್ನಲ್ಲಿ ಬೀದರ್ ನಲ್ಲಿ ಹಂದಿಗಳಿಗೆ ಈ ಸಂಕಷ್ಟ ಎದುರಾಗಿದೆ.
ಇಂಗ್ಲಿಷ್ನಲ್ಲಿ ಸ್ವೈನ್ ಫ್ಲೂ ಎಂದು ಕರೆಯುವ ಹೆಚ್1ಎನ್1 ವೈರಾಣುಗಳು ಮೊದಲು ಹಂದಿಗಳ ಮೇಲೆ ಪ್ರಭಾವ ಬೀರಿ ನಂತರ ಮನುಷ್ಯನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಹಂದಿಗಳ ಸಾಮೂಹಿಕ ಸಾವು ಜನರಲ್ಲಿ ಆತಂಕ ಮೂಡಿಸಿದೆ.