ETV Bharat / state

ಬಸವಕಲ್ಯಾಣದಲ್ಲಿ ಬೇವಿನ ಮರದಿಂದ ಚಿಮ್ಮಿದ ಹಾಲು: ನೋಡಲು ಮುಗಿಬಿದ್ದ ಜನ! - ಯರಬಾಗ್ ಗ್ರಾಮದಲ್ಲಿ ಬೇವಿನ ಮರದಿಂದ ಹಾಲು

ಬಸವಕಲ್ಯಾಣ ತಾಲೂಕಿನ ಯರಬಾಗ್ ಗ್ರಾಮದಲ್ಲಿ ಬೇವಿನ ಮರದಿಂದ ಹಾಲು ಚಿಮ್ಮುತ್ತಿದ್ದು, ಇದನ್ನು ನೋಡಲು ಜನ ತಂಡೋಪತಂಡವಾಗಿ ಸ್ಥಳಕ್ಕೆ ಧಾವಿಸಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

milk-spilled-from-neem-tree-in-basavakalyana
ಬೇವಿನ ಮರದಿಂದ ಚಿಮ್ಮಿದ ಹಾಲು: ನೋಡಲು ಮುಗಿ ಬಿದ್ದ ಜನರು
author img

By

Published : Jan 2, 2020, 10:53 PM IST

ಬಸವಕಲ್ಯಾಣ: ತಾಲೂಕಿನ ಯರಬಾಗ್ ಗ್ರಾಮದಲ್ಲಿ ಬೇವಿನ ಮರದಿಂದ ಹಾಲು ಚಿಮ್ಮುತ್ತಿದ್ದು, ಇದನ್ನು ನೋಡಲು ಜನ ತಂಡೋಪತಂಡವಾಗಿ ಸ್ಥಳಕ್ಕೆ ಧಾವಿಸಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮದ ಚಂದ್ರಪ್ಪ ನಿಂಗದಳ್ಳಿ ಎಂಬುವರ ಮನೆ ಅಂಗಳದಲ್ಲಿ ಇರುವ ಬೇವಿನ ಮರದಿಂದ ಗುರುವಾರ ಸಂಜೆ 6 ಗಂಟೆಯಿಂದ ಹಾಲಿನ ರೂಪದ ಬಿಳಿ ಬಣ್ಣದ ದ್ರವ್ಯ ಹೊರ ಬರುತ್ತಿದ್ದು, ಇದನ್ನ ನೋಡಲು ಜನರು ಮುಗಿಬಿದ್ದಿದ್ದಾರೆ.

ಬೇವಿನ ಮರದಿಂದ ಚಿಮ್ಮಿದ ಹಾಲು: ನೋಡಲು ಮುಗಿಬಿದ್ದ ಜನರು

ಮರದಿಂದ ಹಾಲು ಬರುತ್ತಿದೆ ಎನ್ನುವ ವಿಷಯ ಕೆಲವೇ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯರಬಾಗ ಸುತ್ತಲಿನ ಗ್ರಾಮಗಳಾದ ಸದಲಾಪೂರ, ಪಂಡರಗೇರಾ, ರಾಂಪೂರ ಸೇರಿದಂತೆ ವಿವಿಧ ಗ್ರಾಮಗಳಿಂದ ಜನ ತಂಡೋಪತಂಡವಾಗಿ ಸ್ಥಳಕ್ಕೆ ಧಾವಿಸಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಮರದಿಂದ ಹಾಲು ಚಿಮ್ಮುವ ಘಟನೆ ಶುಭ ಸಂಕೇತವಾಗಿದೆ. ಇದರಿಂದ ಗ್ರಾಮದ ಜನತೆಗೆ ಒಳ್ಳೆಯದಾಗಲಿದೆ ಎಂದು ಸ್ಥಳದಲ್ಲಿದ್ದ ಜನರು ಅಭಿಪ್ರಾಯ ವ್ಯಕ್ತಪಡಿಸಿದರು. ಹಾಲು ನೋಡಲೆಂದು ಆಗಮಿಸಿದ ಬಹುತೇಕ ಜನರು ಇದೊಂದು ಪವಾಡವೆಂದು ನಂಬಿ ಭಕ್ತಿಯಿಂದ ಮರಕ್ಕೆ ಪೂಜೆ ಸಲ್ಲಿಸಿ ನಮಿಸುತ್ತಿದ್ದಾರೆ.

ಬೇವಿನ ಮರದಿಂದ ಬಿಳಿ ಬಣ್ಣದ ದ್ರವ್ಯ ಹೊರ ಬರುವುದು ಆಶ್ಚರ್ಯ ಪಡುವಂತಹ ವಿಷಯವೇನಲ್ಲ. ನೈಸರ್ಗಿಕವಾಗಿ ಇದೊಂದು ಸಹಜ ಪ್ರಕ್ರಿಯೆಯಾಗಿದೆ. ಇಂತಹ ಪ್ರಕರಣ ಅನೇಕ ಕಡೆಗಳಲ್ಲಿ ಮೇಲಿಂದ ಮೇಲೆ ನಡೆಯುತ್ತಲೇ ಇರುತ್ತದೆ ಎಂದು ಕೆಲವರು ಹೇಳುತ್ತಾರೆ.

Intro:5 ವಿಡಿಯೊ ಕಳಿಸಲಾಗಿದೆ

ಬಸವಕಲ್ಯಾಣ: ತಾಲೂಕಿನ ಯರಬಾಗ್ ಗ್ರಾಮದಲ್ಲಿ ಬೆವಿನ ಮರದಿಂದ ಹಾಲು ಚಿಮ್ಮುತ್ತಿದೆ ಎಂದು ಜನ ತಂಡೋಪ ತಂಡವಾಗಿ ಸ್ಥಳಕ್ಕೆ ಧಾವಿಸಿ ಆಶ್ಚರ್ಯ ವ್ಯಕ್ತಪಡಿಸುತಿದ್ದಾರೆ.
ಗ್ರಾಮದ ಚಂದ್ರಪ್ಪ ನಿಂಗದಳ್ಳಿ ಅವರ ಮನೆ ಅಂಗಳದಲ್ಲಿ ಇರುವ ಬೆವಿನ ಮರಕ್ಕೆ ಗುರುವಾರ ಸಂಜೆ ೬ ರಿಂದ ಮರದ ಕೊಂಬೆಯಿAದ ಹಾಲಿನ ರೂಪದಲ್ಲಿ ಬಿಳಿ ಬಣ್ಣದ ದ್ರವ್ಯ ಹೊರ ಬರುತ್ತಿದ್ದು, ಇದನ್ನ ನೋಡಲು ಜನರು ಮುಗಿ ಬಿದ್ದಿದ್ದಾರೆ.
ಮರಕ್ಕೆ ಹಾಲು ಬರುತ್ತಿದೆ ಎನ್ನುವ ವಿಷಯ ಕೆಲವೆ ಸಮಯದಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಯರಬಾಗ ಸುತ್ತಲಿನ ಗ್ರಾಮಗಳಾದ ಸದಲಾಪೂರ, ಪಂಡರಗೇರಾ, ರಾಂಪೂರ ಸೇರಿದಂತೆ ವಿವಿಧ ಗ್ರಾಮಗಳಿಂದ ಜನ ತಂಡೋಪ ತಂಡವಾಗಿ ಸ್ಥಳಕ್ಕೆ ಧಾವಿಸಿ, ಆಶ್ಚರ್ಯ ವ್ಯಕ್ತಪಡಿಸುತಿದ್ದಾರೆ. ಮರದಿಂದ ಹಾಲು ಚಿಮ್ಮುವ ಘಟನೆ ಶುಭ ಸಂಕೇತವಾಗಿದೆ. ಇದರಿಂದ ಗ್ರಾಮದ ಜನತೆಗೆ ಒಳ್ಳೆಯದಾಗಲಿದೆ ಎಂದು ಸ್ಥಳದಲ್ಲಿದ್ದ ಜನರು ಅಭಿಪ್ರಾಯ ವ್ಯಕ್ತಪಡಿಸುತಿದ್ದಾರೆ.
ಹಾಲು ನೋಡಲೆಂದು ಆಗಮಿಸಿದ ಬಹುತೇಕ ಜನರು ಇದೊಂದು ಪವಾಡ ವೆಂದು ನಂಬಿ ಭಕ್ತಿ, ಭಾವದಿಂದ ಮರಕ್ಕೆ ಪೂಜೆ ಸಲ್ಲಿಸಿ, ನಮಿಸುತಿದ್ದಾರೆ. ರಾತ್ರಿಯಿಡಿ ಭಜನೆ ಮಾಡಲು ನಿರ್ಧರಿಸಲಾಗಿದೆ ಎಂದು ಗ್ರಾಮದ ಮುಖಂಡ ನ್ಯಾಯವಾದಿ ಸಂಜೀವರೆಡ್ಡಿ ಯರಬಾಗ್ ಮಾಹಿತಿ ನೀಡಿದ್ದಾರೆ.
ಬೆವಿನ ಮರದಿಂದ ಬಿಳಿ ಬಣ್ಣದ ದ್ರವ್ಯ ಹೊರ ಬರುವದು ಆಶ್ಚರ್ಯ ಪಡುವಂತಹ ವಿಷಯವೇನಲ್ಲ. ನೈಸರ್ಗಿಕವಾಗಿ ಇದೊಂದು ಸಹಜ ಪ್ರಕ್ರಿಯೆಯಾಗಿದೆ. ಇಂಥ ಪ್ರಕರಣಗಳು ಅನೇಕ ಕಡೆಗಳಲ್ಲಿ ಮೇಲಿಂದ, ಮೇಲೆ ನಡೆಯುತ್ತಲೆ ಇವೇ ಎಂದು ಕೆಲವರು ಮಾತನಾಡುತಿದ್ದಾರೆ.
ಇಲ್ಲಿಯ ಮರದಿಂದ ಹೊರ ಬರುತ್ತಿರುವ ದ್ರವ್ಯದ ಬಗ್ಗೆ ವೈಜ್ಞಾನಿಕ ತಜ್ಞರು ಸ್ಥಳಕ್ಕೆ ಬಂದು ಜನರಿಗೆ ಮನವರಿಕೆ ಮಾಡಬೇಕಿದೆ.

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUMARConclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.