ETV Bharat / state

ಮೆಥನಾಲ್​​ ತುಂಬಿದ ಲಾರಿ ಅಪಘಾತ: ತಪ್ಪಿದ ಭಾರೀ ಅನಾಹುತ - National Highway 65

ಮುಂಬೈನಿಂದ ತೆಲಂಗಾಣ ಕಡೆ ಸಾಗುತಿದ್ದ ಮೆಥನಾಲ್​​ ತುಂಬಿದ್ದ ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮುಂದೆ ಸಾಗುತಿದ್ದ ಮತ್ತೊಂದು ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಮೆಥನಾಲ್​​ ತುಂಬಿದ ಲಾರಿಯ ಮುಂಭಾಗ ನುಜ್ಜುಗುಜ್ಜಾಗಿದ್ದು, ಚಾಲಕ ಲಾರಿಯಲ್ಲಿಯೇ ಸಿಲುಕಿ ಒದ್ದಾಡಿದ್ದಾನೆ.

methanol-filled-lorry-accident-in-bider-highway
ಮೆಥನಾಲ್​​ ತುಂಬಿದ ಲಾರಿ ಅಪಘಾತ: ತಪ್ಪಿದ ಭಾರೀ ಅನಾಹುತ
author img

By

Published : Sep 15, 2020, 1:56 PM IST

ಬಸವಕಲ್ಯಾಣ (ಬೀದರ್): ಮೆಥನಾಲ್​​ ತುಂಬಿದ್ದ ಟ್ಯಾಂಕರ್ ಲಾರಿಯೊಂದು ಚಲಿಸುತ್ತಿದ್ದ ಇನ್ನೊಂದು ಲಾರಿಗೆ ಡಿಕ್ಕಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ-65ರ ಮಂಠಾಳ ಕ್ರಾಸ್​​ ಬಳಿ ನಡೆದಿದೆ. ಅಪಘಾತದ ಬಳಿಕ ಟ್ಯಾಂಕರ್​​​ನಲ್ಲಿದ್ದ ಮೆಥನಾಲ್ ಅನಿಲ ಸೋರಿಕೆಯಾಗಿದ್ದು, ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

ಮೆಥನಾಲ್​​ ತುಂಬಿದ ಲಾರಿ ಅಪಘಾತ: ತಪ್ಪಿದ ಭಾರೀ ಅನಾಹುತ

ಮುಂಬೈನಿಂದ ತೆಲಂಗಾಣ ಕಡೆ ಸಾಗುತಿದ್ದ ಮೆಥನಾಲ್​​ ತುಂಬಿದ್ದ ಟ್ಯಾಂಕರ್ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಸಾಗುತಿದ್ದ ಮತ್ತೊಂದು ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಮೆಥನಾಲ್​​ ತುಂಬಿದ ಲಾರಿಯ ಮುಂಭಾಗ ನುಜ್ಜುಗುಜ್ಜಾಗಿದ್ದು, ಚಾಲಕ ಲಾರಿಯಲ್ಲಿಯೇ ಸಿಲುಕಿ 20 ನಿಮಿಷಕ್ಕೂ ಹೆಚ್ಚು ಹೊತ್ತು ಒದ್ದಾಡಿದ್ದಾನೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣೆ ಪಿಎಸ್ಐ ನಂದಕುಮಾರ ಮುಳೆ ಹಾಗೂ ಅಗ್ನಿಶಾಮಕ ದಳ ಠಾಣಾಧಿಕಾರಿ ಪ್ರವೀಣಕುಮಾರ್​​​ ನೇತೃತ್ವದ ಸಿಬ್ಬಂದಿ ತಂಡ, ಲಾರಿಯಲ್ಲಿ ಸಿಲುಕಿದ್ದ ಮಹಾರಾಷ್ಟ್ರದ ಬಾಬಳಗಾಂವ್ ಮೂಲದ ಲಾರಿ ಚಾಲಕ ದತ್ತಾತ್ರೆಯ ನಿಲಂ ಎಂಬಾತನನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.