ETV Bharat / state

ಮರೆಯಾದ ಮಾತೆ ಮಹಾದೇವಿ: ಕಲ್ಯಾಣ ನಾಡಿನಲ್ಲಿ ಮರೆಯಲಾಗದ ಹೆಜ್ಜೆ ಗುರುತು... - ಬೀದರ್

ಲಿಂಗೈಕ್ಯರಾದ ಮಾತೆ ಮಹಾದೇವಿ ಅವರು ಬೀದರ್​ ಜಿಲ್ಲೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ

ಬೀದರ್​ ಜಿಲ್ಲೆಗೆ ಅಪಾರವಾದ ಕೊಡುಗೆ ನೀಡಿದ್ದ ಮಾತೆ ಮಹಾದೇವಿ
author img

By

Published : Mar 16, 2019, 11:40 AM IST

ಬೀದರ್: ಬಸವಾದಿ ಶರಣರ ತತ್ವ ಮತ್ತು ವಚನಗಳ ಪ್ರಸಾರದ ಜತೆಜತೆಗೆ ಲೋಕಕಲ್ಯಾಣಕ್ಕಾಗಿ ಅಹರ್ನಿಶಿ ಶ್ರಮಿಸಿದ ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಪೂಜ್ಯ ಮಾತೆ ಮಹಾದೇವಿ ಅವರು ಲಿಂಗೈಕ್ಯರಾದರೂ ಕಲ್ಯಾಣ ನಾಡಿನ ನೆಲದಲ್ಲಿ ಎಂದಿಗೂ ಮರೆಯಲಾಗದ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ.

ಮಾತೆ ಮಹಾದೇವಿ ಅವರು ಪ್ರವಾಸೋದ್ಯಮ ಅಭಿವೃದ್ಧಿ, ಅನಾಥ ಮಕ್ಕಳ ಪಾಲನೆ, ವಚನ ಸಾಹಿತ್ಯದ ಪ್ರಸಾರ ಹಾಗೂ ಲಿಂಗಾಯತ ಧರ್ಮದ ಹೊಸ ದಾರಿಗೆ ನಾಂದಿ ಹಾಡಿದ್ದು ಇದೇ ಕಲ್ಯಾಣ ಕ್ರಾಂತಿಯ ನಾಡು ಬೀದರ್ ಜಿಲ್ಲೆಯಿಂದ. 12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ವಚನ ಕ್ರಾಂತಿ ಹಾಗೂ ಶರಣರ ಸಮಾಜಮುಖಿ ಕಾರ್ಯಗಳನ್ನು ಪುನರ್​ಸ್ಥಾಪಿಸಿದವರು ಪೂಜ್ಯ ಮಾತೆ ಮಹಾದೇವಿ. ಅವರು ಬಿಟ್ಟು ಹೋದ ನೆನಪುಗಳು ಬಸವ ತತ್ವಾಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿದೆ.

ಬೀದರ್​ ಜಿಲ್ಲೆಗೆ ಅಪಾರವಾದ ಕೊಡುಗೆ ನೀಡಿದ್ದ ಮಾತೆ ಮಹಾದೇವಿ

ಬೀದರ್​ಗೆ ಅವರ ಕೊಡುಗೆಗಳು :

ಕೂಡಲ ಸಂಗಮದ ಅಭಿವೃದ್ಧಿ ನಂತರ 2000 ಇಸವಿಯಲ್ಲಿ ಮಾತೆ ಮಹಾದೇವಿ ಅವರು ಮುಖ ಮಾಡಿದ್ದು ಬೀದರ್​ನತ್ತ. ಇಲ್ಲಿನ ಬಸವಕಲ್ಯಾಣ ನಗರದಲ್ಲಿ 12ನೇ ಶತಮಾನದ ಕಲ್ಯಾಣ ಕ್ರಾಂತಿಯ ನೆಲದ ಅಭಿವೃದ್ಧಿಗೆ ಯೋಜನೆ ರೂಪಿಸಿದರು. ತ್ರಿಪುರಾಂತ ಕೆರೆಯ ಪಕ್ಕದಲ್ಲಿ ಮೂರು ಎಕರೆ ಜಮೀನು ಖರೀದಿಸಿ, ಬಸವ ಮಹಾಮನೆ ಸ್ಥಾಪಿಸಿ ನಿರಂತರ ದಾಸೋಹಕ್ಕೆ ಚಾಲನೆ ನೀಡಿದರು.

2004 ರಲ್ಲಿ ಪ್ರಾರಂಭಿಕ 1 ಕೋಟಿ ರೂ ವೆಚ್ಚದಲ್ಲಿ ಆರಂಭವಾದ 108 ಅಡಿ ಎತ್ತರದ ಬಸವಣ್ಣನ ಬೃಹತ್​ ಮೂರ್ತಿಯನ್ನು, ವಿವಿಧ ಮೂಲಗಳಿಂದ ಧನ ಸಂಗ್ರಹಿಸಿ, ಅಂದಾಜು 4 ಕೋಟಿ ರೂ ವೆಚ್ಚದಲ್ಲಿ ಅವರು ಪೂರ್ಣಗೊಳಿಸಿದರು. 2012ರಲ್ಲಿ ಬಸವಣ್ಣನ ಮೂರ್ತಿಯನ್ನು ಲೋಕಾರ್ಪಣೆ ಮಾಡಿದರು. ಅನಂತರ ಮೂರ್ತಿ ಪಕ್ಕದಲ್ಲಿಯೇ 21 ಎಕರೆ ಜಮೀನಿನಲ್ಲಿ ಶರಣರ ಗುಹಾ ದೇವಾಲಯ, ಗ್ರಾಮೀಣ ಪರಿಸರ ಬಿಂಬಿಸುವ ಪ್ಲಾಸ್ಟರ್ ಆಫ್ ಪ್ಯಾರಿಸ್​ ಕಲಾಕೃತಿಗಳ ಮೂಲಕ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವಂತೆ ಮಾಡಿದರು.

ಕಲ್ಯಾಣ ಪರ್ವ

2001ರಲ್ಲಿ ಕಲ್ಯಾಣ ಪರ್ವ ಎಂಬ ಹೆಸರಿನಲ್ಲಿ ಮೂರು ದಿನಗಳ ಕಾಲ ಅನುಭವ ಕಾರ್ಯಕ್ರಮ ನಡೆಸಿದರು. ಸತತ 17 ನೇ ಕಲ್ಯಾಣ ಪರ್ವ ಕಾರ್ಯಕ್ರಮಗಳನ್ನು ಆಯೋಜಿಸಿ, ಶರಣ ತತ್ವ, ವಚನ ಸಾಹಿತ್ಯ ಪ್ರಸಾರದ ನಿರಂತರ ಕಾರ್ಯಕ್ರಮ ಮಾಡಿದರು.

8 ಅನಾಥ ಶಾಲೆಗಳು

ಬಸವಕಲ್ಯಾಣ ಸೇರಿದಂತೆ ಜಿಲ್ಲೆಯಾದ್ಯಂತ 8 ಅನಾಥ ಶಾಲೆ ಆರಂಭಿಸಿದ್ದು ಮಾತೆ ಮಹಾದೇವಿ ಅವರ ಅಧ್ಯಕ್ಷತೆಯ ಬಸವ ಮಹಾಮನೆ ಟ್ರಸ್ಟ್ 600 ಕ್ಕೂ ಅಧಿಕ ಅನಾಥ ಮಕ್ಕಳ ಪಾಲನೆ ಮಾಡುತ್ತಿದೆ. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಮಹತ್ವದ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ ಬೀದರ್ ನಗರದ ಚಿತ್ರ ಥಿಯೇಟರ್ ಹತ್ತಿರದ ಬಸವ ಮಂಟಪದಲ್ಲೂ ಅನಾಥ ಬಾಲಕಿಯರ ವಸತಿ ಶಾಲೆ ಆರಂಭಿಸಿದ್ದರು.

ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ

ಮಾತೆ ಮಹಾದೇವಿ ಅವರು ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಆರಂಭಿಸಿದ್ದು ಸಹ ಬೀದರ್​ನಿಂದಲೇ. ನಗರದ ನೆಹರೂ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಅವರು ಸರ್ಕಾರದ ಗಮನ ಸೆಳೆದಿದ್ದರು. ಜನಸ್ತೋಮವನ್ನೇ ಸೇರಿಸಿ ಲಿಂಗಾಯತ ಧರ್ಮದ ಶಕ್ತಿ ಪ್ರದರ್ಶನ ಮಾಡಿದರು. ನಂತರ ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲೂ ಈ ಹೋರಾಟದ ಕಿಚ್ಚು ಹರಡಿಸಿ, ಹೋರಾಡಿದರು.

ಎಂತ ಸಂಕಷ್ಟಗಳು ಎದುರಾದರೂ ಜಗ್ಗದೆ ತಮ್ಮದೇ ದಾರಿಯಲ್ಲಿ ಮುನ್ನಡೆದ ಮಾತೆ ಮಹಾದೇವಿ ಅವರು ಬೀದರ್ ಜಿಲ್ಲೆಯಲ್ಲಿ ಸೇರಿ ಇಡೀ ಕರ್ನಾಟಕದಲ್ಲಿ ತನ್ನದೇ ಚಾಪು ಮೂಡಿಸಿದರು. ಮಾತೆ ಅವರು ಈಗ ನೆನಪು ಮಾತ್ರ. ಅವರ ಸಾಮಾಜಿಕ ನ್ಯಾಯ, ಶೋಷಿತರ ಕಲ್ಯಾಣ, ಬಸವ ತತ್ವ ಪ್ರಚಾರದ ಮೂಲಕ ಮಾತೆ ಮಹಾದೇವಿ ಅವರು ಅವಿಸ್ಮರಣೀಯಾಗಿದ್ದಾರೆ.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.