ETV Bharat / state

ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ - ಬಸವಕಲ್ಯಾಣದ ಹುಲಸೂರ ಪಟ್ಟಣ

ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಡೆಸದಂತೆ ಎಲ್ಲಾ ರೀತಿಯ ಸಭೆ, ಸಮಾರಂಭಗಳನ್ನು ರದ್ದುಪಡಿಸಿದೆ. ಆದರೆ, ದಾಳಿ ನಡೆದರೂ ಸಹ ಜನ ಪ್ರಾರ್ಥನೆಯನ್ನು ಮುಂದುವರೆಸಿದ್ದರು ಎನ್ನಲಾಗಿದೆ..

ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ

author img

By

Published : May 28, 2021, 9:28 PM IST

ಬಸವಕಲ್ಯಾಣ : ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸಾಮೂಹಿಕ ನಮಾಜ್(ಪ್ರಾರ್ಥನೆ) ಸಲ್ಲಿಸುತ್ತಿದ್ದ ಮಸೀದಿ ಮೇಲೆ ತಹಶೀಲ್ದಾರ್​ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿರುವ ಘಟನೆ ಹುಲಸೂರ ಪಟ್ಟಣದಲ್ಲಿ ಜರುಗಿದೆ.

ಪಟ್ಟಣದ ಖುರೇಶಿ ಗಲ್ಲಿಯಲ್ಲಿಯ ಮಸೀದಿಯಲ್ಲಿ ಸುಮಾರು 50ಕ್ಕೂ ಅಧಿಕ ಜನ ಕೂಡಿಕೊಂಡು ಸಾಮೂಹಿಕ ನಮಾಜ್ ಮಾಡುತಿದ್ದರು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತಹಶೀಲ್ದಾರ್​ ಶಿವಾನಂದ ಮೇತ್ರೆ ನೇತೃತ್ವದ ತಂಡ ಮಸೀದಿ ಮೇಲೆ ದಿಢೀರ್​ ದಾಳಿ ನಡೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಡೆಸದಂತೆ ಎಲ್ಲಾ ರೀತಿಯ ಸಭೆ, ಸಮಾರಂಭಗಳನ್ನು ರದ್ದುಪಡಿಸಿದೆ. ಆದರೆ, ದಾಳಿ ನಡೆದರೂ ಸಹ ಜನ ಪ್ರಾರ್ಥನೆಯನ್ನು ಮುಂದುವರೆಸಿದ್ದರು ಎನ್ನಲಾಗಿದೆ.

ಘಟನೆ ಕುರಿತು ಮಸೀದಿ ಇಮಾಮ್​ಗೆ ತಹಶೀಲ್ದಾರ್​ ತರಾಟೆಗೆ ತಗೆದುಕೊಂಡಿದ್ದಾರೆ. ಇದೇ ರೀತಿ ಮತ್ತೊಮ್ಮೆ ನಮಾಜ್ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.