ಬೀದರ್: ಬಿಜೆಪಿ ಮಾತು ಕೊಟ್ಟಂತೆ ನಡೆದುಕೊಂಡಿಲ್ಲ ಎಂದು ಕೆಲ ಮರಾಠಿಗರು ಕಾಂಗ್ರೆಸ್‌ಗೆ ಬಹಿರಂಗ ಬೆಂಬಲ ನೀಡಿದ್ದರು. ಇದರ ಬೆನ್ನಲ್ಲೇ ಈಗ ಇನ್ನೊಂದು ಮರಾಠ ಸಮುದಾಯದ ಬಣ ಬಿಜೆಪಿ ಬೆಂಬಲಕ್ಕೆ ನಿಂತಿದೆ.
ಮಾಜಿ ಶಾಸಕ ಎಂ.ಜಿ.ಮೂಳೆ ಸ್ವಾರ್ಥಕ್ಕಾಗಿ, ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇವತ್ತು ಕಾಂಗ್ರೆಸ್ ಕಡೆ ಹೊರಟ್ಟಿದ್ದಾರೆ. ಅವರು ಒಬ್ಬ ಅವಕಾಶವಾದಿ ಎಂದು ಆಕ್ರೋಶ ಹೊರ ಹಾಕಿ ಮರಾಠ ಸಮುದಾಯದ ಮತ್ತೊಂದು ಬಣ ಬಿಜೆಪಿ ಅಭ್ಯರ್ಥಿ ಪರ ಬ್ಯಾಟಿಂಗ್ ಮಾಡಿದೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೊಷ್ಠಿ ನಡೆಸಿದ ಸಮುದಾಯದ ಮುಖಂಡರು, ಮರಾಠ ಸಮುದಾಯ ಯಾರದ್ದೋ ಆಸ್ತಿ ಅಲ್ಲ. ರಾಜ್ಯದಲ್ಲಿ ಶಿವಾಜಿ ಜಯಂತಿ ಆಚರಣೆ ಚಾಲನೆಗೆ ನೀಡಿದ್ದು ಬಿಜೆಪಿ ಪಕ್ಷ. ಈಶ್ವರ್ ಖಂಡ್ರೆಯವರಿಗೆ ಮರಾಠ ಸಮುದಾಯಕ್ಕೆ '2ಎ' ಗೆ ಸೇರಿಸುವಂತೆ ಹತ್ತು ಹಲವಾರು ಬಾರಿ ಮನೆಗೆ ಹೋಗಿದ್ದರೂ ಕ್ಯಾರೆ ಎಂದಿಲ್ಲ. ಅವರಿಗೆ ನಾವು ಬೆಂಬಲಿಸುವುದಿಲ್ಲ ಎಂದರು.
ಈಶ್ವರ್ ಖಂಡ್ರೆ ಅವರಿಗೆ ಈಗ ಮರಾಠ ಸಮುದಾಯದ ಬಗ್ಗೆ ಪ್ರೀತಿ ಹುಟ್ಟುಕೊಂಡಿದೆ. ಯಾವ ಮುಖ ಇಟ್ಟುಕೊಂಡು ಮತ ಕೇಳಲು ಬರುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ '2ಎ' ಗೆ ಸೇರಿಸುವ ಭರವಸೆ ಯಡಿಯೂರಪ್ಪ ಕೊಟ್ಟಿದರು. ಅವರು ಅಧಿಕಾರಕ್ಕೆ ಬಂದಿಲ್ಲ. ಹೀಗಾಗಿ ನಾವು ಬಿಜೆಪಿ ಪರವಾಗಿ ಮರಾಠ ಸಮುದಾಯದ ಶೇ. 90 ರಷ್ಟು ಮತಗಳಿರುತ್ತವೆ ಎಂಬ ಭರವಸೆ ಹೊರ ಹಾಕಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ಮಾಜಿ ಜಿ.ಪಂ ಅಧ್ಯಕ್ಷ ಬಾಬುರಾವ್ ಕಾರಭಾರಿ, ಪದ್ಮಾಕರ ಪಾಟೀಲ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.