ETV Bharat / state

ಬೀದರ್ ನಲ್ಲಿ ಲಾಠಿ ತಗುಲಿ ವ್ಯಕ್ತಿ ಮುಖಕ್ಕೆ ಗಂಭೀರ ಗಾಯ...ಎಎಸ್ ಐ ಸಸ್ಪೆಂಡ್...!

author img

By

Published : Apr 9, 2020, 11:33 AM IST

ಬೀದರ್​​​ನಲ್ಲಿ ಪೊಲೀಸ್​ ಸಿಬ್ಬಂದಿಯ ಲಾಠಿ ತಗುಲಿ ಬೈಕ್​ ಸವಾರನೊಬ್ಬ ಗಂಭೀರ ಗಾಯಗೊಂಡಿದ್ದಾರೆ .

man-injured-by-police-latthy
ಲಾಠಿ ತಗುಲಿ ವ್ಯಕ್ತಿ ಮುಖಕ್ಕೆ ಗಂಭೀರ ಗಾಯ

ಬೀದರ್: ಲಾಕ್ ಡೌನ್ ವೇಳೆ ನಿರ್ಲಕ್ಷ್ಯತನದಿಂದ ವ್ಯಕ್ತಿಯೊಬ್ಬನಿಗೆ ಲಾಠಿಯಿಂದ ಗಾಯಗೊಳಿಸಿದ ಹಿನ್ನೆಲೆ ಹುಮನಾಬಾದ್ ಠಾಣೆ ಎಎಸ್ ಐ ಬಸವರಾಜ ಅವರನ್ನು ಸಸ್ಪೆಂಡ್ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್ ಅವರು ಆದೇಶ ಹೊರಡಿಸಿದ್ದಾರೆ.

ಲಾಕ್​ಡೌನ್​ ನಿಷೇಧಾಜ್ಞೆ ಉಲ್ಲಂಘಿಸಿ ಹುಮನಾಬಾದ್ ಪಟ್ಟಣದ ಬಡಾವಣೆಗಳ ರಸ್ತೆಗಳಲ್ಲಿ ಜನ ಸೇರಿದ್ರು. ಹೀಗಾಗಿ ಎಎಸ್ ಐ ಬಸವರಾಜ ಅವರಿಗೆ ಬುದ್ಧಿ ಕಲಿಸಲು ಬೈಕ್ ನಲ್ಲಿದ್ದ ಲಾಠಿ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಹಿಂಬದಿಯಿಂದ ಬಂದ ಬೈಕ್ ಸವಾರ ಸಾಸೀರ್ ಮುಖಕ್ಕೆ ಲಾಠಿ ತಗುಲಿದೆ. ನಾಸೀರ್ ಗಂಭೀರ ಗಾಯಗೊಂಡಿದ್ದಾರೆ. ಇವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕಲ್ಬುರ್ಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

ಕರ್ತವ್ಯದಲ್ಲಿದ್ದ ಎಎಸ್ ಐ ಬಸವರಾಜ ಬೈಕ್ ಸವಾರ ನಾಸೀರ್ ಮೂಗಿಗೆ ಗಾಯಗೊಳಿಸಿದ್ದು ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿತನ ಎಂದು ಮೇಲ್ನೊಟಕ್ಕೆ ಸಾಬೀತಾಗಿದ್ದು, ಇಲಾಖೆ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದಲೆ ಅಮಾನತುಗೊಳಿಸಿ ಆದೇಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.