ETV Bharat / state

ಶುದ್ದ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಿ: ಅಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ - ಕರಕ್ಯಾಳ ಗ್ರಾಮ

ಅರಣ್ಯ ಇಲಾಖೆಯಿಂದ ರಾಜ್ಯಾದ್ಯಂತ 5 ಕೋಟಿ ಸಸಿಗಳನ್ನು ನೆಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

Minister Khandre visited the house of Shivaji Tomburale
ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದ ಶಿವಾಜಿ ತೊಂಬುರಲೆ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಚಿವ ಖಂಡ್ರೆ
author img

By

Published : Jun 22, 2023, 10:39 PM IST

Updated : Jun 22, 2023, 10:54 PM IST

ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದ ಶಿವಾಜಿ ತೊಂಬುರಲೆ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಚಿವ ಖಂಡ್ರೆ

ಬೀದರ: ಕರಕ್ಯಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥರಾಗಿರುವುದು ವಿಷಾದನೀಯ ಸಂಗತಿ. ಇಂಥ ಘಟನೆಗಳು ಮರುಕಳಿಸಬಾರದು. ಶುದ್ಧ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕೆಂದು ಅರಣ್ಯ ಪರಿಸರ ಮತ್ತು ಜೀವನ ಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಔರಾದ ತಾಲೂಕಿನ ಕರಕ್ಯಾಳ ಗ್ರಾಮದ ಶಿವಾಜಿ ತೊಂಬುರಲೆ ಅವರ ಮನೆಗೆ ಇಂದು ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ ಬಳಿಕ ಅಧಿಕಾರಿಗಳೊಂದಿಗೆ ಸಚಿವರು ಮಾತನಾಡಿದರು. ಸಿಇಒ, ಇಒ, ಪಿಡಿಒ ತಹಸೀಲ್ದಾರ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಲುಷಿತ ನೀರಿಗೆ ಏನೂ ಕಾರಣ ಬೊರ್‌ವೆಲ್ ನೀರಿನಿಂದ ಆಗಿದೆಯೇ ಅಥವಾ ಪೈಪ್‌ಲೈನ್ ಲೀಕೇಜ್​ನಿಂದ ಕಲುಷಿತವಾಗಿದೆಯೇ ಎನ್ನುವುದನ್ನು ಪರಿಶೀಲಿಸಿ ಇದನ್ನು ಸರಿಪಡಿಸಬೇಕು. ಮುಂದೆ ಇಂತಹ ಘಟನೆ ಮರುಕಳಿಸಬಾರದು. ಒಂದು ವೇಳೆ ಹಾಗೇನಾದರೂ ಆದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಮಾಡಿದರು.

ಈಗಾಗಲೇ ಈ ಗ್ರಾಮದಲ್ಲಿ 25 ಜನರು ಅಸ್ವಸ್ಥರಾಗಿದ್ದು ಎಲ್ಲರೂ ಗುಣಮುಖರಾಗಿದ್ದಾರೆ. ಒಬ್ಬರು ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕಲುಷಿತ ನೀರು ಸೇವನೆಯಿಂದ ಜನರು ಸಾವಿಗೀಡಾಗಿದ್ದು, ಇಂತಹ ಘಟನೆಗಳು ನಮ್ಮ ಜಿಲ್ಲೆಯಲ್ಲಿ ನಡೆಯಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಡಿಯುವ ನೀರಿನ ಟ್ಯಾಂಕ್​ಗಳನ್ನು ಸುಮಾರು ವರ್ಷಗಳಾದರೂ ತೊಳೆಯುವುದಿಲ್ಲ, ಅದರಲ್ಲಿ ಏನೇನೋ ಬಿದ್ದಿರುತ್ತವೆ. ಜನರು ಹಾಗೆಯೇ ನೀರು ಕುಡಿಯುತ್ತಾರೆ. ಹೀಗಾಗಿ ನೀರಿನ ಟ್ಯಾಂಕ್​​ಗಳನ್ನು ಆಗಾಗ್ಗೆ ಸ್ವಚ್ಚಮಾಡುತ್ತಿರಬೇಕು ಎಂದರು.

ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು 15 ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರಿಗೆ ಅನುಮತಿ ನೀಡಬೇಕು ಮತ್ತು ಕರಕ್ಯಾಳ ಗ್ರಾಮದಲ್ಲಿ ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಬೇಕು. ನೀರು ಗಾಳಿ ಶಬ್ದ ಮಾಲಿನ್ಯ ಕಲುಷಿತ ಮಾಡುವವರ ವಿರುದ್ಧ ನಮ್ಮ ಇಲಾಖೆಯಿಂದ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಸ್ವಚ್ಚತೆ ಕಡೆಗೆ ಸಾರ್ವಜನಿಕರು ಗಮನ ಕೊಡಬೇಕು. ಸರ್ಕಾರ ಮಾಡುವುದು ಮಾತ್ರವಲ್ಲ ನಾವು ಮೊದಲು ಜಾಗೃತರಾದಾಗ ಮಾತ್ರ ಸ್ವಚ್ಚತೆಯ ಅರಿವು ನಮ್ಮಲ್ಲಿ ಬರುತ್ತದೆ. ಬೋರ್‌ವೆಲ್ ಎಲ್ಲಿ ಹಾಕಬೇಕು ಎಂದು ಯೋಜನೆ ರೂಪಿಸಿ ಕೆಲಸ ಮಾಡಬೇಕು. ಕಲುಷಿತ ಇರುವಲ್ಲಿ ಹಾಕಿದರೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಕರಿಕ್ಯಾಳ ಗ್ರಾಮದಲ್ಲಿ ಆದ ಘಟನೆಗೆ ನಮ್ಮ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದರಿಂದ ಯಾವುದೇ ಜೀವ ಹಾನಿಯಾಗಿಲ್ಲ. ಈ ಸಂದೇಶ ಜಿಲ್ಲಾದ್ಯಂತ ಹೋಗಬೇಕು. ನಮ್ಮ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಸ್ವಚ್ಛ ಊರು ಸ್ವಚ್ಛ, ನೀರು ನಮ್ಮದಾಗಬೇಕು ಎಂದ ಅವರು, ರಾಜ್ಯದಾದ್ಯಂತ ಅರಣ್ಯ ಇಲಾಖೆಯಿಂದ 5 ಕೋಟಿ ಸಸಿಗಳನ್ನು ಜುಲೈ 1 ರಂದು ನೆಡಲಾಗುತ್ತಿದ್ದು ಎಲ್ಲರೂ ತಮ್ಮ ಗ್ರಾಮಗಳಲ್ಲಿ ಸಸಿಗಳನ್ನು ನೆಡುವದರ ಜೊತೆಗೆ ಅವುಗಳ ಪಾಲನೆ, ಪೋಷಣೆ ಮಾಡಬೇಕೆಂದರು.

ಇದನ್ನೂಓದಿ: ಕಾಂಗ್ರೆಸ್ ಗ್ಯಾರಂಟಿಗಳನ್ನು ಈಡೇರಿಸದಿದ್ದಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ: ಬಿ.ಎಸ್.ಯಡಿಯೂರಪ್ಪ

Last Updated : Jun 22, 2023, 10:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.