ಬೀದರ್: ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯನಾಗಿ ಅವಿರೋಧವಾಗಿ ಆಯ್ಕೆಯಾದ ಗೋಪಿಚಂದ ಪಡಳಕರ ಕುರಿಗಾಹಿ ವೇಷದಲ್ಲಿ ಎಂಟ್ರಿ ಕೊಟ್ಟು ಎಲ್ಲರ ಗಮನ ಸೇಳೆದಿದ್ದಾರೆ.
ಮುಂಬೈನ ಮಂತ್ರಾಲಯದಲ್ಲಿ ಇಂದು ಪ್ರಮಾಣ ವಚನ ಸ್ವೀಕರಿಸಲು ಆಗಮಿಸಿದ ಗೋಪಿಚಂದ ಪಡಳಕರ ಅವರು ತಲೆ ಮೇಲೆ ಹಳದಿ ಬಣ್ಣದ ಪೇಟಾ, ಕೈಯಲ್ಲಿ ದೊಣ್ಣೆ, ಹೆಗಲ ಮೇಲೆ ಗೊಂಘಡಿ (ಕುರಿ ಉಣ್ಣೆಯಿಂದ ಮಾಡಿದ ಹೊದಿಕೆ) ಹಾಕಿಕೊಂಡು ಅಪ್ಪಟ ಕುರಿಗಾಹಿ ವೇಷದಲ್ಲಿ ಪ್ರತ್ಯಕ್ಷವಾಗಿದ್ದರು.

ಮೂಲತಃ ಸಾಂಗಲಿ ಜಿಲ್ಲೆಯವರಾದ ಗೋಪಿಚಂದ ಪಡಳಕರ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ತಮ್ಮ ಸಮುದಾಯದ ಸಾಂಪ್ರದಾಯಿಕ ವೇಷ ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖದ ಮೇಲೆ ಕಪ್ಪು ಬಣ್ಣದ ಮಾಸ್ಕ್ ಹಾಗೂ ಕೈಯಲ್ಲಿ ಬಿಳಿ ಬಣ್ಣದ ಗ್ಲೌಸ್ ಹಾಕಿಕೊಂಡ ಪ್ರತಿಜ್ಞಾವಿಧಿ ಪಡೆದರು. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ತಾಗಿ ವೈರಲ್ ಆಗಿವೆ.