ಬೀದರ್: ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜಸಿಂಗ್ ಚವ್ಹಾಣ್ ಮತಯಾಚಿಸಿದರು.
ಕಲಬುರಗಿ ಜಿಲ್ಲೆ ಚಿಂಚೋಳಿ ಪಟ್ಟಣದ ಪೊಲೀಸ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಬೀದರ್ನಲ್ಲಿ ಭಗವಂತ ಖೂಬಾ ಹಾಗೂ ಕಲಬುರಗಿಯಲ್ಲಿ ಡಾ. ಉಮೇಶ್ ಜಾಧವ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ರಾಜ್ಯದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕುವುದರಲ್ಲೇ ಕಾಣಿಸಿಕೊಂಡಿದ್ದು ಹೆಚ್ಚು. ಅತಿ ಹೆಚ್ಚು ಸ್ಥಾನ ಪಡೆದರೂ ಕಡಿಮೆ ಸ್ಥಾನದ ಜೆಡಿಎಸ್ಗೆ ಅಧಿಕಾರ ಕೊಟ್ಟು ಸುಮ್ಮನೆ ಕೂಡುವಂಥ ಸರ್ಕಾರ ಬೇಕಾ...? ಬಿಜೆಪಿ ನೇತೃತ್ವದ ಅತ್ಯುತ್ತಮ ಸರ್ಕಾರ ಬೇಕಾ ನಿವೇ ನಿರ್ಧರಿಸಿ ಎಂದು ಚವ್ಹಾಣ್ ಹೇಳಿದರು.
ಭಗವಂತ ಖೂಬಾ, ಡಾ. ಉಮೇಶ ಜಾಧವ, ಮಾಜಿ ಸಚಿವರಾದ ಸುನೀಲ ವಲ್ಯಾಪೂರೆ, ಬಾಬುರಾವ್ ಚಿಂಚನಸೂರ, ಬಿಜೆಪಿ ಜಿಲ್ಲಾಧ್ಯಕ್ಷರುಗಳಾದ ಡಾ. ಶೈಲೇಂದ್ರ ಬೇಲ್ದಾಳೆ, ದೊಡ್ಡಗೌಡ ಪಾಟಿಲ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.