ಬೀದರ್: ರೈತರಿಂದ 5 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಭೂ ಅಧೀಕ್ಷಕ ಚಿತ್ತಣ್ಣ ಪಾಟೀಲ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ.
ಆರೋಪಿಯು ತಾಲೂಕಿನ ಲಖನಗಾಂವ್ ಗ್ರಾಮದ ರೈತ ಸಂಜೀವಕುಮಾರ ಚಂದ್ರಕಾಂತ ಅವರಿಂದ ಜಮೀನು ಸರ್ವೇ ಸಂಬಂಧ ಪಟ್ಟಣದ ಹೊರವಲಯದ ಡಾಬಾವೊಂದರಲ್ಲಿ ಸುಮಾರು 40 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ನಂತರ 15 ಸಾವಿರ ರೂಪಾಯಿ ಲಂಚಕ್ಕೆ ಒಪ್ಪಿದ್ದರು ಎನ್ನಲಾಗ್ತಿದೆ. ಆ 15 ಸಾವಿರದಲ್ಲಿ ಭಾನುವಾರ ಮುಂಗಡವಾಗಿ 5 ಸಾವಿರ ರೂ. ನಗದನ್ನು ಲಂಚವಾಗಿ ರೈತನಿಂದ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ಲೋಕಾಯುಕ್ತ ಡಿವೈಎಸ್‌ಪಿ ನೀಲಪ್ಪ ಓಲೇಕಾರ್ ಅವರ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿ ಚಿತ್ತಣ್ಣ ಅವರನ್ನು ಬಂಧಿಸಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಲೋಕಾಯುಕ್ತ ದಾಳಿ: ಮುಡಾ ತಹಶೀಲ್ದಾರ್ ಸೇರಿ ಮೂವರು ವಶಕ್ಕೆ