ಬೀದರ್: ಇಲ್ಲಿನ ಕಾನೂನು ಪದವಿ ವಿದ್ಯಾರ್ಥಿಯೊಬ್ಬನನ್ನು ಅಪರಿಚಿತರು ಅಪಹರಣ ಮಾಡಿದ್ದಾರೆ ಎಂದು ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಭಾಲ್ಕಿಯ ಅಭಿಷೇಕ್ ಜಿಂದೆ ಎಂಬಾತನನ್ನು ಅಪರಹರಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಅಭಿಷೇಕ್ ಜಿಂದೆ ಅವರ ಚಿಕ್ಕಪ್ಪ ಅರವಿಂದ ಜಿಂದೆ ಅವರು ಭಾಲ್ಕಿ ಟೌನ್ ಪೊಲೀಸರಿಗೆ ತನ್ನ ಅಣ್ಣನ ಮಗ ಅಭಿಷೇಕ್ ಅವರನ್ನು ಯಾರೋ ಮೂವರು ಅಪರಿಚಿತರು ಅಪಹರಿಸಿದ್ದಾರೆ ಎಂದು ದೂರು ನೀಡಿದ್ದಾರೆ.
ಗುರುವಾರ ಭಾಲ್ಕಿ ಪಟ್ಟಣದ ನಡು ಬೀದಿಯಲ್ಲಿ ಅಭಿಷೇಕ್ನನ್ನು ಅಪಹರಿಸಿದ್ದಾರೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಕಾನೂನು ವ್ಯಾಸಂಗ ಮಾಡ್ತಿದ್ದ ಅಭಿಷೇಕ್ ನಾಪತ್ತೆಯಾದ ಕುರಿತು ದೂರು ದಾಖಲಾಗಿದೆ.
ಇದನ್ನೂ ಓದಿ: ಮೂರೇ ದಿನಗಳಲ್ಲಿ ಪಾಸ್‍ಪೋರ್ಟ್ ಪರಿಶೀಲನೆ ಪೂರ್ಣ; ಬೆಳಗಾವಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ