ETV Bharat / state

ಚಂಡಕಾಪೂರ ಗ್ರಾಪಂನ 7 ಜನ ಸದಸ್ಯರ ಅಪಹರಣ: ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡಿಕೆ - ಬಸವಕಲ್ಯಾಣ ಸುದ್ದಿ

ಚಂಡಕಾಪೂರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸದಸ್ಯೆ ಪುತಳಾಬಾಯಿ ಕುಟುಂಬದವರು ಸದಸ್ಯರನ್ನು ಅಪಹರಿಸಿದ್ದು, ಮಹಿಳಾ ಸದಸ್ಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

Chandapura
ಬಸವಕಲ್ಯಾಣ
author img

By

Published : Jan 30, 2021, 9:27 PM IST

ಬಸವಕಲ್ಯಾಣ(ಬೀದರ್​): ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಮತದಾನಕ್ಕಾಗಿ ತೆರಳುತಿದ್ದ ಸದಸ್ಯರ ಮೇಲೆ ಅಧ್ಯಕ್ಷ ಆಕಾಂಕ್ಷಿಯೊಬ್ಬರ ಕುಟುಂಬದವರು ಹಲ್ಲೆ ನಡೆಸಿ, 7 ಜನ ಸದಸ್ಯರನ್ನು ಅಪಹರಿಸಿಕೊಂಡು ಹೋದ ಪ್ರಸಂಗ ತಾಲೂಕಿನ ಚಂಡಕಾಪೂರ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಚಂಡಕಾಪೂರ ಗ್ರಾಪಂನ ಸದಸ್ಯರ ಅಪಹರಣ

ಚಂಡಕಾಪೂರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸದಸ್ಯೆ ಪುತಳಾಬಾಯಿ ಕುಟುಂಬದವರು ಸದಸ್ಯರನ್ನು ಅಪಹರಿಸಿದ್ದು, ಮಹಿಳಾ ಸದಸ್ಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸದಸ್ಯೆ ಮಹಾದೇವಿ ದಯಾನಂದ ಸ್ವಾಮಿ ಎನ್ನುವರು 6 ಜನರ ವಿರುದ್ಧ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಪುತಳಾಬಾಯಿ ಕುಟುಂಬದವರು ಒಬ್ಬ ಸದಸ್ಯರಿಗೆ ತಲಾ 2 ಲಕ್ಷದ ಆಮಿಷವೊಡ್ಡಿದ್ದರಂತೆ. ಇದನ್ನು ನಿರಾಕರಿಸಿ 10 ಜನ ಸದಸ್ಯರು ಕಲಬುರಗಿ ತುಳಜಾಪುರ ಮತ್ತಿತ್ತರ ಕಡೆಗೆ ಯಾತ್ರೆ ಹೋಗಿದ್ದು, ಕಲಬುರಗಿಯಿಂದ ಶನಿವಾರ ಚಡಂಕಾಪೂರ ಗ್ರಾಮದ ಕಡೆ ವಾಪಸ್ ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಡೋಳಾ ಸಮೀಪ 20ರಿಂದ 25 ಜನ ವಾಹನಗಳಿಗೆ ಅಡ್ಡಗಟ್ಟಿ 7 ಜನ ಸದಸ್ಯರಿಗೆ ಒತ್ತಾಯದಿಂದ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಯತ್ನ.. ವಿಡಿಯೋ

ಘಟನೆಯಲ್ಲಿ ಇಬ್ಬರು ಮಹಿಳೆಯರಿಗೆ ಗಾಯಗಳಾಗಿವೆ ಎಂದು ಮಹಾದೇವಿ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಠಾಣೆ ಪೊಲೀಸರ ತಂಡ, ಆರೋಪಿಗಳ ಬಂಧನಕ್ಕಾಗಿ ಜಾಲ ಬೀಸಿದೆ.

ಚುನಾವಣೆ ಮಂದೂಡಿಕೆ:

ಚಂಡಕಾಪೂರ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಅಗತ್ಯ ಸದಸ್ಯರ ಸಂಖ್ಯೆ ಲಭ್ಯವಿಲ್ಲದ ಕಾರಣ ಚುನಾವಣೆ ಪ್ರಕ್ರಿಯೆ ಮುಂದೂಡಲಾಯಿತು. ಒಟ್ಟು 20 ಜನ ಸದಸ್ಯ ಬಲದ ಚಂಡಕಾಪೂರ ಗ್ರಾಪಂಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಶನಿವಾರ ದಿನಾಂಕ ನಿಗದಿಯಾಗಿತ್ತು. ಪೂರ್ವ ನಿಗದಿಯಂತೆ ಶನಿವಾರ ಬೆಳಗ್ಗೆ ನಿಗದಿತ ಸಮಯಕ್ಕೆ ಚುನಾವಣಾಧಿಕಾರಿಗಳು ಹಾಜರಾಗಿದ್ದರು. ಆದರೆ 20 ಜನ ಸದಸ್ಯರ ಪೈಕಿ 9 ಜನ ಸದಸ್ಯರು ಮಾತ್ರ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಕೋರಂ ಕೊರತೆ ಕಾರಣ ಚುನಾವಣೆ ಪ್ರಕ್ರಿಯೆ ಮುಂದೂಡಲಾಯಿತು ಎಂದು ಚುನಾವಣಾಧಿಕಾರಿ ನಾಗರೆಡ್ಡಿ ಕಲ್ಲೂರೆ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.