ETV Bharat / state

ಕಲ್ಯಾಣ ಕರ್ನಾಟಕ ಯುವ ಸಮಾವೇಶದಲ್ಲಿ ಗಮನ ಸೆಳೆದ ವಸ್ತು ಪ್ರದರ್ಶನ - Welfare Karnataka Youth Parliament -2020

ನಗರದ ರಥ ಮೈದಾನದಲ್ಲಿ ಆಯೋಜಿಸಿರುವ ಕಲ್ಯಾಣ ಕರ್ನಾಟಕದ ಯುವ ಸಂಸತ್ತು-2020 ಹಾಗೂ ವಸ್ತು ಪ್ರದರ್ಶನ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

Kalyana Karnataka Youth Conference
ಗಮನ ಸೆಳೆದ ವಸ್ತು ಪ್ರದರ್ಶನ
author img

By

Published : Feb 15, 2020, 7:51 PM IST

ಬಸವಕಲ್ಯಾಣ: ಸೇಡಂನ ಶ್ರೀಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ವಿಕಾಸ ಅಕಾಡೆಮಿ ಆಶ್ರಯದಲ್ಲಿ ನಗರದ ರಥ ಮೈದಾನದಲ್ಲಿ ಆಯೋಜಿಸಿರುವ ಕಲ್ಯಾಣ ಕರ್ನಾಟಕದ ಯುವ ಸಂಸತ್ತು-2020 ಹಾಗೂ ವಸ್ತು ಪ್ರದರ್ಶನ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ವಿವಿಧೆಡೆಯಿಂದ ಆಗಮಿಸಿದ ಕಲಾವಿದರು, ವ್ಯಾಪಾರಿಗಳು, ಕುಶಲಕರ್ಮಿಗಳು ನಾನಾ ಬಗೆಯ ವಸ್ತುಗಳ ಪ್ರದರ್ಶಿಸಿದರು. ಪುಸ್ತಕ ಪ್ರಿಯರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಪುಸ್ತಕಗಳು, ಶರಣ ಸಾಹಿತ್ಯ, ಧಾರ್ಮಿಕ ಚಿಂತನೆಗಳ ಗ್ರಂಥಗಳು, ಚಿತ್ರಕಲೆಗೆ ಸಂಬಂಧಿಸಿದ ಪುಸ್ತಕಗಳು ಸೇರಿದಂತೆ ತಮಗೆ ಬೇಕಾದ ಗ್ರಂಥಗಳನ್ನು ಖರೀದಿಸಿದರು.

ಗಮನ ಸೆಳೆದ ವಸ್ತು ಪ್ರದರ್ಶನ

ಸಿರಿಧಾನ್ಯದಿಂದ ತಯಾರಿಸಿದ ತಿಂಡಿ, ತಿನಿಸುಗಳು, ಖಾದಿ ಬಟ್ಟೆಗಳಿಂದ ತಯಾರಿಸಿದ ಉಡುಪುಗಳ ಅಂಗಡಿಯಲ್ಲಿ ವ್ಯಾಪಾರ ಬಲು ಜೋರಾಗಿತ್ತು. ಕಲ್ಯಾಣ ಕರ್ನಾಟಕ ಭಾಗದ ಐತಿಹಾಸಿಕ ಚರಿತ್ರೆ ಸಾರುವ ಚಿತ್ರ ಪ್ರದರ್ಶನಲ್ಲಿ ಬಸವಾದಿ ಶರಣರು, ಐತಿಹಾಸಿಕ ಸ್ಥಳಗಳು, ಇತಿಹಾಸ ಪುರುಷರು, ರಾಜಕೀಯ ಮುತ್ಸದ್ಧಿಗಳ ಭಾವ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.

ಉದ್ಗೋಗ ಮೇಳದಲ್ಲಿ ನೀರುದ್ಯೋಗಿ ಅಭ್ಯರ್ಥಿಗಳು, ಕಂಪನಿಗಳಲ್ಲಿ ಲಭ್ಯವಿರುವ ಉದ್ಯೋಗಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಆಸಕ್ತರು ಹೆಸರು ನೋಂದಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.