ಬೀದರ್: ಲಾಕ್ಡೌನ್ನಿಂದಾಗಿ ಎರಡು ತಿಂಗಳಿಂದ ಸ್ತಬ್ದವಾಗಿದ್ದ ಸಾರಿಗೆ ಸಂಚಾರಕ್ಕೆ ಇಂದು ಚಾಲನೆ ಸಿಕ್ಕಿದ್ದು, ಬಸ್ ಗಳಲ್ಲಿ ಪ್ರಯಾಣ ಮಾಡ್ತಿರುವ ಪ್ರಯಾಣಿಕರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಭೇಟಿ ಮಾಡಿದ್ದಾರೆ. ಹಾಗೂ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಳ್ಳುವಂತೆ ಇದೇ ವೇಳೆ, ಮನವಿ ಮಾಡಿದರು.
ಜಿಲ್ಲೆಯ ಭಾಲ್ಕಿ ಪಟ್ಟದ ಬಸ್ ನಿಲ್ದಾಣದಲ್ಲಿ ಭಾಲ್ಲಿ - ಬೀದರ್ ಮಾರ್ಗದಲ್ಲಿ ಸಂಚರಿಸುವ ಬಸ್ ನಲ್ಲಿ ಪ್ರಯಾಣಿಕರಿಗೆ ಬಿಸ್ಕೇಟ್, ನೀರು, ಮಾಸ್ಕ್, ಸ್ಯಾನಿಟಸೈರ್ ವಿತರಣೆ ಮಾಡಿ ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲನೆ ಮಾಡಲೇಬೇಕು ಎಂದು ಚಾಲಕ ಹಾಗೂ ನಿರ್ವಾಹಕರಿಗೆ ಸೂಚನೆ ನೀಡಿದರು.
ಅಲ್ಲದೇ ತಾಲೂಕಿನ ದಾಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಈಶ್ವರ ಖಂಡ್ರೆ ಅವರು ನರೇಗಾ ಯೋಜನೆ ಅಡಿ ಕೆಲಸ ಮಾಡ್ತಿರುವ ಕೂಲಿ ಕಾರ್ಮಿಕರ ಗೋಳು ಆಲಿಸಿದರು.