ಬೀದರ್: ಕೊರೊನಾ ವೈರಸ್ ಭೀತಿಯಿಂದ ಕೂಲಿ ಕೆಲಸಕ್ಕೆ ಮಹಾರಾಷ್ಟ್ರಕ್ಕೆ ಹೋಗಿದ್ದ 30ಕ್ಕೂ ಅಧಿಕ ಯುವಕರು ಕಾಲ್ನಡಿಗೆಯಲ್ಲೇ ಮನೆಗೆ ವಾಪಸಾಗುವಾಗ ಜನರು ಹಿಡಿದು ವಿಚಾರಣೆ ನಡೆಸಿದ್ದಾರೆ.
ಜಿಲ್ಲೆಯ ಔರಾದ್ ಪಟ್ಟಣದ ಹೊರವಲಯದಲ್ಲಿ ಸಾರ್ವಜನಿಕರು 30ಕ್ಕೂ ಅಧಿಕ ಯುವಕರ ವಿಚಾರಣೆ ನಡೆಸಿದ್ದಾರೆ. ಇನ್ನು ತೆಲಂಗಾಣದ ನಿಜಮಾಬಾದ್ ಭಾಗದ ನಿವಾಸಿಗರಾದ ಯುವಕರು, ಕಾಲ್ನಡಿಗೆಯಲ್ಲಿ ತಮ್ಮ ಮನೆಯತ್ತ ಸಾಗಿದ್ದಾರೆ. ಈ ವೇಳೆ ಅನುಮಾನಗೊಂಡ ಸ್ಥಳೀಯರು ವೈರಸ್ ಹರಡುತ್ತೆ, ನೀವು ಅಕ್ರಮವಾಗಿ ಹೀಗೆ ಹೋಗುವುದು ಸರಿಯಲ್ಲ ಎಂದು ಕೂಡಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿ ಎಲ್ಲರ ತಪಾಸಣೆ ಮಾಡಿಸಿದ್ದಾರೆ.
ಇನ್ನು ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಸಾರಿಗೆ ಸಂಚಾರ ಬಂದ್ ಆಗಿದ್ದು, ಈ ಯುವಕರು ಕಾಲ್ನಡಿಗೆಯಲ್ಲೇ ಮನೆಯತ್ತ ಹೊರಟಿದ್ದಾರೆ. ಊಟ, ನೀರಿಲ್ಲದೇ ಕಷ್ಟ ಪಡ್ತಾ ಇದ್ದರು. ನಂತರ ಸ್ಥಳೀಯರೇ ಇವರಿಗೆ ತಿಂಡಿ ನೀಡಿ ಕಳುಹಿಸಿಕೊಟ್ಟಿದ್ದಾರೆ.