ETV Bharat / state

ಚುಳಕಿನಾಲಾ ಜಲಾಶಯ ಒಳ ಹರಿವು ಹೆಚ್ಚಳ; ನದಿ ಪಾತ್ರದ ಜನರು ಎಚ್ಚರ ವಹಿಸಲು ಸೂಚನೆ

ಚುಳಕಿನಾಲಾ ಜಲಾಶಯಕ್ಕೆ ನಿರಂತರವಾಗಿ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದರಿ ಜಲಾಶಯವು ಯಾವುದೇ ಕ್ಷಣದಲ್ಲಾದರೂ ತುಂಬುವ ಹಂತದಲ್ಲಿರುತ್ತದೆ. ಆಣೆಕಟ್ಟಿನ ಜಲಾಶಯದ ಗರಿಷ್ಠ ಮಟ್ಟ ತಲುಪಿದ ತಕ್ಷಣವೇ ಡ್ಯಾಮ್ ಗೇಟ್​​ಗಳನ್ನು ತೆರೆದು ನಾಲಾಕ್ಕೆ ನೀರು ಹರಿಬಿಡಲಾಗುವುದು. ನದಿಯ ಅಕ್ಕಪಕ್ಕದ ಗ್ರಾಮಗಳ ಜನರು, ಸಾರ್ವಜನಿಕರು ನದಿಯಲ್ಲಿ ಇಳಿದು ಈಜುವುದಾಗಲಿ, ಬಟ್ಟೆ ತೊಳೆಯುವುದಾಗಲಿ, ದನಕರುಗಳಿಗೆ ನೀರು ಕುಡಿಸುವುದಾಗಲಿ ಹಾಗೂ ಇನ್ನಿತರ ಯಾವುದೇ ಕಾರಣಕ್ಕಾಗಿ ನದಿಯಲ್ಲಿ ಇಳಿಯಬಾರದು ಎಂದು ಸೂಚನೆ ನೀಡಲಾಗಿದೆ.

increased-flow-of-chulukinala-reservoir-dam-gate-open-possibility
ಚುಳುಕಿನಾಲಾ ಜಲಾಶಯ ಒಳ ಹರಿವು ಹೆಚ್ಚಳ, ಡ್ಯಾಂ ಗೇಟ್ ತೆಗೆಯುವ ಸಾಧ್ಯತೆ, ನದಿ ಪಾತ್ರದ ಜನರು ಎಚ್ಚರ ವಹಿಸಲು ಸೂಚನೆ
author img

By

Published : Oct 1, 2020, 9:02 PM IST

ಬಸವಕಲ್ಯಾಣ: ಹುಲಸೂರು ತಾಲೂಕಿನ ಮುಸ್ತಾಪೂರ ಗ್ರಾಮದ ಚುಳಕಿನಾಲಾ ಜಲಾಶಯ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಕಾರಣ ಜಲಾಶಯ ತುಂಬಿ ಯಾವುದೇ ಕ್ಷಣದಲ್ಲೂ ನೀರು ಹೊರ ಬಿಡುವ ಸಾಧ್ಯತೆ ಇದ್ದು, ನದಿ ಪಾತ್ರದ ಗ್ರಾಮಗಳ ಜನರು ಎಚ್ಚರ ವಹಿಸಬೇಕು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಕೆಪಿಸಿ ವಿಭಾಗ ಸಂಖ್ಯೆ-2 ಭಾಲ್ಕಿ ಕಾರ್ಯಪಾಲಕ ಎಂಜಿನಿಯರ್ ವಿಲಾಸಕುಮಾರ ಮಾಶೆಟ್ಟಿ ತಿಳಿಸಿದ್ದಾರೆ.

ಚುಳಕಿನಾಲಾ ಜಲಾಶಯ ಒಳ ಹರಿವು ಹೆಚ್ಚಳ, ಡ್ಯಾಂ ಗೇಟ್ ತೆಗೆಯುವ ಸಾಧ್ಯತೆ, ನದಿ ಪಾತ್ರದ ಜನರು ಎಚ್ಚರ ವಹಿಸಲು ಸೂಚನೆ

ಚುಳಕಿನಾಲಾ ಜಲಾಶಯಕ್ಕೆ ನಿರಂತರವಾಗಿ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸದರಿ ಜಲಾಶಯವು ಯಾವುದೇ ಕ್ಷಣದಲ್ಲಾದರೂ ತುಂಬುವ ಹಂತದಲ್ಲಿರುತ್ತದೆ. ಆಣೆಕಟ್ಟಿನ ಜಲಾಶಯದ ಗರಿಷ್ಠ ಮಟ್ಟ ತಲುಪಿದ ತಕ್ಷಣವೇ ಡ್ಯಾಮ್ ಗೇಟ್​​ಗಳನ್ನು ತೆರೆದು ನಾಲಾಕ್ಕೆ ನೀರು ಹರಿಬಿಡಲಾಗುವುದು. ಚುಳಕಿನಾಲಾ ಜಲಾಶಯ ಕೆಳಭಾಗದ ಗ್ರಾಮಗಳಾದ ಮುಸ್ತಾಪೂರ, ಮುಚಳಂಬಾ, ತೊಗಲೂರು, ಹೊನ್ನಳಿ, ಗೋರ್ಟಾ(ಬಿ), ಮೋರಂಬಿ, ರಾಚಪ್ಪ ಗೌಡಗಾಂವ, ಕುಟೆಗಾವ, ಲಾಧಾ, ಕೊಟಗೇರಾ ಮತ್ತು ಇಂಚೂರು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಗೆ ನದಿ ಪ್ರವಾಹದಿಂದ ತೊಂದರೆ ಉಂಟಾಗಬಹುದಾಗಿದೆ.

ನದಿಯ ಅಕ್ಕಪಕ್ಕದ ಗ್ರಾಮಗಳ ಜನರು, ಸಾರ್ವಜನಿಕರು ನದಿಯಲ್ಲಿ ಇಳಿದು ಈಜುವುದಾಗಲಿ, ಬಟ್ಟೆ ತೊಳೆಯುವುದಾಗಲಿ, ದನಕರುಗಳಿಗೆ ನೀರು ಕುಡಿಸುವುದಾಗಲಿ ಹಾಗೂ ಇನ್ನಿತರ ಯಾವುದೇ ಕಾರಣಕ್ಕಾಗಿ ನದಿಯಲ್ಲಿ ಇಳಿಯಬಾರದು ಎಂದು ಸೂಚನೆ ನೀಡಿದ್ದಾರೆ. ನದಿಯ ಪಾತ್ರದಲ್ಲಿರುವ ಸಣ್ಣ ನೀರಾವರಿ ಇಲಾಖೆ ಮತ್ತು ಇನ್ನಿತರೆ ಯಾವುದೇ ಇಲಾಖೆಗಳಿಗೆ ಸಂಬಂಧಪಟ್ಟ ಆಸ್ತಿಗಳಿದ್ದಲ್ಲಿ ಮುಂಜಾಗ್ರತೆಯಾಗಿ ಸುರಕ್ಷಿತ ಕ್ರಮಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.