ಬಸವಕಲ್ಯಾಣ: ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ, ಮಾಲೀಕರಿಗೆ ದಂಡ ವಿಧಿಸಿ ನೋಟಿಸ್ ಜಾರಿಗೊಳಿಸಿದೆ.

ತಾಲೂಕು ಆರೋಗ್ಯ ಇಲಾಖೆ ಕಚೇರಿ ಅಧಿಕಾರಿಗಳ ತಂಡದಿಂದ ಘೋಟಾಳ ಗ್ರಾಮದ ವಿವಿಧ ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು. ನಿಯಮ ಉಲ್ಲಂಘಿಸಿದ ಮಾಲೀಕರಿಗೆ ಕೋಟ್ಪಾ ಕಾಯ್ದೆಯಡಿ 600 ರೂ. ದಂಡ ವಿಧಿಸಲಾಯಿತು.
ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ಸಹಾಯಕರಾದ ಲಕ್ಷ್ಮಣ ಜಮ್ಮು, ಶಿವರಾಜ ತಡೋಳಗೆ, ರಾಮಲಿಂಗ ದಾಳಿಯಲ್ಲಿ ಭಾಗವಹಿಸಿದ್ದರು.