ETV Bharat / state

ಬಸವಕಲ್ಯಾಣದಲ್ಲಿ ಅದ್ದೂರಿಯಾಗಿ ಜರುಗಿದ ಬಣ್ಣದ ಹಬ್ಬ - ಬಸವಕಲ್ಯಾಣ ಹೋಳಿ ಹಬ್ಬ

ಹೋಳಿ ಹಬ್ಬದ ನಿಮಿತ್ತ ಬಸವಕಲ್ಯಾಣ ನಗರ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸೋಮವಾರ ತಡರಾತ್ರಿ ವರೆಗೆ ಕಾಮದಹನ ನಡೆದರೆ, ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ರಂಗಿನಾಟ ನಡೆಯಿತು.

holi-festival-celebration-in-basavaklyan
ಬಸವಕಲ್ಯಾಣ ಹೋಳಿ ಹಬ್ಬ ಆಚರಣೆ
author img

By

Published : Mar 11, 2020, 3:16 AM IST

Updated : Mar 11, 2020, 1:30 PM IST

ಬಸವಕಲ್ಯಾಣ: ನಾಡಿನಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು ಬಸವಕಲ್ಯಾಣದಲ್ಲಿಯೂ ಕೂಡಾ ಸೌಹಾರ್ದತೆಯಿಂದ ಬಣ್ಣದ ಹಬ್ಬವನ್ನು ಆಚರಣೆ ಮಾಡಲಾಯಿತು.

ನಗರದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ರಂಗಿನಾಟ ನಡೆಯಿತು. ನಗರದ ಮುಖ್ಯ ರಸ್ತೆ ಸೇರಿದಂತೆ ಬಡಾವಣೆಗಳಲ್ಲಿಯೂ ಹಲವಡೆ ಹಬ್ಬದ ಉತ್ಸಾಹದೊಂದಿಗೆ ಯುವಕರು ಗುಂಪು ಗುಂಪಾಗಿ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರೆ, ಕೆಲವಡೆ ಮಹಿಳೆಯರು, ಮಕ್ಕಳು ಪರಸ್ಪರ ಬಣ್ಣ ಎರಚಿಕೊಂಡು ರಂಗಿನಾಟಕ್ಕೆ ರಂಗು ತಂದರು.

ಬಸವಕಲ್ಯಾಣದಲ್ಲಿ ಅದ್ದೂರಿಯಾಗಿ ಜರುಗಿ ಬಣ್ಣದ ಹಬ್ಬ

ಹೋಳಿ ಹಿನ್ನೆಲೆ ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್​ ಮಾಡಲಾಗಿತ್ತು. ಆಯ್ದ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.

ಕೊರೊನಾ ಭೀತಿ

ಪ್ರತಿ ವರ್ಷ ಕಂಡು ಬರುತ್ತಿದ್ದ ಯುವ ಸಮೂಹ ಈ ವರ್ಷ ತುಸು ಕಡಿಮೆಯಾದಂತೆ ಕಂಡು ಬಂತು. ಮಹಾಮಾರಿ ಕೊರೊನಾ ವೈರಸ್‌ನ ಭಯದಿಂದ ಬಹುತೇಕ ಯುವಕರು ಬಣ್ಣದಾಟದಿಂದ ದೂರ ಉಳಿದಿದ್ದಾರೆ.

Last Updated : Mar 11, 2020, 1:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.