ETV Bharat / state

ಭಾರೀ ಮಳೆಗೆ ನೆಲಕಚ್ಚಿದ ಕಬ್ಬು: ಕಂಗಾಲಾದ ಅನ್ನದಾತ

ಕಳೆದ 3 ದಿನಗಳಿಂದ ಬೀದರ್ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಬಿರುಗಾಳಿ ಸಹಿತ ಭಾರೀ ಮಳೆಗೆ ಫಲವತ್ತಾಗಿ ಬೆಳೆದ ಕಬ್ಬಿನ ಬೆಳೆ ನೆಲಕಚ್ಚಿದೆ.

author img

By

Published : Oct 15, 2020, 10:53 AM IST

sugarcane crop Destroy in Bidar
ಭಾರೀ ಮಳೆಗೆ ನೆಲಕಚ್ಚಿದ ಕಬ್ಬು: ಕಂಗಾಲಾದ ಅನ್ನದಾತ...

ಬೀದರ್: ಕಳೆದ 3 ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಬಿರುಗಾಳಿ ಸಹಿತ ಭಾರೀ ಮಳೆಗೆ ಕಬ್ಬು ಬೆಳೆಗಾರರು ಕಂಗಾಲಾಗಿದ್ದಾರೆ. ಭಾರೀ ಮಳೆಯಿಂದ ಫಲವತ್ತಾಗಿ ಬೆಳೆದ ಕಬ್ಬಿನ ಬೆಳೆ ನೆಲಕಚ್ಚಿದೆ.

ಭಾರೀ ಮಳೆಗೆ ನೆಲಕಚ್ಚಿದ ಕಬ್ಬು: ಕಂಗಾಲಾದ ಅನ್ನದಾತ

ಜಿಲ್ಲೆಯ ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದ ಕಬ್ಬು ಬೆಳೆಗಾರರಾದ ರಾಮಕೃಷ್ಣ ಪಾಂಚಾಳ, ಪ್ರಭುರಾವ್ ಪಾಂಚಾಳ, ಸುರೇಶ ಬಿರಾದರ ಹಾಗೂ ಬಸವರಾಜ ಜಿಳ್ಳೆ ಎಂಬ ರೈತರ ಕಬ್ಬು ಬಿರುಗಾಳಿ ಸಹಿತ ಮಳೆಗೆ ನೆಲಕಚ್ಚಿದೆ. ಸುಮಾರು 8ರಿಂದ 10 ಅಡಿ ಎತ್ತರಕ್ಕೆ ಬೆಳೆದ ಕಬ್ಬಿನ ಗದ್ದೆ ಸಂಪೂರ್ಣವಾಗಿ ನೆಲಸಮವಾಗಿದೆ. ಕಷ್ಟಪಟ್ಟು ಬೆಳೆದ ಕಬ್ಬು ಇನ್ನೇನು ಕಾರ್ಖಾನೆಗಳಿಗೆ ಸಾಗಾಟ ಮಾಡಿ ಕೈ ತುಂಬಾ ಸಂಪಾದನೆ ಕಾಣಬೇಕಾದ ಬೆಳೆಗಾರನಿಗೆ ವರುಣನ ಆರ್ಭಟ ಶಾಪವಾಗಿ ಪರಿಣಮಿಸಿದೆ.

ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಭಾಲ್ಕಿ ಉಪ ತಹಶೀಲ್ದಾರ್ ದಿಲರಾಜ್ ಪಸರಗೆ, ತಾಪಂ ಸದಸ್ಯ ವಿಜಯಕುಮಾರ್ ಕಡಗಂಚಿ ಹಾಗೂ ರೇವಣಸಿದ್ದಪ್ಪ ಜಾಡರ್ ಅವರು ನೊಂದ ರೈತರಿಗೆ ಸಮಾಧಾನ ಹೇಳಿದ್ದಾರೆ. ಈ ವೇಳೆ ರೈತರ ನಷ್ಟಕ್ಕೆ ಪ್ರತಿ ಎಕರೆಗೆ 25000 ರೂಪಾಯಿ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.