ಬಸವಕಲ್ಯಾಣ: ಸ್ನಾನ ಮಾಡುವಾಗ ಹೃದಯಾಘಾತವಾಗಿ ಲಾರಿ ಚಾಲಕನ್ನೊಬ್ಬ ಮೃತಪ್ಪಟ್ಟ ಘಟನೆ ಇಲ್ಲಿಯ ಸಸ್ತಾಪುರ ಬಂಗ್ಲಾದ ಕೈಗಾರಿಕಾ ಪ್ರದೇಶದಲ್ಲಿ ಜರುಗಿದೆ.
ಮಹರಾಷ್ಟ್ರದ ಪೂನಾ ಜಿಲ್ಲೆಯ ದೌಂಡಿ ತಾಲೂಕು ಮೂಲದ ಸತೀಶ ಬಬನರಾವ ಕಾಳೆ(44) ಮೃತ ವ್ಯಕ್ತಿ. ಇಲ್ಲಿಯ ಕೈಗಾರಿಕಾ ಪ್ರದೇಶದಲ್ಲಿರುವ ಲಾರಿ ಗ್ಯಾರೇಜ್‌ನಲ್ಲಿ ತನ್ನ ಲಾರಿ ರಿಪೇರಿಗೆಂದು ಬಂದಿದ್ದ ಈತ ಸ್ನಾನ ಮಾಡಲೆಂದು ಬಯಲು ಪ್ರದೇಶದಲ್ಲಿನ ನೀರಿನ ಹೌದ್ ಬಳಿ ತೆರಳಿದ್ದಾನೆ.
ಸ್ನಾನ ಮಾಡುತ್ತಿದ್ದ ವೇಳೆಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ. ಪಿಎಸ್‌ಐ ಸುನೀಲಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.