ETV Bharat / state

ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿ ಶಿಕ್ಷಕರಿಂದ ಪ್ರತಿಭಟನೆ: ವಿದ್ಯಾರ್ಥಿಗಳ ಪರದಾಟ...! - undefined

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರಿ ಶಾಲೆಯ ಶಿಕ್ಷಕರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಪರಿಣಾಮ ಶಾಲೆಗೆ ಬಂದ ವಿದ್ಯಾರ್ಥಿಗಳು ದಿಕ್ಕು ತೋಚದೆ ಪರದಾಡಿದರು.

ಸರ್ಕಾರಿ ಶಾಲೆ
author img

By

Published : Jul 10, 2019, 3:24 AM IST

ಬೀದರ್: ಶಿಕ್ಷಕರು ಪ್ರತಿಭಟನೆ ಹೆಸರಿನಲ್ಲಿ ಮಂಗಳವಾರ ಶಾಲೆಗೆ ದಿಢೀರ್​ ಬೀಗ ಹಾಕಿರುವ ಹಿನ್ನೆಲೆ ಶಾಲೆಗೆ ಬಂದ ವಿದ್ಯಾರ್ಥಿಗಳು ದಿಕ್ಕು ಕಾಣದೆ ಪರದಾಡಿದ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.

ಶಿಕ್ಷಕರ ಪ್ರತಿಭಟನೆಯಿಂದಾಗಿ ಬಿಕೋ ಎನ್ನುತ್ತಿರುವ ಸರ್ಕಾರಿ ಶಾಲೆಗಳು

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಶಾಲೆ ಶಿಕ್ಷಕರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಜಿಲ್ಲೆಯ ಕೆಲವೊಂದು ಭಾಗದಲ್ಲಿ ಶಿಕ್ಷಕರು ಶಾಲೆಗೆ ಬೀಗ ಹಾಕಿದ್ರೆ ಕೆಲವೆಡೆ ಎಂದಿನಂತೆ ಶಾಲಾ ತರಗತಿಗಳು ನಡೆದಿದೆ. ಔರಾದ್, ಕಮಲನಗರ ಹಾಗೂ ಭಾಲ್ಕಿ ತಾಲೂಕಿನ ಕೆಲವೊಂದು ಸರ್ಕಾರಿ ಶಾಲೆಗಳಿಗೆ ಬೀಗ ಜಡಿಯಲಾಗಿತ್ತು. ಒಬ್ಬರೇ ಒಬ್ಬ ಶಿಕ್ಷಕರೂ ಶಾಲೆಗೆ ಹಾಜರಾಗದ ಕಾರಣ ಶಾಲೆಗೆ ಬಂದ ಮಕ್ಕಳು ದಿಕ್ಕು ಕಾಣದೆ ಪರದಾಡಿದ ಸ್ಥಿತಿ ನಿರ್ಮಾಣವಾಗಿತ್ತು.

ರಾಜ್ಯಾದ್ಯಂತ ಪ್ರತಿಭಟನೆ ಇರುವುದರಿಂದ ಶಾಲಾ ವಾತಾವರಣಕ್ಕೆ ಯಾವುದೇ ತೊಂದರೆಯಾಗದಂತೆ ಮಂಗಳವಾರ ಬಂದ್ ಮಾಡಿರುವ ಶಾಲೆಗಳಲ್ಲಿ ಭಾನುವಾರ ತರಗತಿ ನಡೆಸಿ ಇಂದಿನ ರಜೆ ಸರಿಪಡಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ ಸೂಚಿಸಿದ್ದಾರೆ.

Intro:ಸರ್ಕಾರಿ ಶಾಲೆಗಳಿಗೆ ಬೀಗ, ಶಿಕ್ಷಕರಿಂದ ಪ್ರತಿಭಟನೆ, ವಿಧ್ಯಾರ್ಥಿಗಳ ಪರದಾಟ...!

ಬೀದರ್:
ಶಿಕ್ಷಕರು ಪ್ರತಿಭಟನೆ ಹೆಸರಿನಲ್ಲಿ ದಿಢೀರ ಶಾಲೆಗೆ ಬೀಗ ಹಾಕಿರುವ ಬೆನ್ನಲ್ಲೆ ಶಾಲೆಗೆ ಬಂದ ವಿಧ್ಯಾರ್ಥಿಗಳು ದಿಕ್ಕು ಕಾಣದೆ ಪರದಾಡಿದ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪದವಿಧರ ಶಿಕ್ಷಕರಿಂದ ತರಗತಿಗೆ ಬಹಿಷ್ಕಾರ ಹಾಕಿ ಪ್ರತಿಭಟನೆ ಮಾಡಿದ್ದಾರೆ. ಜಿಲ್ಲೆಯ ಕೆಲವೊಂದು ಭಾಗದಲ್ಲಿ ಶಿಕ್ಷಕರು ಶಾಲೆಗೆ ಬೀಗ ಹಾಕಿದ್ರೆ ಮತ್ತೊಂದ ಕಡೆ ಎಂದಿನಂತೆ ಶಾಲಾ ತರಗತಿಗಳು ನಡೆದಿದೆ. ಔರಾದ್, ಕಮಲನಗರ ಹಾಗೂ ಭಾಲ್ಕಿ ತಾಲೂಕಿನ ಕೆಲವೊಂದು ಸರ್ಕಾರಿ ಶಾಲೆಗಳಿಗೆ ಬೀಗ ಜಡಿಯಲಾಗಿತ್ತು. ಒಬ್ಬರೆ ಒಬ್ಬ ಶಿಕ್ಷಕ ಶಾಲೆಗೆ ಹಾಜರಾಗದ ಕಾರಣ ಶಾಲೆಗೆ ಬಂದ ಮಕ್ಕಳು ದಿಕ್ಕು ಕಾಣದೆ ಪರದಾಡಿದ ಸ್ಥೀತಿ ನಿರ್ಮಾಣವಾಗಿತ್ತು.

ರಾಜ್ಯಾದ್ಯಂತ ಪ್ರತಿಭಟನೆ ಇರುವುದರಿಂದ ಶಾಲಾ ವಾತಾವರಣಕ್ಕೆ ಯಾವುದೇ ತೊಂದರೆಯಾಗದಂತೆ ಮಾಡಬಹುದು ಅಲ್ಲದೆ ಇಂದು ಬಂದ್ ಮಾಡಿರುವ ಶಾಲೆಗಳಲ್ಲಿ ಭಾನುವಾರ ತರಗತಿ ನಡೆಸಿ ಇಂದಿಬ ರಜೆ ಸರಿಪಡಿಸಬೇಕಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.Body:ಅನಿಲConclusion:ಬೀದರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.