ಬೀದರ್: ನಗರದ ಸಾಯಿ ಪುಷ್ಪಾಂಜಲಿ ಕಲ್ಯಾಣ ಮಂಟಪದಲ್ಲಿ ಸೋಮವಾರದಂದು ನಡೆದ ಬಂಗಾರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯಲ್ಲಿ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲ್ಯಾಣ ಮಂಟಪದಲ್ಲಿ ನಡೆದ ಚಿನ್ನ ಕಳವು ಪ್ರಕರಣ ಸಂಬಂಧ ಪೊಲೀಸರು ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಸಿಸಿ ಕ್ಯಾಮರಾ ಸಹಾಯದ ಮೂಲಕ ಪೊಲೀಸರು 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿ 3.80 ಲಕ್ಷ ರೂ. ಮೌಲ್ಯದ 76 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್, ಡಿವೈಎಸ್ಪಿ ಕೆ.ಎಂ.ಸತೀಶ್ ಮಾರ್ಗದರ್ಶನದಲ್ಲಿ ನೂತನ ನಗರ ಠಾಣೆ ಸಿಪಿಐ ಕಪಿಲದೇವ್ ನೇತೃತ್ವದ ತಂಡದಲ್ಲಿ ಪಿಎಸ್ಐಗಳಾದ ರಾಜಪ್ಪ ಮುದ್ದಾ, ಶಿವಪ್ಪ ಮೇಟಿ, ತಸ್ಲೀಮ್ ಸುಲ್ತಾನಾ ಹಾಗೂ ಸಿಬ್ಬಂದಿ ವಿಶ್ವನಾಥ, ನಿಂಗಪ್ಪ, ಶರಣಪ್ಪ, ಭರತ್, ವಿಷ್ಣು, ಶೇಖ್ ಮೋದಿನ್, ಸುನೀಲ ರಾಠೋಡ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಇನ್ನು ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಎಸ್ಪಿ ಡೆಕ್ಕಾ ಕಿಶೋರ ಬಾಬು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ನಕಲಿ ಗೋಲ್ಡ್ ಗ್ಯಾಂಗ್ನಿಂದ ಮೋಸ ಹೋದಿರಾ ಜೋಕೆ.. ವಂಚಕರ ಬಗ್ಗೆ ದಾವಣಗೆರೆ ಎಸ್ಪಿ ಮಾಹಿತಿ