ETV Bharat / state

ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ಸಾವಿರಾರು ರೂ. ಮೌಲ್ಯದ ಕೃಷಿ ಪರಿಕರಗಳು ಭಸ್ಮ

ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಭಸ್ಮವಾದ ಘಟನೆ ಬಸವಕಲ್ಯಾಣ ತಾಲೂಕಿನ ಇಲ್ಲಾಳ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.

fire breaks out in Crib
ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ
author img

By

Published : Mar 4, 2020, 9:13 PM IST

ಬಸವಕಲ್ಯಾಣ/ಬೀದರ್​​: ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಭಸ್ಮವಾದ ಘಟನೆ ಬಸವಕಲ್ಯಾಣ ತಾಲೂಕಿನ ಇಲ್ಲಾಳ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.

ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ

ಶಶಿಕಲಾ ನಿಗಡಗೆ ಎಂಬುವರ ಜಮೀನಿನಲ್ಲಿ ಬೆಂಕಿ ತಗುಲಿದ್ದು, ಜಮೀನಿನಲ್ಲಿ ದನಗಳ ಕೊಟ್ಟಿಗೆ, ದನಗಳಿಗೆ ಹಾಕಲು ಸಂಗ್ರಹಿಸಿ ಇಡಲಾಗಿದ್ದ ಕಣಕಿ ಬಣವೆ, ಹುಲ್ಲಿನ ಕಟ್ಟುಗಳು ಹಾಗೂ ಕೃಷಿ ಪರಿಕರಗಳು ಸೇರಿ ಸುಮಾರು 50 ಸಾವಿರ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಪಕ್ಕದ ಜಮೀನಿನಲ್ಲಿ ರೈತ ತನ್ನ ಜಮೀನಿನಲ್ಲಿ ತ್ಯಾಜ್ಯ ವಸ್ತುಗಳನ್ನು ನಾಶಪಡಿಸಲೆಂದು ಹಚ್ಚಿದ ಬೆಂಕಿ ಶಶಿಕಲಾ ಅವರ ಜಮೀನಿಗೂ ವ್ಯಾಪಿಸಿ ಘಟನೆ ಸಂಭವಿಸಿದ್ದು, ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಬೆಂಕಿಯಿಂದ ಹಾನಿಗೊಳಗಾದ ರೈತ ಮಹಿಳೆಗೆ ಸರ್ಕಾರ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.