ಬೀದರ್: ಹೊಸ ಮೊಟಾರ್ ವಾಹನ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಜಿಲ್ಲೆಯಾದ್ಯಂತ ಪೊಲೀಸರು ಅಲರ್ಟ್ ಆಗಿದ್ದು, 24 ಗಂಟೆಯಲ್ಲಿ 13 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಸೀಟ್ ಬೆಲ್ಟ್ ಧರಿಸದೆ, ಹೆಲ್ಮೆಟ್ ಇಲ್ಲದೆ, ಲೈಸನ್ಸ್, ಇನ್ಸೂರೇನ್ಸ್ ಇಲ್ಲದಕ್ಕೆ ದಿನಾಂಕ 9 ರಂದು ಒಂದೇ ದಿನದಲ್ಲಿ ಮಧ್ಯಾಹ್ನ 1.30 ರಿಂದ 4.30 ರ ವರೆಗೆ ನಡೆದ ಕಾರ್ಯಾಚರಣೆಯಲ್ಲಿ 1012 ಪ್ರಕರಣ ದಾಖಲಾಗಿದ್ದು, ಈ ಪೈಕಿ 9,72,700 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಕಳೆದ ಎರಡು ದಿನಗಳಲ್ಲಿ ಜಿಲ್ಲೆಯಾದ್ಯಂತ ನಡೆದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 1423 ಪ್ರಕರಣ ದಾಖಲಾಗಿದ್ದು, ಈ ಪೈಕಿ 13,07,900 ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಅವರು ತಿಳಿಸಿದ್ದಾರೆ.