ಬೀದರ್ : ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಹಿನ್ನೆಲೆ ಇಂದು 275ಕ್ಕೂ ಹೆಚ್ಚು ಪಿಯು ವಿದ್ಯಾರ್ಥಿನಿಯರು ಕಾಲೇಜಿಗೆ ಗೈರು ಹಾಜರಾದರು. ಕಾಲೇಜು ಪುನಾರಂಭ ಆದರೂ ಕಾಲೇಜಿನತ್ತ ವಿದ್ಯಾರ್ಥಿನಿಯರು ಮುಖ ಮಾಡಲಿಲ್ಲ.
ಬೀದರ್ ನಗರದ ಓಲ್ಡ್ ಸೀಟಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯು ಸೇರಿ ಒಟ್ಟು 580 ವಿದ್ಯಾರ್ಥಿನಿಯರಿದ್ದು, ಈ ಪೈಕಿ ಶೇ 50ರಷ್ಟು ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಹಾಜರು. ಉಳಿದ ಅರ್ಧದಷ್ಟು ವಿದ್ಯಾರ್ಥಿನಿಯರು ಕಾಲೇಜಿಗೆ ಗೈರು ಹಾಜರಾಗಿದ್ದರು.
ಹಿಜಾಬ್ ಮತ್ತು ಟೋಪಿ ಧರಿಸಿ ಬಂದ ವಿದ್ಯಾರ್ಥಿಗಳನ್ನು ತಡೆದ ಪೊಲೀಸರು: ಜಿಲ್ಲೆಯ ಹುಮನಾಬಾದ್ ಪಟ್ಟದ ವೀರಭದ್ರೇಶ್ವರ ಕಾಲೇಜಿಗೆ ಕಾಲೇಜಿಗೆ ಹಿಜಾಬ್ ಮತ್ತು ಟೋಪಿ ಧರಿಸಿ ಬಂದ ವಿದ್ಯಾರ್ಥಿಗಳನ್ನು ಪೊಲೀಸರು ತಡೆದು ಸರ್ಕಾರಿ ಆದೇಶ ಪಾಲಿಸುವಂತೆ ತಿಳಿ ಹೇಳಿದರು..
ಇದನ್ನೂ ಓದಿ: ಹಿಜಾಬ್ ಪ್ರಕರಣದ ವಿಚಾರಣೆ ನಾಳೆ ಮಧ್ಯಾಹ್ನಕ್ಕೆ ಮುಂದೂಡಿಕೆ