ETV Bharat / state

144 ಸೆಕ್ಷನ್​ ಜಾರಿಯಿಂದ ಶಾಂತಿಯುತ ಪ್ರತಿಭಟನೆಗೂ ಬ್ರೇಕ್​

author img

By

Published : Dec 20, 2019, 12:00 AM IST

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾರ ಬಸಕಲ್ಯಾಣದಲ್ಲಿ ನಡೆಯಬೇಕಿದ್ದ ಬೃಹತ್ ಪ್ರತಿಭಟನೆ ರದ್ದುಗೊಂಡಿದ್ದು, ನಗರದಲ್ಲಿ ಜನಜೀವನ ಎಂದಿನಂತೆ ಕಂಡು ಬಂತು.

Failure to make a peaceful protest at Basavakalyana
144 ಸೆಕ್ಷನ್​ ಜಾರಿಯಾದರೂ ಸಹ  ಶಾಂತಿಯುತ ಪ್ರತಿಭಟನೆಗೆ ಕೈಗೊಂಡ ನಿರ್ಧಾರ ವೈಫಲ್ಯ !

ಬಸವಕಲ್ಯಾಣ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾರ ನಗರದಲ್ಲಿ ನಡೆಯಬೇಕಿದ್ದ ಬೃಹತ್ ಪ್ರತಿಭಟನೆ ರದ್ದುಗೊಂಡಿದ್ದು, ನಗರದಲ್ಲಿ ಜನಜೀವನ ಎಂದಿನಂತೆ ಕಂಡುಬಂತು.

ಜಮಾತೆ ಇಸ್ಲಾಮಿ ಹಿಂದ್, ಜಮಾತ್ ಉಲ್ಮಾ ಹಿಂದ್, ಬೀಮ್ ಆರ್ಮಿ ಸೇರಿದಂತೆ ವಿವಿಧ ಮುಸ್ಲಿಂ ಪರ ಸಂಘಟನೆಗಳು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ, ನಗರದ ಬಂದ್ ಆಚರಣೆಗೆ ನಿರ್ಧರಿಸಿದ್ದವು. ಆದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿರುವ ಬಗ್ಗೆ ಸುಳಿವು ಅರಿತ ರಾಜ್ಯ ಸರ್ಕಾರ ಬುಧವಾರ ಸಂಜೆಯೇ ರಾಜ್ಯಾದ್ಯಂತ 144 ಸೆಕ್ಷನ್ ಜಾರಿಗೊಳಿಸುವ ಮೂಲಕ ಪ್ರತಿಭಟನೆಗೆ ಅವಕಾಶ ನಿರಾಕರಿಸಿತು.

144 ಸೆಕ್ಷನ್​ ಜಾರಿಯಿಂದ ಶಾಂತಿಯುತ ಪ್ರತಿಭಟನೆಗೂ ಬ್ರೇಕ್​

ಸರ್ಕಾರದ ಆದೇಶ ಹೊರ ಬೀಳುತಿದ್ದಂತೆ ತಡ ರಾತ್ರಿ 1 ಗಂಟೆವರೆಗೆ ನಗರದ ಶಾಸಕರ ಕಚೇರಿಯಲ್ಲಿ ಸಭೆ ಸೇರಿದ ಸಂಘಟನಾಕಾರರು, ಶಾಸಕ ಬಿ. ನಾರಾಯಣರಾವ ಸಮ್ಮುಖದಲ್ಲಿ ಮುಂದಿನ ತಯಾರಿ ಬಗ್ಗೆ ಚರ್ಚೆ ನಡೆಸಿದವು. ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದ್ರೆ, ಪೊಲೀಸ್ ಇಲಾಖೆಯಿಂದ ಅನುಮತಿ ಕೊಡಿಸುವಂತೆ ಶಾಸಕರ ಮೇಲೆ ಒತ್ತಡವನ್ನೂ ಹೇರಲಾರಂಭಿಸಿದ್ದರು.

ಆದರೆ ಇದಕ್ಕೆ ಜಗ್ಗದ ಶಾಸಕ ನಾರಾಯಣರಾವ, ಕಾನೂನಿಗೆ ಪ್ರತಿಯೊಬ್ಬರು ಗೌರವ ಕೊಡಬೇಕು. ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಪ್ರತಿಭಟನೆ ಕೈಬಿಡುವ ಮೂಲಕ ಆಡಳಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಶಾಸಕರ ಕಾರ್ಯಾಲಯದಲ್ಲಿ ನಡೆದ ಸಭೆಗೆ ಹಾಜರಾಗಿದ್ದ ಸಿಪಿಐ ಮಲ್ಲಿಕಾರ್ಜುನ ಯಾತನೂರ ಹಾಗೂ ನಗರಠಾಣೆ ಪಿಎಸ್‌ಐ ಸುನೀಲಕುಮಾರ, ಸರ್ಕಾರದ ಆದೇಶ ಉಲ್ಲಂಘಿಸಿ ಪ್ರತಿಭಟನೆ ನಡೆಸಿದಲ್ಲಿ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಂಘಟನೆಗಳ ಮುಖ್ಯಸ್ಥರಿಗೆ ಖಡಕ್ ಸಂದೇಶ ರವಾನಿಸಿದರು.

ಹೀಗಾಗಿ ಅನ್ಯ ಮಾರ್ಗವಿಲ್ಲದೆ ಪ್ರತಿಭಟನೆ ಕೈ ಬಿಡುವ ಬಗ್ಗೆ ಸಂಘಟನೆಗಳ ಪ್ರಮುಖರು ನಿರ್ಧಾರ ಪ್ರಕಟಿಸಿದರು.ಪ್ರತಿಭಟನೆ ರದ್ದುಗೊಂಡರೂ ಸಹ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಪೊಲೀಸ್ ಬಿಗಿ ಬಂದೋಸ್ತ್ ಮಾಡಲಾಗಿತ್ತು.

ಆಯ್ದ ಸ್ಥಳದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಿ, ಸಂಘಟನೆಗಳ ಪ್ರಮುಖರ ಮೇಲೆ ನಿಗಾ ವಹಿಸಲಾಗಿತ್ತು. ಪ್ರತಿಭಟನೆ, ರ‍್ಯಾಲಿ ಅಥವಾ ಬಂದ್ ಇಲ್ಲದ ಕಾರಣ ನಗರದಲ್ಲಿ ಜನ ಜೀವನ ಎಂದಿನಂತೆ ಕಂಡು ಬಂತು.

Intro:ಎರಡು ವಿಡಿಯೊ ಕಳಿಸಲಾಗಿದೆ

ಬಸವಕಲ್ಯಾಣ: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕ ರಾಷ್ಟಿçÃಯ ನೊಂದಣಿ ವಿರೋಧಿಸಿ ಗುರುವಾರ ನಗರದಲ್ಲಿ ನಡೆಯಬೇಕಿದ್ದ ಬೃಹತ್ ಪ್ರತಿಭಟನೆ ರದ್ದುಗೊಂಡಿದ್ದು, ನಗರದಲ್ಲಿ ಜನ ಜೀವನ ಎಂದಿನAತೆ ಕಂಡು ಬಂತು.
ಜಮಾತೆ ಇಸ್ಲಾಮಿ ಹಿಂದ್, ಜಮಾತ್ ಉಲ್ಮಾ ಹಿಂದ್, ಬೀಮ್ ಆರ್ಮಿ ಸೇರಿದಂತೆ ವಿವಿಧ ಮುಸ್ಲಿಂ ಪರ ಸಂಘಟನೆಗಳು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ, ನಗರದ ಬಂದ್ ಆಚರಣೆಗೆ ನಿರ್ಧರಿಸಿದವು.
ಆದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿರುವ ಬಗ್ಗೆ ಸುಳಿವು ಅರಿತ ರಾಜ್ಯ ಸರ್ಕಾರ ಬುಧವಾರ ಸಂಜೆಯೇ ರಾಜ್ಯಾದ್ಯಂತ ೧೪೪ ಜಾರಿಗೊಳಿಸುವ ಮೂಲಕ ಪ್ರತಿಭಟನೆಗೆ ಅವಕಾಶ ನಿರಾಕರಿಸಿತು.
ಸಂಜೆ ಸರ್ಕಾರದ ಆದೇಶ ಹೊರ ಬಿಳುತಿದ್ದಂತೆ ತಡ ರಾತ್ರಿ ೧ ಗಂಟೆವರೆಗೆ ನಗರದ ಶಾಸಕರ ಕಚೇರಿಯಲ್ಲಿ ಸಭೆ ಸೇರಿದ ಸಂಘಟನಾಕಾರರು, ಶಾಸಕ ಬಿ. ನಾರಾಯಣರಾವ ಸಮ್ಮುಖದಲ್ಲಿ ಮುಂದಿನ ತಯ್ಯಾರಿ ಬಗ್ಗೆ ಚರ್ಚೆ ನಡೆಸಿದವು. ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ಪೊಲೀಸ್ ಇಲಾಖೆಯಿಂದ ಅನುಮತಿ ಕೊಡಿಸುವಂತೆ ಶಾಸಕರ ಮೇಲೆ ಒತ್ತಡ ಹೇರಲಾರಂಭಿಸಿದರು.
ಆದರೆ ಇದಕ್ಕೆ ಜಗ್ಗದ ಶಾಸಕ ನಾರಾಯಣರಾವ, ಕಾನೂನಿಗೆ ಪ್ರತಿಯೊಬ್ಬರು ಗೌರವ ಕೊಡಬೇಕು. ನಿಷೇಧಾಗ್ನೆ ಜಾರಿಯಲ್ಲಿರುವ ಕಾರಣ ಪ್ರತಿಭಟನೆ ಕೈ ಬಿಡುವ ಮೂಲಕ ಆಡಳಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಶಾಸಕರ ಕಾರ್ಯಲಯದಲ್ಲಿ ನಡೆದ ಸಭೆಗೆ ಹಾಜರಾಗಿದ್ದ ಸಿಪಿಐ ಮಲ್ಲಿಕಾರ್ಜುನ ಯಾತನೂರ ಹಾಗೂ ನಗರಠಾಣೆ ಪಿಎಸ್‌ಐ ಸುನೀಲಕುಮಾರ, ಸರ್ಕಾರದ ಆದೇಶ ಉಲ್ಲಂಘಿಸಿ ಪ್ರತಿಭಟನೆ ನಡೆಸಿದಲ್ಲಿ ನಿರ್ದಾಕ್ಷಣವಾಗಿ ಕ್ರಮ ಕೈಗೊಳ್ಳಲಾಗುವದು ಎಂದು ಸಂಘಟನೆಗಳ ಮುಖ್ಯಸ್ಥರಿಗೆ ಖಡಕ್ ಸಂದೇಶ ಸಾರಿದರು. ಹೀಗಾಗಿ ಅನ್ಯ ಮಾರ್ಗವಿಲ್ಲದೆ ಪ್ರತಿಭಟನೆ ಕೈ ಬಿಡುವ ಬಗ್ಗೆ ಸಂಘಟನೆಗಳ ಪ್ರಮುಖರು ನಿರ್ಧಾರ ಪ್ರಕಟಿಸಿದರು.
ಪ್ರತಿಭಟನೆ ರದ್ದುಗೊಂಡರು ಸಹ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಪೊಲೀಸ್ ಬಿಗಿ ಬಂದೋಸ್ತ್ ಮಾಡಲಾಗಿತು.
ಆಯಿದ ಸ್ಥಳದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಿ, ಸಂಘಟನೆಗಳ ಪ್ರಮುಖರ ಮೇಲೆ ನಿಗಾ ವಹಿಸಲಾಗಿತ್ತು. ಪ್ರತಿಭಟನೆ, ರ‍್ಯಾಲಿ ಅಥವಾ ಬಂದ್ ಇಲ್ಲದ ಕಾರಣ ನಗರದಲ್ಲಿ ಜನ ಜೀವನ ಎಂದಿನAತೆ ಕಂಡು ಬಂತು, ಸಾರಿಗೆ ವಾಹನ ಸೇರಿದಂತೆ ಖಾಸಗಿ ವಾಹನಗಳು ತೊಡಕಿಲ್ಲದೆ ಸಂಚರ ನಡೆಸಿದರೆ, ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳು ನಿತ್ಯ ಕಾಯಕದಲ್ಲಿ ತೊಡಗಿದವು.
ಹುಮನಾಬಾದ ಡಿವೈಎಸ್ಪಿ ಮಹೇಶ್ವರಪ್ಪ, ಸಿಪಿಐ ಮಲ್ಲಿಕಾರ್ಜುನ ಯಾತನೂರ, ಮಹೇಶಗೌಡ ಪಾಟೀಲ ನೇತೃತ್ವದಲ್ಲಿ ಪಿಎಸ್ಐ ಸುನೀಲಕುಮಾರ ಸೇರಿದಂತೆ ತಾಲೂಕು ಹಾಗೂ ಜಿಲ್ಲೆಯ ವಿವಿಧ ಠಾಣೆಗಳಿಂದ ಆಗಮಿಸಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಎರಡು ಡಿಆರ್ ಮತ್ತು ಒಂದು ಕೆಎಸ್‌ಆರ್‌ಪಿ ತುಕಡಿಗಳ ಅಧಿಕಾರಿ, ಸಿಬ್ಬಂದಿಗಳು ಬೆಳಗ್ಗೆಯಿಂದ ಸಂಜೆವರೆಗೆ ನಗರದಲ್ಲಿ ಸಂಚರಿಸುತ್ತ ಪರಿಸ್ಥಿತಿ ಮೇಲೆ ನಿಗಾವಹಿಸಿದರು.

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ
Body:UDAYAKUMAR MULEConclusion:BASAVAKALYAN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.