ETV Bharat / state

ನಿರಾಶ್ರಿತರು ಸತ್ತ ಮೇಲೆ ನೆರೆ ಪರಿಹಾರ ಕೊಡುತ್ತೀರಾ..?: ಈಶ್ವರ ಖಂಡ್ರೆ - bidar news

ಬಿಜೆಪಿ ಸರ್ಕಾರದಿಂದ ತಕ್ಷಣವೇ ನೆರೆ ಪರಿಹಾರ ಕೊಡುವ ಕೆಲಸ ಆಗಿಲ್ಲ. ಕೇಂದ್ರ ಸರ್ಕಾರದಿಂದ ಅಂತೂ ಒಂದು ನಯಾ ಪೈಸೆ ಬಂದಿಲ್ಲ. ನಾಳೆ ಕೊಡ್ತಾರೆ, ನಾಡಿದ್ದು ಕೊಡ್ತಾರೆ, ಪರಿಷ್ಕರಣೆ ಮಾಡ್ತಿದ್ದಾರೆ ಅಂತ ಆಡಳಿತಾತ್ಮಕ ನೆಪ ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.

ಈಶ್ವರ ಖಂಡ್ರೆ
author img

By

Published : Sep 18, 2019, 3:43 AM IST

Updated : Sep 18, 2019, 6:30 AM IST

ಬೀದರ್: ನೆರೆ ಸಂತ್ರಸ್ತರು ಭ್ರಮ ನಿರಸಗೊಂಡಿದ್ದುಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ನಿರಾಶ್ರಿತರು ಸತ್ತ ಮೇಲೆ ಪರಿಹಾರ ಕೊಡುತ್ತೀರಾ ? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಿಂದ ತಕ್ಷಣವೇ ಪರಿಹಾರ ಕೊಡುವ ಕೆಲಸ ಆಗಿಲ್ಲ. ಕೇಂದ್ರ ಸರ್ಕಾರದಿಂದ ಅಂತೂ ಒಂದು ನಯಾ ಪೈಸೆ ಬಂದಿಲ್ಲ. ನಾಳೆ ಕೊಡ್ತಾರೆ, ನಾಡಿದ್ದು ಕೊಡ್ತಾರೆ, ಪರಿಷ್ಕರಣೆ ಮಾಡ್ತಿದ್ದಾರೆ ಅಂತ ಆಡಳಿತಾತ್ಮಕ ನೆಪ ಹೇಳುತ್ತಿದ್ದಾರೆ. ಜನ ಎಷ್ಟು ಕಷ್ಟ ಪಡುತ್ತಿದ್ದಾರೆ ಎಂಬುದು ಕೆಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅರ್ಥ ಆಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

25 ಜನ ಸಂಸದರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ, ಹಿರಿಯ ನಾಯಕರು ಎಲ್ಲರೂ ಇದ್ದಾರೆ. ಜನರು ಬಿಜೆಪಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿರುವಾಗ ಕೇಂದ್ರದಿಂದ ಅಥವಾ ರಾಜ್ಯದಿಂದ ಪರಿಹಾರ ನೀಡುವಲ್ಲಿ ಸಂಪೂರ್ಣ ವಿಫಲರಾಗಿರುವುದು ಬೇಸರ ತಂದಿದೆ ಎಂದರು.

ಈಶ್ವರ ಖಂಡ್ರೆ ಪ್ರತಿಕ್ರಿಯೆ

ಸಂತ್ರಸ್ತರ ಬಗ್ಗೆ ಒಂದು ಟ್ವೀಟ್ ಮಾಡಿಲ್ಲ ಪ್ರಧಾನಿ:

ಲಕ್ಷಾಂತರ ಜನ ನಿರಾಶ್ರಿತರಾದರೂ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಒಂದು ಟ್ವೀಟ್ ಮಾಡಿಲ್ಲ. ಕನಿಕರ ತೊರದೆ, ಸಂತ್ರಸ್ತರ ದುಃಖದಲ್ಲಿ ಭಾಗಿಯಾಗದೆ ರಾಜ್ಯಕ್ಕೆ ಬಂದರೂ ನೆರೆಪೀಡಿತರ ಬಗ್ಗೆ ಒಂದೂ ಮಾತನಾಡದೆ ವಾಪಸ್​​ ಹೊಗಿದ್ದಾರೆ. 40 ದಿನಗಳಾದರೂ ಕೇಂದ್ರ ಸರ್ಕಾರ ಒಂದು ನಯಾ ಪೈಸೆ ಬಿಡುಗಡೆ ಮಾಡದಿರುವುದು ಅಕ್ಷಮ್ಯ ಅಪರಾಧ ಎಂದು ಖಂಡ್ರೆ ಕಿಡಿ ಕಾರಿದರು.

ಕಲ್ಯಾಣ ಕರ್ನಾಟಕ ಆದರೆ ಸಾಲದು:

ಹೈದ್ರಾಬಾದ್ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರೆ ಸಾಲದು, ಈ ಭಾಗದ ಎಲ್ಲಾ ವಿಧಾನಸಭೆ ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ಆಗಬೇಕು. ಆದರೆ ಸಿಎಂ ಅವರ ವಿವೇಚನಾ ನಿಧಿಯಡಿಯಲ್ಲಿ 70 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಬಹುಪಾಲು ಬಿಜೆಪಿ ಹಾಗೂ ಅನರ್ಹ ಶಾಸಕರ ಕ್ಷೇತ್ರಗಳ ಪಾಲಾಗಿದೆ. ಅನುದಾನ ಹಂಚಿಕೆ ಮಾಡುವಲ್ಲೂ ತಾರತಮ್ಯ ಮಾಡುತ್ತಿರುವುದು ಈ ಭಾಗಕ್ಕೆ ಆಗುತ್ತಿರುವ ಅನ್ಯಾಯ ಎಂದು ಆರೋಪಿಸಿದರು.

ಸಚಿವ ಈಶ್ವರಪ್ಪಗೆ ಖಂಡ್ರೆ ಟಾಂಗ್:

ಬಿಜೆಪಿಗೆ ಮತ ಹಾಕಿದವರು ಭಾರತೀಯರು, ಹಾಕದೆ ಇರುವವರು ಪಾಕಿಸ್ತಾನಿಗಳು ಎಂಬ ಸಚಿವ ಈಶ್ವರಪ್ಪ ಅವರ ಹೇಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅವಮಾನ. ದೇಶದಲ್ಲಿ ಸೇಡಿನ ರಾಜಕಾರಣ ಮಾಡಲಾಗುತ್ತಿದೆ, ಜಾತಿ ಜಾತಿಗಳ ನಡುವೆ ಜಗಳ ಹಚ್ಚಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಹಿರಿಯ ನಾಯಕ ಈಶ್ವರಪ್ಪnವರು ನಿರೀಕ್ಷೆ ಮಾಡದ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಸಾಧನೆ ಮಾಡಲು ಆಗದೆ ಜನರ ಗಮನ ಬೇರೆಡೆ ಸೆಳೆಯಲು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಖಂಡ್ರೆ ಟಾಂಗ್ ಕೊಟ್ಟರು.

Intro:ನಿರಾಶ್ರಿತರು ಸತ್ತ ಮೇಲೆ ಪರಿಹಾರ ಕೊಡ್ತಿರಾ...?- ಈಶ್ವರ ಖಂಡ್ರೆ ಆಕ್ರೋಶ...!

ಬೀದರ್:
ಉತ್ತರ ಕರ್ನಾಟಕದ ನಿರಾಶ್ರಿತರು, ಸಂತ್ರಸ್ತರು ಯಾವ ಮಟ್ಟಕ್ಕೆ ಹೊಗಿದ್ದಾರೆ. ಭ್ರಮ ನಿರಸಗೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವಂಥ ಹಂತಕ್ಕೆ ತಲುಪಿದ್ದಾರೆ. ಸಂತ್ರಸ್ತರು ನಿರ್ಣಾಮ ಆದ ಮೇಲೆ ಸತ್ತ ಮೇಲೆ ಪರಿಹಾರ ಕೊಡ್ತಿರಾ...? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಕ್ಷಣವೇ ಪರಿಹಾರ ಕೊಡುವ ಕೆಲಸ ಆಗಿಲ್ಲ. ಕೇಂದ್ರ ಸರ್ಕಾರದಿಂದ ಅಂತೂ ಒಂದು ನಯಾ ಪೈಸಾ ಬಂದಿಲ್ಲ. ನಾಳೆ ಕೊಡ್ತಾರೆ, ನಾಡಿದ್ದು ಕೊಡ್ತಾರೆ, ಪರಿಷ್ಕರಣೆ ಮಾಡ್ತಿದ್ದಾರೆ ಅಂತ ಆಡಳಿತಾತ್ಮಕ ನೆಪ ಹಾಕ್ತಿದ್ದಾರೆ. ಇದರಿಂದ ಜನ ಎಷ್ಟು ಕಷ್ಟ ಪಡ್ತಿದ್ದಾರೆ ಎಂಬುದು ಕೆಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅರ್ಥ ಆಗ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

25 ಜನ ಸಂಸದರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ, ಹಿರಿಯ ನಾಯಕರು ಎಲ್ಲರು ಇದ್ದಾರೆ. ಜನರು ಬಿಜೆಪಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿರುವಾಗ ಕೇಂದ್ರದಿಂದ ಅಥವಾ ರಾಜ್ಯದಿಂದ ಪರಿಹಾರ ನೀಡುವಲ್ಲಿ ಸಂಪೂರ್ಣ ವಿಫಲರಾಗಿರುವುದು ಬೇಸರ ತಂದಿದೆ ಎಂದರು.

ಸಂತ್ರಸ್ತರ ಬಗ್ಗೆ ಒಂದು ಟ್ವೀಟ್ ಮಾಡಿಲ್ಲ ಪ್ರಧಾನಿ:

ಲಕ್ಷಾಂತರ ಜನ ನಿರಾಶ್ರತರಾದರು ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಟ್ವೀಟ್ ಮಾಡದೆ, ಕನಿಕರ ತೊರದೆ ಸಂತ್ರಸ್ತರ ದುಃಖದಲ್ಲಿ ಭಾಗಿಯಾಗದೆ ರಾಜ್ಯಕ್ಕೆ ಬಂದರು ಒಂದು ಪೀಡಿತರ ಬಗ್ಗೆ ಒಂದು ಮಾತನಾಡದೆ ವಾಪಸ್ಸ್ ಹೊಗಿದ್ದಾರೆ. 40 ದಿನಗಳಾದ್ರು ಕೇಂದ್ರ ಸರ್ಕಾರ ಒಂದು ನಯಾ ಪೈಸಾ ಬಿಡುಗಡೆ ಮಾಡದಿರುವುದು ಅಕ್ಷಮ್ಯ ಅಪರಾಧ ಎಂದು ಖಂಡ್ರೆ ಕಿಡಿ ಕಾರಿದರು.

ಕಲ್ಯಾಣ ಕರ್ನಾಟಕ ಆದ್ರೆ ಸಾಲದು:

ಹೈದ್ರಾಬಾದ್ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರೆ ಸಾಲದು ಈ ಭಾಗದ ಎಲ್ಲಾ ವಿಧಾನಸಭೆ ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ಆಗಬೇಕು. ಆದರೆ ಸಿಎಂ ಅವರ ವಿವೇಚನಾ ನಿಧಿಯಡಿಯಲ್ಲಿ 70 ಕೋಟಿ ಬಿಡುಗಡೆ ಮಾಡಲಾಗಿದೆ ಅದರಲ್ಲಿ ಬಹುಪಾಲು ಬಿಜೆಪಿ ಹಾಗೂ ಅನರ್ಹ ಶಾಸಕರ ಕ್ಷೇತ್ರಳ ಪಾಲಾಗಿದೆ. ಅನುದಾನ ಹಂಚಿಕೆ ಮಾಡುವಲ್ಲೂ ತಾರತಮ್ಯ ಮಾಡುತ್ತಿರುವುದರಿಂದ ಈ ಭಾಗಕ್ಕೆ ಆಗ್ತಿರುವ ಅನ್ಯಾಯ ಎಂದರು.

ಸಚಿವ 'ಈಶ್ವರಪ್ಪಗೆ'- 'ಖಂಡ್ರೆ' ಟಾಂಗ್:

ಬಿಜೆಪಿಗೆ ಮತ ಹಾಕಿದವರು ಭಾರತಿಯರು ಹಾಕದೆ ಇರುವವರು ಪಾಕಿಸ್ತಾನಿಗಳು ಎಂಬ ಸಚಿವ ಈಶ್ವರಪ್ಪ ಅವರ ಹೇಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆ ಮಾಡಿದ ಅವಮಾನ. ದೇಶದಲ್ಲಿ ಶೇಡಿನ ರಾಜಕಾರಣ ಮಾಡಲಾಗ್ತಿದೆ, ಜಾತಿ ಜಾತಿಗಳ ನಡುವೆ ಜಗಳ ಹಚ್ಚಿ ಜನರ ದಿಕ್ಕು ತಪ್ಪಿಸಲಾಗ್ತಿದೆ. ಹಿರಿಯ ನಾಯಕ ಈಶ್ವರಪ್ಪ ಅವರು ನೀರಿಕ್ಷೆ ಮಾಡದ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಸಾಧನೆ ಮಾಡಲು ಆಗದೆ ಜನರ ಗಮನ ಬೇರೆಡೆ ಸೇಳೆಯಲು ಹೀಗೆಲ್ಲಾ ಮಾಡ್ತಿದ್ದಾರೆ ಎಂದು ಖಂಡ್ರೆ ಟಾಂಗ್ ಕೊಟ್ಟರು.

ಬೈಟ್-೦೧: ಈಶ್ವರ ಖಂಡ್ರೆ- ಕೆಪಿಸಿಸಿ ಕಾರ್ಯಾಧ್ಯಕ್ಷ.Body:ಅನೀಲConclusion:ಬೀದರ್
Last Updated : Sep 18, 2019, 6:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.