ಬೀದರ್ : ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸುವವರ ಮೇಲೆ ಬಿಜೆಪಿ ಬೆಂಬಲಿತ ಶಕ್ತಿಗಳಿಂದ ಹಿಂಸಾಚಾರ ಮಾಡಲಾಗುತ್ತಿದೆ. ಜೆಎನ್ಯು ಘಟನೆ ಖಂಡನೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.
ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಹಾಗೂ ಎಬಿವಿಪಿ ಸಂಘಟನೆಯ ದುಷ್ಟ ಶಕ್ತಿಗಳು ಗೂಂಡಾಗಿರಿ ನಡೆಸುತ್ತಿವೆ. ಇವತ್ತು ಬಿಜೆಪಿಯವರು ಮತ್ತೆ ಹಿಂಸೆ, ವಾಮಮಾರ್ಗ ಹಿಡಿದಿದ್ದಾರೆ. ಒಂದು ಕಡೆ ಹೆದರಿಸುತ್ತಿದ್ದಾರೆ ಮತ್ತೊಂದು ಕಡೆ ಮನೆ ಮನೆಗೆ ಹೋಗಿ ಸಮರ್ಥನೆ ಮಾಡುತ್ತಿದ್ದಾರೆ. ಜನರ ಮೇಲೆ ಒತ್ತಡ ತಂದು ಭಯ ಹುಟ್ಟಿಸುವ ಕೆಲಸ ಬಿಜೆಪಿ ಮಾಡುತ್ತಿದ್ದಾರೆ. ಬಿಜೆಪಿಯ ಗೊಡ್ಡು ಬೆದರಿಕೆಗೆ ಯಾರು ಹೇದರುವುದಿಲ್ಲ ಎಂದು ಹೇಳಿದರು.
ಪೌರತ್ವ ನೊಂದಣಿ ಹಾಗೂ ಪೌರತ್ವ ತಿದ್ದುಪಡಿಗೆ ಸಂವಿಧಾನ ಬದ್ದವಾಗಿ ವಿರೋಧಿಸುವವರ ಬಾಯಿ ಮುಚ್ಚಿಸುವ ಕೆಲಸಕ್ಕೆ ಬಿದ್ದಿರುವ ಬಿಜೆಪಿಗೆ ಎಚ್ಚರಿಕೆ ನೀಡಿದ ಈಶ್ವರ ಖಂಡ್ರೆ ಸಂವಿಧಾನ ವಿರೋಧಿ ಕೆಲಸ ಮಾಡಿದರೆ ದೊಡ್ಡ ಹೋರಾಟ ಮಾಡುತ್ತೇವೆ ಎಂದರು.