ಬಸವಕಲ್ಯಾಣ: ತುಂಡಾಗಿ ಬಿದ್ದ ವಿದ್ಯುತ್ ತಂತಿಯಿಂದ ವಿದ್ಯುತ್ ತಗುಲಿ 4 ಎಮ್ಮೆಗಳು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಶಾಹುಸೇನ್ ಬಡಾವಣೆಯಲ್ಲಿ ನಡೆದಿದೆ.
ಬಾಬುರಾವ ಹತ್ತೆ ಎನ್ನುವರು ಎಮ್ಮೆಗಳನ್ನು ಮೆಯಿಸಿಕೊಂಡು ಮರಳಿ ಮನೆಗೆ ಬರುವಾಗ ಈ ಘಟನೆ ನಡೆದಿದೆ. ಸುಮಾರು 50 ವರ್ಷಗಳಷ್ಟು ಹಳೆಯದಾದ ವಿದ್ಯುತ್ ಕಂಬ ಮುರಿದು ನೆಲಕ್ಕೆ ಉರುಳಿದೆ. ಇದೇ ಮಾರ್ಗದಿಂದ ಎಮ್ಮೆಗಳು ಆಮಿಸುವಾಗ ನೆಲಕ್ಕೆ ಬಿದಿದ್ದ ವಿದ್ಯುತ್ ತಂತಿ ಎಮ್ಮೆಗಳಿಗೆ ತಗುಲಿದೆ. ಏಕಾ ಏಕಿ ಎಮ್ಮೆಗಳು ನೆಲಕ್ಕೆ ಬಿದ್ದು ಒದ್ದಾಡುತ್ತಿರುವ ದೃಶ್ಯ ಕಂಡ ಎಮ್ಮೆ ಕಾಯುವಾತ ಗಾಬರಿಗೊಂಡು ಪಕ್ಕದ ದಾರಿಗೆ ತೆರಳುವ ಮೂಲಕ ಅಪಾಯದಿಂದ ಪಾರಾಗಿದ್ದಾನೆ.
ಸುದ್ದಿ ತಿಳಿದು ಸ್ಥಳಕ್ಕೆ ಕಂದಾಯ, ಜೆಸ್ಕಾಂ ಹಾಗೂ ಪೊಲೀಸ್ ಅಧಿಕಾರಿಗಳು ಹಾಗೂ ಪಶು ಆಸ್ಪತ್ರೆ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ:ಬ್ರಹ್ಮಾವರ ಬಳಿ ಐತಿಹಾಸಿಕ ಚೌಳಿ ಕೆರೆಗೆ ಕಾರು ಉರುಳಿ ಉದ್ಯಮಿ ಸಾವು
ಹಳೆ ವಿದ್ಯುತ್ ಕಂಬ ಬದಲಾಯಿಸದೇ ಹಾಗೆ ಬಿಟ್ಟಿದ್ದರಿಂದ ಈ ದುರ್ಘಟನೆ ನಡೆದಿದೆ. ಇದಕ್ಕೆ ಜೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಎಮ್ಮೆಗಳ ಸಾವಿನಿಂದ ಸುಮಾರು 2 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ, ಈ ಹಿನ್ನೆಯಲ್ಲಿ ಎಮ್ಮೆಗಳನ್ನ ಕಳೆದುಕೊಂಡ ವ್ಯಕ್ತಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.