ಬಸವಕಲ್ಯಾಣ: ನಗರದ ಇಬ್ಬರು ಸೇರಿದಂತೆ ಮತ್ತೆ 8 ಜನರಿಗೆ ಕೊರೊನಾ ವಕ್ಕರಿಸಿದ್ದು, ಈ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 216ಕ್ಕೆ ತಲುಪಿದೆ.
ಓರ್ವ ಬಾಲಕ, ಇಬ್ಬರು ಪುರುಷರು ಹಾಗೂ 5 ಜನ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕಿತರ ವಿವರ:
ನಗರದ ಖೂಬಾ ಕಾಲೊನಿಯ 31 ವರ್ಷದ ವ್ಯಕ್ತಿ, ವಿದ್ಯಾಶ್ರೀ ಕಾಲೋನಿ 45 ವರ್ಷದ ವ್ಯಕ್ತಿ, ತಾಲೂಕಿನ ಕೌಡಿಯಾಳ ಗ್ರಾಮದ 23 ವರ್ಷದ ಮಹಿಳೆ, ಜೋಗೆವಾಡಿಯ 24 ವರ್ಷದ ಮಹಿಳೆ, ಕಾಂಬಳೆವಾಡಿಯ 54 ವರ್ಷದ ಮಹಿಳೆ, ತಡೋಳಾ ಗ್ರಾಮದ 22 ವರ್ಷದ ಮಹಿಳೆ, ಮೋರಖಂಡಿ ಗ್ರಾಮದ 20 ವರ್ಷದ ಮಹಿಳೆ, ಹಿರನಾಗಾಂವ ಗ್ರಾಮದ 6 ವರ್ಷದ ಬಾಲಕನಿಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ.
ಸೋಂಕಿತರನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.