ಬಸವಕಲ್ಯಾಣ: ನಗರದ ಐತಿಹಾಸಿಕ ಹಾಗೂ ಪುರಾತನವಾದ ಶ್ರೀ ಸೋಮೇಶ್ವರ ಮಂದಿರದ ಸುತ್ತಲು ಸ್ವಚ್ಛಗೊಳಿಸಬೇಕು. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸೂಕ್ತ ಕೈಗೊಳ್ಳಬೇಕೆಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸೂಚಿಸಿದರು.
ಇಲ್ಲಿನ ಮಂದಿರದ ಗರ್ಭ ಗುಡಿ ಉದ್ಭವ ಲಿಂಗದ ಸುತ್ತಲು ಚರಂಡಿ ನೀರು ನಿಂತಿದ್ದು, ದುರ್ವಾಸನೆ ಬೀರುತ್ತಿದೆ. ಮಂದಿರದ ಸುತ್ತ ಅವೈಜ್ಞಾನಿಕ ಹಾಗೂ ಕಳಪೆ ಗುಣಮಟ್ಟದ ಚರಂಡಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದರು.
ಶೀಘ್ರವೇ ಚರಂಡಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕು. ಒಳಗೆ ಶೇಕರಣೆಗೊಂಡ ನೀರನ್ನು ಖಾಲಿ ಮಾಡಬೇಕೆಂದು ನಗರಸಭೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಖೂಬಾ ಹೇಳಿದರು.
ಈ ವೇಳೆ ನಗರಸಭೆ ಪರಿಸರ ಅಭಿಯಂತರ ಮನೋಜಕುಮಾರ, ಸಿಪಿಐ ಜೆ.ಎಸ್, ನ್ಯಾಮಗೌಡರ್, ಮುಖಂಡರಾದ ಕಾಳಿದಾಸ ಜಾಧವ, ಶಿವಕುಮಾರ ಬಿರಾದಾರ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.