ಬೀದರ್: ಅತೃಪ್ತ ಶಾಸಕರನ್ನು ಭೇಟಿ ಮಾಡಲು ಮುಂಬೈನ ಪಂಚತಾರ ಹೋಟೆಲ್ಗೆ ತೆರಳಿದ್ದ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಹೋಟೆಲ್ ಹೊರಗೆ ತಡೆದು ವಶಕ್ಕೆ ಪಡೆದಿದ್ದನ್ನು ಜಿಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಖಂಡಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿ ಎದುರು ಜಮಾಯಿಸಿದ್ದ ಕಾರ್ಯಕರ್ತರು ಮುಂಬೈ ಪೊಲೀಸ್ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಯ್ದಿರಿಸಿದ ಹೋಟೆಲ್ ಕೊಠಡಿಯಲ್ಲಿ ತಂಗಲು ಸಹ ಅವಕಾಶ ಮಾಡಿಕೊಡದೆ ನಡು ಬೀದಿಯಲ್ಲಿ ಮಳೆಯಲ್ಲಿ ನಿಲ್ಲಿಸುವ ಮೂಲಕ ಅವಮಾನ ಮಾಡಲಾಗಿದೆ ಎಂದು ಪ್ರತಿಭಟನಾನಿರತರು ಕಿಡಿಕಾರಿದರು.