ಬೀದರ್ : ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬಗಳಿಗೆ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಹಾಲು ವಿತರಣೆ ಮಾಡಿದರು. ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಹಾಲು ವಿತರಣೆ ಮಾಡಿದ ಅವರು, ಲಾಕ್‌ಡೌನ್ ಮುಗಿಯುವವರೆಗೆ ನಿತ್ಯ ಬಡ ಕುಟುಂಬಗಳ ಮನೆ ಬಾಗಿಲಿಗೆ ನಂದಿನ ಹಾಲಿನ ಪ್ಯಾಕೇಟ್ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ವೈರಸ್ ತಡೆಯಲು ಜನರ ಸಹಕಾರ ಬೇಕಿದೆ. ಯಾರೂ ಅನಗತ್ಯ ಮನೆಯಿಂದ ಹೊರ ಬರಬಾರದು. ಕೈಮುಗಿದು ಕೇಳ್ತೀನಿ ಮನೆಯಲ್ಲೇ ಇರಿ, ಸೋಂಕು ಹರಡದಂತೆ ಮುನ್ನೆಚ್ಚರಿಕವಹಿಸಿ ಎಂದು ಮನವಿ ಮಾಡಿದರು.
ಅಲ್ಲದೆ ಸಂಕಟದಲ್ಲಿರುವ ಜನರ ಸಹಾಯಕ್ಕೆ ಶ್ರೀಮಂತರು ಬರಬೇಕಿದೆ. ನಾನು ನನ್ನ ಮೂರು ತಿಂಗಳ ವೇತನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದೇನೆ. ಸಾರ್ವಜನಿಕರು ತಮ್ಮಿಂದಾದಷ್ಟು ಸಹಾಯ ಮಾಡಲು ಮುಂದೆ ಬರಬೇಕು ಎಂದು ವಿನಂತಿಸಿದರು.