ಬಸವಕಲ್ಯಾಣ : ನಿಯಂತ್ರಣಕ್ಕೆ ಬಾರದ ಶಂಕಿತ ಡೆಂಘೀ ಪ್ರಕರಣಗಳು, ಆಸ್ಪತ್ರೆಗೆ ಸುತ್ತಾಡುತ್ತಿರುವ ಶಂಕಿತ ಡೆಂಘೀ ಬಾಧಿತರು, ನಿರೀಕ್ಷಿತ ಮಟ್ಟದಲ್ಲಿ ನಡೆಯದ ಜಾಗೃತಿ ಅಭಿಯಾನ, ಸೊಳ್ಳೆ ಕಾಟಕ್ಕೆ ದೊರಕದ ಮುಕ್ತಿ. ಇದು ಶಂಕಿತ ಡೆಂಘೀಯಿಂದ ನಲುಗುತ್ತಿರುವ ಬಸವಕಲ್ಯಾಣ ನಾಗರಿಕರ ಗೋಳಾಟ.
ಕಳೆದ ಕೆಲ ವಾರಗಳಿಂದ ಪತ್ತೆಯಾಗುತ್ತಿರುವ ಶಂಕಿತ ಡೆಂಘೀ ಪ್ರಕರಣಗಳು ಕಡೆಮೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಮಕ್ಕಳು, ಮಹಿಳೆಯರು ಸೇರಿ ನೂರಾರು ಜನ ಶಂಕಿತ ಡೆಂಘೀಗೆ ತುತ್ತಾಗಿ ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಓಡಾಡುವದು ಮಾತ್ರ ತಪ್ಪುತ್ತಿಲ್ಲ. ಆದರೆ, ಡೆಂಘೀ ನಿಯಂತ್ರಣಕ್ಕೆ ಮುಂದಾಗಬೇಕಿದ್ದ ಸ್ಥಳೀಯ ಆಡಳಿತ ಮಾತ್ರ ಕಾಟಾಚಾರಕ್ಕೆ ಎಂಬಂತೆ ಅಲಲ್ಲಿ ಸ್ವಚ್ಛತೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವದು ಬಿಟ್ಟರೆ, ಅರಿವು ಮೂಡಿಸುವ ಕೆಲಸ ನಡೆಯುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಜ್ವರ ಕಾಣಿಸಿಕೊಂಡ ಜನರು ನಗರದ ಸರ್ಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಶಂಕಿತ ಡೆಂಘೀ ಜ್ವರ ಪತ್ತೆಗಾಗಿ ಹಾಗೂ ಡೆಂಘೀ ಪತ್ತೆ ಕಿಟ್‌ಗಳು ಇಲ್ಲ ಹಾಗೂ ಪ್ಲೇಟ್‌ಲೇಟ್ ಕೌಂಟ್ ಮಾಡುವ ಶಲ್ ಕೌಂಟರ್ ಯಂತ್ರವು ಇಲ್ಲ. ರಕ್ತ ಪರೀಕ್ಷೆಗಾಗಿ ಖಾಸಗಿ ಆಸ್ಪತ್ರೆ ಹೋಗಿ ಸಾವಿರಕ್ಕೂ ಅಧಿಕ ರೂ. ಖರ್ಚು ಮಾಡಬೇಕಾಗುತ್ತಿದೆ. ಅಷ್ಟೊಂದು ಹಣ ಎಲ್ಲಿಂದ ತರಬೇಕು ಎಂದು ಜನರ ಪ್ರಶ್ನೆಯಾಗಿದೆ.
ಡೆಂಘೀ ಜ್ವರ ನಿಯಂತ್ರಣಕ್ಕೆ ಬರಬೇಕಾದರೆ ಜನರಲ್ಲಿ ಅರೀವು ಮೂಡಿಸುವ ಜೋತೆಗೆ ನಗರದ ಎಲ್ಲಾ ವಾರ್ಡ್ಗಳ ಚರಂಡಿ ಸೇರಿದಂತೆ ಇತರ ಕೊಳಚೆ ಪ್ರದೇಶಗಳ ಸ್ವಚ್ಚತೆ ಕಾರ್ಯ ಮಾಡಬೇಕು. ಸೊಳ್ಳೆ ನಾಶಕ್ಕಾಗಿ ಫಾಗಿಂಗ್ ಮಾಡಿಸಬೇಕು. ಆದರೆ ಫಾಗಿಂಗ್ ಯಂತ್ರಗಳು ಲಭ್ಯವಿಲ್ಲ. ಲಭ್ಯ ಇರೊ ಒಂದೆರಡು ಯಂತ್ರಗಳಿಂದ ಈಡಿ ನಗರದಾದ್ಯಂತ ಫಾಗಿಂಗ್ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ನಗರಸಭೆ ಸಿಬ್ಬಂದಿ.
ಜನರು ಭಯ ಪಡುವ ಅಗತ್ಯವಿಲ್ಲ
ಬಸವಕಲ್ಯಾಣ ತಾಲೂಕಿನಲ್ಲಿ ಇದುವರೆಗೆ 2 ಡೆಂಘೀ ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಜನರು ಭಯ ಪಡುವ ಅಗತ್ಯವಿಲ್ಲ. ಜ್ವರ ಬಂದರೆ ಖಾಸಿ ಆಸ್ಪತ್ರೆಯ ವೈದ್ಯರು ಡೆಂಘೀ ಎಂದು ಹೆದರಿಸುತ್ತಾರೆ. ಹತ್ತಿರದ ಸರ್ಕಾರಿ ಆಸ್ಪತ್ರೆ ಇಲ್ಲವೆ ಜಿಲ್ಲಾಸ್ಪತ್ರೆಗೆ ಹೋಗಿ ಎಂದು ಆರೋಗ್ಯ ಇಲಾಖೆ ಡಿಎಂಓ ಡಾ. ಅನೀಲ ಚಿಂತಾಮಣಿ ಮನವಿ ಮಾಡಿದ್ದಾರೆ.