ETV Bharat / state

ಗುಪ್ತವಲ್ಲ, ಲಿಂಗಾಯತ ಧರ್ಮದ ಹೋರಾಟ ಮುಕ್ತ.. ಷಡ್ಯಂತ್ರ ರೂಪಿಸಿದವರಿಗೆ ಎಂಬಿಪಿ ಟಾಂಗ್​!

ಲಿಂಗಾಯತ ಧರ್ಮ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟ ಗುಪ್ತವಾಗಿಲ್ಲ. ಮುಕ್ತವಾಗಿಯೇ ನಡೆಯುತ್ತಿದೆ. ಸ್ವತಂತ್ರ ಧರ್ಮದ ಮಾನ್ಯತೆ ಸಿಗುವವರೆಗೂ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

demand-for-separate-lingayat-religion
author img

By

Published : Oct 12, 2019, 8:50 PM IST

ಬಸವಕಲ್ಯಾಣ:ಲಿಂಗಾಯತ ಧರ್ಮ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟ ಗುಪ್ತವಾಗಿಲ್ಲ. ಮುಕ್ತವಾಗಿಯೇ ನಡೆಯುತ್ತಿದೆ. ಸ್ವತಂತ್ರ ಧರ್ಮದ ಮಾನ್ಯತೆ ಸಿಗುವವರೆಗೂ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಇದರಲ್ಲಿ ಹೆದರಿಕೆಯೂ ಇಲ್ಲ ಎಂದು ಹೋರಾಟದ ವಿರುದ್ಧ ಷಡ್ಯಂತ್ರ ರೂಪಿಸಲು ಮುಂದಾದವರಿಗೆ ಮಾಜಿ ಸಚಿವ ಎಂ ಬಿ ಪಾಟೀಲ್​ ಟಾಂಗ್​ ನೀಡಿದ್ದಾರೆ.

ನಗರದ ಬಸವ ಮಹಾಮನೆ ಪರಿಸರದಲ್ಲಿ ನಡೆಯುತ್ತಿರುವ 18ನೇ ಕಲ್ಯಾಣ ಪರ್ವದ 2ನೇ ದಿನದ ಧರ್ಮ ಚಿಂತನಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲರೂ ಪಕ್ಷಾತೀತವಾಗಿ ಕೈಜೋಡಿಸಬೇಕು. ಇದು 12ನೇ ಶತಮಾನದಲ್ಲಿಯೇ ಹುಟ್ಟಿದ ಧರ್ಮ. ಸಿಖ್, ಜೈನ್ ಧರ್ಮಗಳಿಗೆ ಪ್ರತ್ಯೇಕ ಧರ್ಮ ಎಂದು ಮಾನ್ಯತೆ ನೀಡಲಾಗಿದೆ. ಆದರೆ, ಲಿಂಗಾಯತರಿಗೆ ಮಾತ್ರ ಯಾಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.

ಧರ್ಮ ಚಿಂತನಾಗೋಷ್ಠಿ

ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ನಡೆದ ಹೋರಾಟಕ್ಕೆ ರಾಜಕೀಯ ಬಣ್ಣ ಬಳಿದು ನಮ್ಮ ವಿರುದ್ಧ ಷಡ್ಯಂತ್ರ ರೂಪಿಸಲಾಯಿತು. ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದೇವೆ. ಆದರೆ, ವಿರೋಧಿಗಳು ಚುನಾವಣೆ ಪೂರ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಮ್ಮ ವಿರುದ್ಧ ಷಡ್ಯಂತರ ರೂಪಿಸಿ ಧರ್ಮ ಒಡೆಯುತಿದ್ದೇವೆ ಎನ್ನುವ ಆರೋಪ ಹೊರಿಸಿ ಗೊಂದಲ ಸೃಷ್ಟಿಸಿದರು ಎಂದು ವಾಗ್ದಾಳಿ ನಡೆಸಿದರು.

ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಿಸಿದ್ದು ನಾವಲ್ಲ. ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಪ್ರಥಮವಾಗಿ ಬೀದರ್​ನಲ್ಲಿ ನಡೆದ ರ‌್ಯಾಲಿ ಹಾಗೂ ಬೆಳಗಾವಿಯಲ್ಲಿ ನಡೆದ ರ‌್ಯಾಲಿಯಲ್ಲಿ ನಾನಾಗಲಿ, ವಿನಯ್‌ ಕುಲಕರ್ಣಿಯಾಗಲಿ ಅಥವಾ ಬಸವರಾಜ ಹೊರಟ್ಟಿ ಅವರಾಗಲಿ ಯಾರೂ ಭಾಗವಹಿಸಿರಲಿಲ್ಲ. ಕಲಬುರಗಿಯಿಂದ ಹಿಡಿದು ಮುಂದೆ ನಡೆದ ರ‌್ಯಾಲಿಗಳಲ್ಲಿ ನಾವೆಲ್ಲ ಭಾಗವಹಿಸಿದ್ದೇವೆ. ಏನೇ ಷಡ್ಯಂತರ ನಡೆಸಿದರೂ ಅದಕ್ಕೆ ಬಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಗಿದ ಅಧ್ಯಾಯ: ಲಿಂಗೈಕ್ಯ ಮಾತೆ ಮಹಾದೇವಿ ಅವರು ಗುರು ಬಸವಣ್ಣನವರ ವಚನಾಂಕಿತ ತಿರುಚಿದ್ದಾರೆ ಎಂದು ಆರೋಪಿಸಿ ಹೋರಾಟಕ್ಕೆ ವಿರೋಧಿಸುವದನ್ನು ಇಲ್ಲಿಗೆ ನಿಲ್ಲಿಸಬೇಕು. ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ ಎಂ ಬಿ ಪಾಟೀಲ, ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಎಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು.

ವಚನಾಂಕಿತ ತಿದ್ದಿದ್ದು ಸರಿನೋ, ತಪ್ಪೋ ಅನ್ನುವುದು ಚರ್ಚೆ ಬೇಡ. ಹಿಂದೆ ಕಲಬುರಗಿಯಲ್ಲಿ ನಡೆದ ರ‌್ಯಾಲಿ ವೇಳೆ ತಾವು ಮಾಡಿದ ಮನವಿಗೆ ಸ್ಪಂದಿಸಿದ ಮಾತೆ ಮಹಾದೇವಿ ಅವರು, ಅದನ್ನ ಹಿಂಪಡೆಯುತ್ತೇನೆ ಎಂದು ಘೋಷಿಸಿದ್ದಾರೆ. ಅಲ್ಲಿಗೆ ಅದಿನ್ನು ಮುಗಿದ ಅಧ್ಯಾಯ. ಅದರ ಬಗ್ಗೆ ಮತ್ತೆ ಮತ್ತೆ ಚರ್ಚೆಗಳು ಬೇಡ ಎಂದು ಕೇಳಿಕೊಂಡರು.

Intro:(ಗಮನಕ್ಕೆ: ನಮ್ಮ ಸುದ್ದಿಗಳನ್ನು ಬಸವಕಲ್ಯಾಣ ಡೇಟ್ ಲೈನ್ ಮೇಲೆ ಹಾಕಿಕೊಳ್ಳಿ. ವಚನಾಂಕಿತ ತಿದ್ದಿರುವ ವಿಷಯ ಯಾವುದೇ ಕಾರಣಕ್ಕೂ ಕಟ್ ಮಾಡಬೇಡಿ ಸರ್,)

ಬಸವಕಲ್ಯಾಣ: ಲಿಂಗಾಯತ ಧರ್ಮ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟ ಗುಪ್ತವಾಗಿಲ್ಲ. ಮುಕ್ತವಾಗಿಯೇ ನಡೆಯುತ್ತಿದೆ. ಲಿಂಗಾಯತ ಧರ್ಮಕ್ಕೆ ಸ್ವಾತಂತ್ರ ಧರ್ಮದ ಮಾನ್ಯತೆ ಸಿಗುವವರೆಗೆ ನಮ್ಮ ಹೋರಾಟ ನಿಲ್ಲಿಸುವ ಪ್ರಶ್ನೆÃಯೆ ಇಲ್ಲ ಎಂದು ಪ್ರತ್ಯೆÃಕ ಲಿಂಗಾಯತ ಧರ್ಮ ಹೋರಾಟದ ಮುಂಚುಣಿ ನಾಯಕ, ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ ಘೋಷಿಸಿದರು.
ನಗರದ ಹೊರ ವಲಯದಲ್ಲಿರುವ ಬಸವ ಮಹಾಮನೆ ಪರಿಸರದಲ್ಲಿ ನಡೆಯುತ್ತಿರುವ ೧೮ನೇ ಕಲ್ಯಾಣ ಪರ್ವದ ಎರಡನೆ ದಿನದ ಧರ್ಮ ಚಿಂತನಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲರು ಪಕ್ಷಾತೀತವಾಗಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಲಿಂಗಾಯತ ಧರ್ಮಕ್ಕೆ ಪ್ರತೇಕ ಧರ್ಮದ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟ ಗುಪ್ತಗಾಮಿನಿಯಂತೆ ನಡೆಯುತ್ತಿದೆ, ಇದರ ವಿರುದ್ಧ ನಾವು ಜಾಗೃತರಾಗಬೇಕು ಎಂದು ಇತ್ತಿಚಗೆ ಕಲವರು ಹೇಳಿಕೆ ಕೊಟ್ಟಿದ್ದಾರೆ ಎಂದು ಪ್ರಸ್ತಾಪಿಸಿದ ಪಾಟೀಲ, ನಮ್ಮ ಹೋರಾಟ ಗುಪ್ತಗಾಮಿನಿ ಅಲ್ಲ, ಮುಕ್ತಾವಾಗಿಯೇ ನಡೆಯುತ್ತಿದೆ, ಇದರಲ್ಲಿ ಯಾವುದೆ ಹೆದರಿಕೆ ಇಲ್ಲ ಎಂದು ಹೇಳಿದರು.
ಗುರು ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಲಿಂಗಾಯತ ಧರ್ಮ ಸ್ಥಾಪಿಸುವ ಮೂಲಕ ಸಮಾಜದ ಕೆಳಸ್ಥರ ಜನರನ್ನು ಒಂದು ಗೂಡಿಸಿ, ಸಮಾಜದಲ್ಲಿ ಸಮಾನತೆ ಸಂದೇಶ ಸಾರಿದ್ದಾರೆ. ಇದು ೧೨ನೇ ಶತಮಾನದಲಿಯೇ ಹುಟ್ಟಿದ ಧರ್ಮವಾಗಿದೆ. ಸಿಖ್, ಜೈನ್ ಸೇರಿದಂತೆ ಇತರ ಧರ್ಮಗಳಂತೆ ಲಿಂಗಾಯತ ಧರ್ಮವು ಸಹ ಪ್ರತ್ಯೆÃಕ ಧರ್ಮವಾಗಿದೆ. ಸಿಖ್, ಜೈನ್ ಧರ್ಮಗಳಿಗೆ ಪ್ರತ್ಯೆÃಕ ಧರ್ಮ ಎಂದು ಮಾನ್ಯತೆ ನೀಡಲಾಗಿದೆ. ಆದರೆ ಲಿಂಗಾಯತರಿಗೆ ಮಾತ್ರ ಯಾಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.
ಪ್ರತ್ಯೆÃಕ ಧರ್ಮ ಮಾನ್ಯತೆಗಾಗಿ ನಡೆದ ಹೋರಾಟಕ್ಕೆ ರಾಜಕೀಯ ಬಣ್ಣ ಬಳಿಯುವ ಮೂಲಕ ಹೋರಾಟದಲ್ಲಿ ಭಾಗವಹಿಸಿದ ನಮ್ಮ ವಿರುದ್ಧ ಷಡ್ಯಂತರ ರೂಪಿಸಲಾಯಿತು. ಇದರ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ನಾವು ವಿಫಲರಾಗಿದ್ದೆÃವೆ. ಆದರೆ ನಮ್ಮ ವಿರೋಧಿಗಳು ಚುನಾವಣೆ ಪೂರ್ವದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ನಮ್ಮ ವಿರುದ್ಧ ಷ್ಯಡ್ಯಂತರ ರೂಪಿಸಿ ಧರ್ಮ ಓಡೆಯುತಿದ್ದೆÃವೆ ಎನ್ನುವ ಆರೋಪ ಹೊರಿಸಿ ಜನರಲ್ಲಿ ಗೊಂದಲ ಸೃಷ್ಠಿಸುವ ಕೆಲಸ ಮಾಡುವಲ್ಲಿ ಅವರು ಯಶಸ್ವಿಯಾದರು ಎಂದು ಹೋರಾಟ ವಿರೋಧಿಗಳ ವಿರುದ್ಧ ಪಾಟೀಲ ವಾಗ್ದಾಳಿ ನಡೆಸಿದರು.
ಪ್ರತ್ಯೆÃಕ ಲಿಂಗಾಯತ ಧರ್ಮ ನಾವು ಸ್ಥಾಪಿಸಿದ್ದು ಅಲ್ಲ, ಪ್ರತ್ಯೆÃಕ ಧರ್ಮ ಮಾನ್ಯತೆಗಾಗಿ ಪ್ರಥಮವಾಗಿ ಬೀದರನಲ್ಲಿ ನಡೆದ ರ್ಯಾ ಲಿ ಹಾಗೂ ಬೆಳಗಾವಿಯಲ್ಲಿ ನಡೆದ ರ್ಯಾ ಲಿಯಲ್ಲಿ ನಾನಾಗಲಿ, ವಿನಯ ಕುಲಕರ್ಣಿಯಾಗಲಿ ಅಥವಾ ಬಸವರಾಜ ಹೊರಟ್ಟಿ ಅವರಾಗಲಿ ಯಾರು ಭಾಗವಹಿಸಿರಲಿಲ್ಲ. ಕಲಬುರಗಿಯಿಂದ ಹಿಡಿದು ಮುಂದೆ ನಡೆದ ರ್ಯಾ ಲಿಗಳಲ್ಲಿ ನಾವೇಲ್ಲ ಭಾಗವಹಿಸಿದ್ದೆÃವೆ. ನಮ್ಮ ವಿರುದ್ಧ ಏನೆ ಷಡ್ಯಂತರ ನಡೆಸಿದರು ಅದಕ್ಕೆ ನಾವು ಬಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಚನಾಂಕಿತ ತಿದ್ದಿದ್ದು
ಮುಗಿದ ಅಧ್ಯಾಯ
ಲಿಂಗೈಕ್ಯ ಮಾತೆ ಮಹದೇವಿ ಅವರು ಗುರು ಬಸವಣ್ಣನವರ ವಚನಾಂಕಿತ ತಿರುಚಿದ್ದಾರೆ ಎಂದು ಆರೋಪಿಸಿ ಹೋರಾಟಕ್ಕೆ ವಿರೋಧಿಸುವದನ್ನು ಇಲ್ಲಿಗೆ ನಿಲ್ಲಿಸಬೇಕು, ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೆನೆ ಎಂದು ಮನವಿ ಮಾಡಿ ಎಂ.ಬಿ.ಪಾಟೀಲ, ಪ್ರತ್ಯೆÃಕ ಧರ್ಮ ಮಾನ್ಯತೆಗಾಗಿ ಎಲ್ಲರು ಒಗ್ಗೂಡಿ ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು.
ವಚನಾಂಕಿತ ತಿದ್ದಿದ್ದು ಸರಿನೋ, ತಪ್ಪೊÃ ಅನ್ನುವದು ಚರ್ಚೆ ಬೇಡ, ಹಿಂದೆ ಕಲಬುರಗಿಯಲ್ಲಿ ನಡೆದ ರ್ಯಾ ಲಿ ವೇಳೆ ತಾವು ಮಾಡಿದ ಮನವಿಗೆ ಸ್ಪಂದಿಸಿದ ಮಾತೆ ಮಹಾದೇವಿ ಅವರು, ಅದನ್ನ ಹಿಂಪಡೆಯುತ್ತೆನೆ ಎಂದು ಘೋಷಿಸಿದ್ದಾರೆ. ಅದನ್ನ ಅಲ್ಲಿಗೆ ಮುಗಿದ ಅಧ್ಯಾಯ. ಅದರ ಬಗ್ಗೆ ಮತ್ತೆ,ಮತ್ತೆ ಚರ್ಚೆಗಳು ಬೇಡ. ಇನ್ನುಮ್ಮುಂದೆ ಪ್ರತ್ಯೆÃಕ ಧರ್ಮ ಮಾನ್ಯತೆ ಪಡೆಯುವದೊಂದೆ ನಮ್ಮ ಗುರಿಯಾಗಬೇಕು ಎಂದು ಮನವಿ ಮಾಡಿದರು.

ರಾಜ್ಯ ಸೇರಿದಂತೆ ನೆರೆ ರಾಜ್ಯಗಳಿಂದ ಸಾವಿರಾರು ಆಗಮಿಸಿದ ಬಸವಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರತ್ಯೆÃಕ ಧರ್ಮದ ಪರ ಘೋಷಣೆ ಕೂಗಿದರು. ಕೂಡಲ ಸಂಗಮ ಬಸವ ಧರ್ಮ ಪೀಠದ ಮಾತೆ ಗಂಗಾದೇವಿ, ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಜಹಿರಾಬಾದ ಸಂಸದ ಬಿ.ಬಿ.ಪಾಟೀಲ, ಸ್ಥಳೀಯ ಶಾಸಕ ಬಿ.ನಾರಾಯಣರಾವ ಸೇರಿದಂತೆ ಪೂಜ್ಯರು, ಗಣ್ಯರು, ಪ್ರಮುಖರು ಉಪಸ್ಥಿತರಿದ್ದರು.

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUAMR MULEConclusion:BASAVAKALYAN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.