ETV Bharat / state

ಬೆಳೆ ವಿಮೆ: ರಾಜ್ಯಕ್ಕೆ ಬೀದರ್ ನಂಬರ್ ಒನ್ - bidar news

ರೈತರ ಬೆಳೆ ನಷ್ಟವಾದಲ್ಲಿ ಟೋಲ್ ಫ್ರೀ ನಂಬರ್ 18002005142 ಗೆ ಕರೆ ಮಾಡಬೇಕು, ಇಲ್ಲ ಪ್ರೀಮಿಯಂ ಪಾಲಿಸಿ ನಂಬರ್ ಮತ್ತು ಜಮೀನಿನ ಸರ್ವೇ ನಂಬರ್ ತಿಳಿಸಿ ದೂರು ದಾಖಲಿಸಬೇಕು ಎಂದು ಸಂಸದ ಖೂಬಾ ಸಲಹೆ ನೀಡಿದರು.

author img

By

Published : Aug 19, 2020, 11:50 PM IST

ಬೀದರ್: ಫಸಲ್​​ ಬಿಮಾ ಯೋಜನೆ ಅಡಿಯಲ್ಲಿ ರೈತರು ಮುಂಗಾರು ಹಂಗಾಮಿನ ಬೆಳೆಗಳಿಗೆ ಬೆಳೆ ವಿಮೆ ಮಾಡುವಲ್ಲಿ ರಾಜ್ಯದಲ್ಲೇ ಬೀದರ್ ಪ್ರಥಮ ಸ್ಥಾನದಲ್ಲಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದ್ದಾರೆ.

ಈ ಕುರಿತು ಸಂಸದರ ಕಚೇರಿಯಲ್ಲಿ ವಿಮಾ ಕಂಪನಿ ಉದ್ಯೋಗಿಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬೆಳೆ ವಿಮೆ ಕಂತು ಕಟ್ಟುವಲ್ಲಿ ಬೀದರ್​ನ ರೈತರು ಸಕ್ರಿಯರಾಗಿ, ಹೆಚ್ಚು ವಿಮೆ ಮಾಡಿಸಿದ್ದಾರೆ ಎಂದು ಭಗವಂತ ಖೂಬಾ ಸಂತಸ ವ್ಯಕ್ತಪಡಿಸಿದರು.

ಫಸಲ್​​ ಭಿಮಾ ಯೋಜನೆ
ಫಸಲ್​​ ಭಿಮಾ ಯೋಜನೆ

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಹಿನ್ನೆಲೆ ಯಾವ ರೈತರ ಬೆಳೆ ಹಾನಿಯಾಗಿದೆಯೊ ಅವುಗಳನ್ನು ಪರಿಶೀಲನೆ ಮಾಡುವಂತೆ ವಿಮಾ ಕಂಪನಿಗೆ ಸೂಚನೆ ನೀಡಲಾಗಿದೆ. ಬೆಳೆ ನಷ್ಟಕ್ಕೊಳಗಾದ ಅನ್ನದಾತ ಸಂಕಷ್ಟಕ್ಕೆ ಸಿಲುಕಬಾರದು. ಜವಾಬ್ದಾರಿಯಿಂದ ಬೆಳೆ ಹಾನಿಯ ವಿಮೆ ಮಂಜೂರು ಮಾಡುವಂತೆ ಕಂಪನಿಗಳಿಗೆ ಸೂಚಿಸಿದ್ದಾರೆ.

ರೈತರ ಬೆಳೆ ನಷ್ಟವಾದಲ್ಲಿ ಟೋಲ್ ಫ್ರೀ ನಂಬರ್ 18002005142 ಗೆ ಕರೆ ಮಾಡಬೇಕು, ಇಲ್ಲ ಪ್ರೀಮಿಯಂ ಪಾಲಿಸಿ ನಂಬರ್ ಮತ್ತು ಜಮೀನಿನ ಸರ್ವೇ ನಂಬರ್ ತಿಳಿಸಿ ದೂರು ದಾಖಲಿಸಬೇಕು ಎಂದು ಖೂಬಾ ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.